ಜೂಮ್‌ ಸಭೆ ನಡೆದದ್ದು ಮೂರೇ ನಿಮಿಷ: ಒಂದೇ ಕಂಪನಿಯ 900 ಉದ್ಯೋಗಿಗಳ ವಜಾ!

ಮೂರು ನಿಮಿಷಗಳ ಕಾಲ ನಡೆದ ಕಂಪೆನಿಯ ಜೂಮ್ ಸಭೆಯಲ್ಲಿ ಒಂದೇ ಬಾರಿಗೆ ಸುಮಾರು 900 ಉದ್ಯೋಗಿಗಳನ್ನು ಕಂಪನಿಯ ಸಿಇಒ ವಜಾಗೊಳಿಸಿರುವ ವಿಲಕ್ಷಣ ಘಟನೆಯೊಂದು ನಡೆದಿದೆ.

ಅಮೆರಿಕ ಮೂಲದ ಸಂಸ್ಥೆಯಾದ Better.com ನ ಸಿಇಒ ವಿಶಾಲ್ ಗಾರ್ಗ್ ಅವರು ಈ ನಿರ್ಧಾರವನ್ನು ಝೂಮ್ ಸಭೆಯಲ್ಲಿ ಪ್ರಕಟಿಸಿದ್ದು, “ನೀವು ಈ ಜೂಮ್‌ ಸಭೆಯಲ್ಲಿದ್ದರೆ, ವಜಾಗೊಳ್ಳುತ್ತಿರುವ ದುರದೃಷ್ಟಕರ ಗುಂಪಿನ ಭಾಗವಾಗಿದ್ದೀರಿ ಎಂದರ್ಥ…ನಿಮ್ಮ ಉದ್ಯೋಗವನ್ನು ತಕ್ಷಣವೇ ಕೊನೆಗೊಳಿಸಲಾಗುತ್ತದೆ” ಎಂದು ಅವರು ಹೇಳಿದ್ದಾರೆ.

ವಜಾಗೊಂಡಿರುವ ಉದ್ಯೋಗಿಗಳು ದಿನಕ್ಕೆ ಎರಡು ಗಂಟೆ ಮಾತ್ರ ಕೆಲಸ ಮಾಡುವುದರಿಂದ ಹೆಚ್ಚು ಕೆಲಸ ಮಾಡುವ ಉದ್ಯೋಗಿಗಳು ಮತ್ತು ಕಂಪನಿಯ ಗ್ರಾಹಕರಿಂದ ಅವರು ‘ಕದಿಯುತ್ತಿದ್ದಾರೆ’ ಎಂದು ವಿಶಾಲ್‌ ಗಾರ್ಗ್ ಆರೋಪಿಸಿದ್ದಾರೆ.

“ಮಾರುಕಟ್ಟೆ ಬದಲಾಗಿದೆ. ನಾವು ಬದುಕಬೇಕಾದರೆ  ಅದರೊಂದಿಗೆ ಹೊಂದಿಕೊಂಡು ಚಲಿಸಬೇಕಾಗಿದೆ. ಹೀಗಾದರೆ ಮಾತ್ರ ಆಶಾದಾಯಕವಾಗಿ, ನಾವು ಅಭಿವೃದ್ಧಿ ಹೊಂದಬಹುದು. ನಮ್ಮ ಧ್ಯೇಯವನ್ನು ತಲುಪಿಸಬಹುದು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮತಾಂತರ ಆರೋಪ: ಶಾಲೆಯ ಮೇಲೆ ಬಜರಂಗದಳ ಕಾರ್ಯಕರ್ತರ ದಾಳಿ; ವಿದ್ಯಾರ್ಥಿಗಳಲ್ಲಿ ಆತಂಕ

ರಜಾ ಅವಧಿಗೆ ಮುನ್ನವೇ ನೌಕರರನ್ನು ವಜಾಗೊಳಿಸಿರುವುದು ಬೇಸರ ತಂದಿದೆಯಾದರೂ ಅವರಿಗೆ ಸೂಕ್ತ ಸೌಲಭ್ಯ ಮತ್ತು ಪ್ಯಾಕೇಜ್ ನೀಡಲಾಗುವುದು ಎಂದು ಕಂಪನಿಯ CFO ಕೆವಿನ್ ರಯಾನ್ CNN ಬ್ಯುಸಿನೆಸ್‌ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೆಲಸ ಕಳೆದು ಕೊಂಡಿರುವವರಲ್ಲಿ ಅಮರಿಕಾ ಹಾಗೂ ಭಾರತದ ಉದ್ಯೋಗಿಗಳು ಸೇರಿದ್ದಾರೆ ಎಂದು ವರದಿಗಳು ಹೇಳಿವೆ.

“ಮೋಸ ಹೋದ ಅನುಭವವಾಗುತ್ತಿದೆ” ಎಂದು ಸಭೆಯಲ್ಲಿ ವಜಾಗೊಂಡ ಕಂಪನಿಯ ಮಾಜಿ ಉದ್ಯೋಗಿಯೊಬ್ಬರು ತಿಳಿಸಿದ್ದಾರೆಂದು TNIE ವರದಿ ಮಾಡಿದೆ. “ಆಂತರಿಕವಾಗಿ ತಂಡದ ಒಡನಾಟ ತುಂಬಾ ಚೆನ್ನಾಗಿತ್ತು ಆದರೆ ಆಡಳಿತವು ನಮ್ಮನ್ನು ಕೈಬಿಟ್ಟಿದೆ” ಎಂದು ಹೆಸರು ಹೇಳಲು ಇಚ್ಛಿಸದ ಮಾಜಿ ಉದ್ಯೋಗಿಯೊಬ್ಬರು ಹೇಳಿದ್ದಾರೆ. “ವಿಶಾಲ್‌ ಗಾರ್ಗ್‌ ತುಂಬಾ ಕೆಟ್ಟ ಕಾರ್ಯನಿರ್ವಾಹಕನಾಗಿದ್ದು, ಒಮ್ಮೆ ತನ್ನ ಉದ್ಯೋಗಿಗಳನ್ನು ‘ಕಿವುಡ ಡಾಲ್ಫಿನ್‌ಗಳ ಗುಂಪು’ ಎಂದು ಕರೆದಿದ್ದರು” ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಬಿಜೆಪಿ ಮುಖಂಡನಿಂದ ಕಿರುಕುಳ: ಮಹಿಳೆ ಮತ್ತು ಆಕೆಯ ಮಗ ಸುಟ್ಟಗಾಯಗಳಿಂದ ಸಾವು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights