ಕೊರೊನಾ ಸಮರದಲ್ಲಿ ಗೆದ್ದು ಹಾರಲು ಸಿದ್ಧರಾದ ಏರ್ ಇಂಡಿಯಾ ಪೈಲಟ್…!

ವಿಶ್ವದಾದ್ಯಂತ ರಣಕೇಕೆ ಹಾಕುತ್ತಿರುವ ಕೊರೊನಾ ವಿರುದ್ಧದ ಸಮರದಲ್ಲಿ ವಿಜಯ ಸಾಧಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪೈಲಟ್ ಬಿಂದು ಸೆಬಾಸ್ಟಿಯನ್‌ ಸದ್ಯ ಹಾರಲು ರೆಡಿಯಾಗಿದ್ದಾರೆ. ಕೇವಲ ಪೈಲೆಟ್ ಮಾತ್ರವಲ್ಲ, ಕೊರೊನಾ ಗೆದ್ದು ಪುನ: ತಮ್ಮ ಕೆಲಸಗಳಲ್ಲಿ ನಿರತರಾಗಿರುವ ಸಾಕಷ್ಟು ಜನ ನಮ್ಮ ನಡುವೆ ಇದ್ದಾರೆ.

ಹೌದು…. ಕೊರೊನಾ ಭೀತಿಯಿಂದ ಜೀವನ ಮಾಡುತ್ತಿರುವ ಪ್ರತಿಯೊಬ್ಬರಿಗೂ ಇದೊಂದು ಪಾಠವಾಗಬೇಕಿದೆ. ಪೈಲಟ್ ಬಿಂದು ಸೆಬಾಸ್ಟಿಯನ್‌ ಗೆ  (49) ಕೆಲವು ದಿನಗಳ ಹಿಂದೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇವರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ (ಎಂಸಿಎಚ್) ಚಿಕಿತ್ಸೆ ಪಡೆದು ಗುಣಮುಖರಾಗಿದ್ದು ಭಾನುವಾರ ಬಿಡುಗಡೆ ಮಾಡಲಾಗಿದೆ.

“ನಾನು ಎಂಸಿಎಚ್‌ನಿಂದ ಉತ್ತಮ ಚಿಕಿತ್ಸೆಯನ್ನು ಪಡೆದಿದ್ದೇನೆ. ಆರೋಗ್ಯ ಇಲಾಖೆ ಮತ್ತು ವೈದ್ಯರ ಬೆಂಬಲಕ್ಕಾಗಿ ನನ್ನ ತುಂಬಾ ಕೃತಜ್ಞತೆಗಳು. ನಾನು ಮತ್ತೆ ರಕ್ಷಣಾ ಕಾರ್ಯಾಚರಣೆಯ ಭಾಗವಾಗಲು ಮುಂದಾಗಿದ್ದೇನೆ, ರೋಗಲಕ್ಷಣಗಳು ಸೌಮ್ಯವಾಗಿದ್ದರೂ, ಎಲ್ಲರೂ ತಕ್ಷಣ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು ” ಎಂದು ಬಿಂದು ಸಲಹೆಯೊಂದಿಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಮೇ 31 ರಂದು ಬಿಂದು ಅವರ ಸ್ವ್ಯಾಬ್ ಮಾದರಿಯನ್ನು ಪರೀಕ್ಷೆ ನಡೆಸಿದ ನಂತರ ಕೊರೊನಾಸೋಂಕು ಇರುವುದು ದೃಢಪಟ್ಟಿದೆ. ಕೂಡಲೇ ಅವರನ್ನು ಪ್ರತ್ಯೇಕ ವಾರ್ಡ್‌ಗೆ ದಾಖಲಿಸಲಾಯಿತು. ನಂತರ ಅವರು ಗುಣಮುಖರಾಗಿದ್ದಾರೆ. ಚೇತರಿಸಿಕೊಂಡಿದ್ದಕ್ಕಾಗಿ ಅವರನ್ನು ಅಭಿನಂದಿಸಿದ ಆರೋಗ್ಯ ಸಚಿವ ಕೆ ಕೆ ಶೈಲಾಜಾ ಅವರು ಕೋವಿಡ್ ವಿರುದ್ಧದ ದೇಶದ ಹೋರಾಟದಲ್ಲಿ ವಿಮಾನಯಾನ ನೌಕರರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ತಿಳಿಸಿದರು.

“ಬಿಂದು ಸೆಬಾಸ್ಟಿಯನ್ ಅವರಂತಹ ನೌಕರರು ರಾಜ್ಯಕ್ಕೆ ಹೆಮ್ಮೆ. ವಿದೇಶದಲ್ಲಿ ಸಿಲುಕಿರುವ ನಮ್ಮ ಜನರನ್ನು ರಕ್ಷಿಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಅನಾರೋಗ್ಯ ಪೀಡಿತರನ್ನು ಸ್ಥಳಾಂತರಿಸುವಾಗ, ವಿಮಾನಯಾನ ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಅಷ್ಟೇ ಮುಖ್ಯ. ರಾಜ್ಯದಿಂದ ಹೊರಹೋಗುವ ನೌಕರರು ಕೋವಿಡ್ -19 ತಡೆಗಟ್ಟುವಲ್ಲಿ ಉತ್ತಮ ತರಬೇತಿ ಪಡೆಯುತ್ತಿದ್ದಾರೆ. ಅವರು ಆರೋಗ್ಯ ಇಲಾಖೆ ನೀಡಿದ ನಿರ್ದೇಶನಗಳನ್ನು ಪಾಲಿಸಬೇಕು, ”ಎಂದು ಅವರು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights