Fact check: ಪಂಜಾಬ್‌ನಲ್ಲಿ AAP ಕಾರ್ಯಕರ್ತರು ಗೂಂಡಾಗಿರಿ ನಡೆಸಿಲ್ಲ

ಪಂಜಾಬ್‌ನಲ್ಲಿ ಎಎಪಿ ಪಕ್ಷವು ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ನಂತರ ಅದರ ಬೆಂಬಲಿಗರು ಗೂಂಡಾಗಿರಿ ನಡೆಸುತ್ತಿದ್ದಾರೆ ಎಂಬ ಹೇಳಿಕೆಯಿರುವ ಮತ್ತು ಅದಕ್ಕೆ ಸಂಬಂಧಿಸಿದ ಘಟನೆಗಳ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.  ಪಂಜಾಬ್‌ನ ಎಎಪಿ ಬೆಂಬಲಿಗರು ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ತಮಗೆ ಮನಬಂದಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿಕೆಯೊಂದಿಗೆ ಹಲವು ವಿಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ. ಹಾಗಿದ್ದರೆ ವೈರಲ್ ವಿಡಿಯೊದಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ವಿಡಿಯೊ 1

ಯೂಟ್ಯೂಬ್‌ನಲ್ಲಿ, ಅದೇ ವೀಡಿಯೊವನ್ನು ಅಕ್ಟೋಬರ್ 2014 ರಲ್ಲಿ ಪೋಸ್ಟ್ ಮಾಡಿರುವುದನ್ನು ಕಾಣಬಹುದು. ಅಲ್ಲದೆ, ವೀಡಿಯೊದಲ್ಲಿನ ಘಟನೆಯ ಕುರಿತು ‘ಡೈಲಿ ಮೇಲ್‘ ಆಗಸ್ಟ್ 2014 ರಲ್ಲಿ ಲೇಖನವನ್ನು ಪ್ರಕಟಿಸಿತು. 2014 ಹಳೆಯ ವಿಡಿಯೊವನ್ನು ತಪ್ಪಾಗಿ ಹಂಚಿಕೊಂಡು ಸುಳ್ಳು ಹೇಳಿಕೆಯೊಂದಿಗೆ ಪ್ರತಿಪಾದಿಸಲಾಗಿದೆ.

ವಿಡಿಯೊ 2

ಪಂಜಾಬ್‌ನಲ್ಲಿ ಎಎಪಿ ಚುನಾವಣೆಯಲ್ಲಿ ಗೆದ್ದ ನಂತರ ಖಲಿಸ್ತಾನ್‌ ಪರ ಘೋಷಣೆ ಕೂಗಿ  ಬೇಡಿಕೆಯ ಮೆರವಣಿಗೆಯನ್ನು ಮಾಡಿದ್ದಾರೆ ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ಮಾಧಯಮಗಳಲ್ಲಿ ವೈರಲ್ ಆಗುತ್ತಿದೆ. ಈ ವೈರಲ್ ವೀಡಿಯೋದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವಿಡಿಯೊವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ ವೈರಲ್ ವಿಡಿಯೊ ಹಳೆಯ ಘಟನೆಗೆ ಸಂಬಂಧಿಸಿದ್ದು ಎಂದು ತಿಳಿದುಬಂದಿದೆ. ಅಂದರೆ ಇದೇ ವೀಡಿಯೊವನ್ನು 2022 ರ ಫೆಬ್ರವರಿಯಲ್ಲಿ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾಗಿದೆ ದಿನಾಂಕ, 10 ಮಾರ್ಚ್ 2022 ರಂದು ಪಂಜಾಬ್ ಅಸೆಂಬ್ಲಿ ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸುವ ಮೊದಲು. ಫೆಬ್ರವರಿ 2022 ರಲ್ಲಿ  ಇದೇ ರೀತಿಯ ಮೆರವಣಿಗೆಯ ವೀಡಿಯೊಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ದೀಪ್ ಸಿಧು ಸ್ಮರಣಾರ್ಥ ಭಟಿಂಡಾದಲ್ಲಿ ಮೆರವಣಿಗೆ ನಡೆಸಲಾಗಿದೆ ಎಂದು ವರದಿಯಾಗಿದೆ. ಹೆಚ್ಚಿನ ವಿವರಗಳನ್ನು ಇಲ್ಲಿ ಓದಬಹುದು.

ಹಾಗಾಗಿ ಈ ವಿಡಿಯೋದಲ್ಲಿ ಪ್ರತಿಪಾದಿಸಲಾಗಿರುವ ಸುದ್ದಿ ಸುಳ್ಳಾಗಿದ್ದು. ಹಳೆಯ ಮತ್ತು ಸಂಬಂಧವಿಲ್ಲದ ವಿಡಿಯೋವನ್ನು ವೈರಲ್ ಮಾಡುವ ಮೂಲಕ ಸುಳ್ಳು ಸುದ್ದಿಯನ್ನು ಹಂಚುತ್ತಿದ್ದಾರೆ.

ವಿಡಿಯೊ 3

ಪಂಜಾಬ್‌ನಲ್ಲಿ ಎಎಪಿ ಭರ್ಜರಿಯಾಗಿ ಗೆದ್ದು ಸರ್ಕಾರ ರಚಿಸಲು ಮುಂದಾಗಿದೆ, ಈ ಹೊತ್ತಲ್ಲಿ ಭಗವಂತ್ ಮಾನ್ ಸರ್ಕಾರದಲ್ಲಿ ಪೊಲೀಸರು ಯಾವ ರೀತಿ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ ನೋಡಿ ಎಂಬ ಹೇಳಿಕೆಯೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಸುಮಾರು ವರ್ಷಗಳಿಂದಲೂ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇದೆ. 2017 ರಿಂದಲೂ ಅದೇ ವೀಡಿಯೊವನ್ನು ಅಂತರ್ಜಾಲದಲ್ಲಿ ಕಾಣಬಹುದು. ಕೆಲವು ಹಳೆಯ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

 

ಒಟ್ಟಾರೆಯಾಗಿ ಹೇಳುವುದಾದರೆ ಪಂಜಾಬ್‌ನಲ್ಲಿ ಎಎಪಿ ಭಾರಿ ಬಹುಮತದೊಂದಿಗೆ ಸರ್ಕಾರ ರಚಿಸುತ್ತಿರು ಹೊತ್ತಲ್ಲಿ ಎಎಪಿ ಪಕ್ಷಕ್ಕೆ ಮುಜುಗರ ಉಂಟುಮಾಡಲು ಸಾಮಾಜಿಕ ಮಾಧ್ಯಗಳಲ್ಲಿ ಹಳೆಯ ಮತ್ತು ಸಂಬಂಧವಿಲ್ಲದ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸುಳ್ಳು ಸುದ್ದಿಯನ್ನು ಹಂಚುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕೃಪೆ: ಫ್ಯಾಕ್ಟ್‌ಲಿ


ಇದನ್ನು ಓದಿರಿ: Fact check: ಹಿಂದೂ ದೇವಾಲಯದ ಅರ್ಚಕರನ್ನು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯಿಸಿದ್ದು ನಿಜವೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights