ಟೆನ್ನಿಸ್ ಬಾಲ್ ನಿಂದ ಪಿಯಾನೋ ನುಡಿಸಿ ಕ್ರಿಸ್ಮಸ್ ಶುಭಾಶಯ ತಿಳಿಸಿದ ಗ್ರೇಟ್ ಪರ್ಸನ್..!

ಇನ್ನೇನು ಕೆಲವೇ ಗಂಟೆಗಳಲ್ಲಿ ಕ್ರಿಸ್ಮಸ್ ಹಬ್ಬ ಆಚರಣೆಗೆ ಇಡೀ ವಿಶ್ವವೇ ಕಾದು ಕುಳಿತಿದೆ. ಈ ವೇಳೆ ಕ್ರಿಸ್ಮಸ್ ಹಾಡುಗಳನ್ನು ಹಾಡುವುದು ಕಾಮನ್. ಆದರೆ ಇಲ್ಲೊಬ್ಬ ವ್ಯಕ್ತಿ ವಿಶೇಷವಾಗಿ ಕ್ರಿಸ್ಮಸ್ ಹಾಡನ್ನು ನುಡಿಸಿದ್ದಾನೆ. ಆ ಮೂಲಕ ಜನರಿಗೆ ಶುಭಾಶಯಗಳನ್ನು ಕೋರಿದ್ದಾನೆ. ಸದ್ಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಎಸ್… ಫ್ಲೋರಿಡಾ ಮೂಲದ ಚಾರ್ಲ್ಸ್ ಪೀಚಾಕ್ ಅವರು ಟೆನ್ನಿಸ್ ಬಾಲ್ ನಿಂದ ಪಿಯಾನೋ ನುಡಿಸಿ ‘ವಿ ವಿಶ್ ಯು ಎ ಮೆರ್ರಿ ಕ್ರಿಸ್‌ಮಸ್’ ರಾಗವನ್ನು ನುಡಿಸಿದ್ದಾರೆ. ಇನ್ಸ್ಟಾಗ್ರಾಮ್ ಬಳಕೆದಾರರಾದ ಚಾರ್ಲ್ಸ್ ಪೀಚಾಕ್ ಕಿರು ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದು ನೆಟ್ಟಿಗರು ಇದನ್ನು ಆನಂದಿಸಿದ್ದಾರೆ.

ಚಾರ್ಲ್ಸ್ ಅವರ ವೀಡಿಯೊವನ್ನು ನೋಡಿದ ನಂತರ ನೆಟ್ಟಿಗರು ಸಂತೋಷ ವ್ಯಕ್ತ ಪಡಿಸಿದ್ದು, ಪೋಸ್ಟ್ನ ಕಾಮೆಂಟ್ಗಳ ವಿಭಾಗದಲ್ಲಿ ಶ್ಲಾಘಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.