ಒಮಿಕ್ರಾನ್ ವೈರಸ್ ಮಕ್ಕಳು ಹೆಚ್ಚು ಅಪಾಯಕಾರಿಯೇ?: WTO ಆರೋಗ್ಯ ತಜ್ಞೆ ಹೇಳಿದ್ದೇನು?
ಕೊರೊನಾ ಸೋಂಕಿನ ಹೊಸ ರೂಪಾಂತರಿ ಒಮಿಕ್ರಾನ್ ವೈರಸ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಹಲವರಲ್ಲಿ ಈ ವೈರಸ್ ಬಗ್ಗೆ ಆತಂಕ ಕಾಡುತ್ತಿದೆ. ಅಲ್ಲದೆ, ಈ ವೈರಸ್ ಮಕ್ಕಳಿಗೆ ಹೆಚ್ಚು ಅಪಾಯಕಾರಿಯೇ ಎಂದು ಪ್ರಶ್ನೆಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ WTOದ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್, “ಒಮಿಕ್ರಾನ್ ಸೋಂಕು ಮಕ್ಕಳು ಹಾಗೂ ಲಸಿಕೆ ಪಡೆಯದವರಿಗೆ ಅಪಾಯಕಾರಿಯಾಗಿದ್ದು, ಅವರು ಈ ಸೋಂಕಿಗೆ ಬಲಿಯಾಗುವ ಸಾಧ್ಯತೆ ಇದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಮಕ್ಕಳಿಗೆಯೂ ಕೊರೊನಾ ಲಸಿಕೆಯನ್ನು ನೀಡುವ ಬಗ್ಗೆ ಉಲ್ಲೇಖ ಮಾಡಿ ಮಾತನಾಡಿದ ಡಾ. ಸೌಮ್ಯ ಸ್ವಾಮಿನಾಥನ್, “ಕೆಲವು ದೇಶಗಳು ಈಗಾಗಲೇ ಮಕ್ಕಳಿಗೂ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಆದರೆ, ಎಲ್ಲಾ ದೇಶಗಳು ಇನ್ನೂ ಮಕ್ಕಳಿಗೆ ಲಸಿಕೆ ನೀಡಲು ಆರಂಭಿಸಿಲ್ಲ. ಅಲ್ಲದೆ, ಒಮಿಕ್ರಾನ್ ಪರಿಣಾಮದ ಬಗ್ಗೆ ಇನ್ನೂ ಖಚಿತತೆ ಇಲ್ಲ. ಡೆಲ್ಟಾ ವೈರಸ್‌ಗೆ ಹೋಲಿಸಿದರೆ, ಇದರಿಂದ ಸಾವುಗಳು ಸಂಭವಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ. ಹೀಗಾಗಿ, ಅದರ ಪ್ರಭಾವ ಯಾರ ರೀತಿಯಲ್ಲಿರಲಿದೆ, ನಾವು ಮಕ್ಕಳ ಮೇಲೆ ಒಮಿಕ್ರಾನ್ ಪ್ರಭಾವ ಯಾವ ಮಟ್ಟದಲ್ಲಿರಲಿದೆ ಎಂದು ತೀರ್ಮಾನಿಸಲು ಡೇಟಾಕ್ಕಾಗಿ ಕಾಯುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
ಈಗಾಗಲೇ ಕೊರೊನಾ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿರುವ ಜನರಿಗೂ 90 ದಿನಗಳ ನಂತರ ಒಮಿಕ್ರಾನ್ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಒಮಿಕ್ರಾನ್ ಬಗ್ಗೆ ಆಧಿಕ ಡೇಟಾದ ಅಗತ್ಯವಿದೆ. ಎಷ್ಟು ತೀವ್ರವಾಗಿದೆ ಎಂದು ತಿಳಿಯಲು ನಾವು ಆಸ್ಪತ್ರೆಗೆ ದಾಖಲಾದ ದರಗಳನ್ನು ಅಧ್ಯಯನ ಮಾಡಲು ಎರಡು ಮೂರು ವಾರಗಳವರೆಗೆ ಕಾಯಬೇಕು. ಯಾವುದೇ ಸಾಕ್ಷ್ಯಗಳು ಇಲ್ಲದೆ ಅಂದಾಜು ಮಾಡಿ ಹೇಳುವುದನ್ನು ನಾವು ತಪ್ಪಿಸಬೇಕಾದರೆ, ನಮಗೆ ಬೇರೆ ದೇಶಗಳ ನಡುವೆ ಸಂಘಟಿತ ಒಪ್ಫಂದ ಮಾಡುವ ಅಗತ್ಯವಿದೆ” ಎಂದೂ ಅವರು ಹೇಳಿದ್ದಾರೆ.
ವಿವಿಧ ಡೇಟಾಗಳು ಮತ್ತು ಅಧಿಕೃತ ಮಾಹಿತಿ ದೊರೆಯುವವರೆಗೂ ಮತ್ತು ದೊರೆತ ನಂತರವೂ ನಾವು “ಕೊರೊನಾ ರೂಪಾಂತರಿ ವಿರುದ್ಧ ನಾವು ಜಾಗೃತವಾಗಿರಬೇಕು. ಮಾಸ್ಕ್ ಧರಿಸುವುದನ್ನು ಮುಂದುವರೆಸಬೇಕು. ವಯಸ್ಕರು ಸಂಪೂರ್ಣವಾಗಿ ಲಸಿಕೆ ಪಡೆಯಬೇಕು” ಎಂದು ಸೌಮ್ಯಾ ಸ್ವಾಮಿನಾಥನ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ರೂಪಾಂತರಿ ಒಮಿಕ್ರಾನ್ ಪ್ರಪಂಚಕ್ಕೆ ವರದಾನವಾಗುವ ಸಾಧ್ಯತೆ ಇದೆ: ಆರೋಗ್ಯ ತಜ್ಞರು