ಬಡ ಮಕ್ಕಳಿಗೆ ಧನಸಹಾಯ ಮಾಡಲು ‘ಗ್ಯಾಜೆಟ್ ಬ್ಯಾಂಕ್’ ಆರಂಭಿಸಿದ ಜಾರ್ಖಂಡ್ ಪೊಲೀಸರು!

ವಿಶಿಷ್ಟವಾದ ಪ್ರಯತ್ನಕ್ಕೆ ಜಾರ್ಖಂಡ್ ಪೋಲಿಸರು ಮುಂದಾಗಿದ್ದಾರೆ. ಬಡಮಕ್ಕಳಿಗೆ ಸಹಾಯ ಮಾಡಲು ‘ಗ್ಯಾಜೆಟ್ ಬ್ಯಾಂಕ್’ ಅನ್ನು ಸ್ಥಾಪಿಸಿದ್ದು, ಸಾರ್ವಜನಿಕರು ತಮ್ಮ ಹಳೆಯ ಎಲೆಕ್ಟ್ರಾನಿಕ್ ಸಾಧನಗಳಾದ ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಗಳನ್ನು ದಾನ ಮಾಡಲು ಅವರು ವಿನಂತಿದ್ದಾರೆ. ಈ ಸಾಧನಗಳನ್ನು ಹಿಂದುಳಿದ ಮಕ್ಕಳು ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಅನುಕೂಲ ಮಾಡಿಕೊಡಲು ಬಳಸಲಾಗುವುದು ಎಂದು ಹೇಳಿದ್ದಾರೆ.

ಕಡಿಮೆ ಆದಾಯದ ಕುಟುಂಬಗಳಿಗೆ ಸೇರಿದ ಮಕ್ಕಳಿಗೆ ಸ್ಮಾರ್ಟ್‌ಫೋನ್‌ಗಳ ಕೊರತೆಯಿದೆ. ರಾಜ್ಯ ಸರ್ಕಾರದಲ್ಲಿ ಲಭ್ಯವಿರುವ ದತ್ತಾಂಶದ ಪ್ರಕಾರ, ಸರ್ಕಾರಿ ಶಾಲೆಗಳ ಶೇಕಡಾ 65 ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳ ಕುಟುಂಬಗಳು ಸ್ಮಾರ್ಟ್‌ಫೋನ್‌ಗಳನ್ನು ಹೊಂದಿಲ್ಲವಾದ್ದರಿಂದ ಆನ್‌ಲೈನ್ ತರಗತಿಗಳಲ್ಲಿ ಹಾಜರಾಗಲು ಸಾಧ್ಯವಾಗುತ್ತಿಲ್ಲ.

ಹೊಸದಾಗಿ ಖರೀದಿಸಿದ ಮೊಬೈಲ್ ಫೋನ್ ಮತ್ತು ಕಂಪ್ಯೂಟರ್ ಸಾಧನಗಳನ್ನು ಒಂದೆರಡು ವರ್ಷಗಳ ನಂತರ ಸಾಮಾನ್ಯವಾಗಿ ಉಪಯೋಗಿಸುವುದನ್ನು ಜನರು ನಿಲ್ಲಿಸುತ್ತಾರೆ. ಅಂತಹ, ಸಾಧನಗಳನ್ನು ‘ಗ್ಯಾಜೆಟ್‌ ಬ್ಯಾಂಕ್‌’ಗೆ ನೀಡಿದರೆ, ಅದರಿಂದ ಹಿಂದುಳಿದ ವರ್ಗಗಳ ಮಕ್ಕಳು ಉಪಯೋಗ ಪಡೆಯುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತೀಯ ಮಾಧ್ಯಮಗಳ ಬಗ್ಗೆ ಮೋದಿ ಎದುರೇ ವ್ಯಂಗ್ಯವಾಡಿದ ಬೈಡನ್?

ಪೊಲೀಸ್ ಠಾಣೆಗೆ ಬರುವ ಎಲ್ಲಾ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಅಥವಾ ಟ್ಯಾಬ್ಲೆಟ್‌ಗಳನ್ನು ಜಿಲ್ಲಾ ಕೇಂದ್ರಕ್ಕೆ ಕಳುಹಿಸಬೇಕು. ಅಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್‌ಪಿ) ಶಾಲೆಯ ಪ್ರಾಂಶುಪಾಲರ ಶಿಫಾರಸಿನ ಮೇರೆಗೆ ಯಾವುದೇ ನಿರ್ಗತಿಕ ವಿದ್ಯಾರ್ಥಿಗೆ ಅವುಗಳನ್ನು ಹಸ್ತಾಂತರಿಸುತ್ತಾರೆ ಎಂದು ಪೊಲೀಸ್ ಮಹಾನಿರ್ದೇಶಕ ನಿರಜ್ ಸಿನ್ಹಾ ಹೇಳಿದ್ದಾರೆ.

ರಾಜ್ಯ ಪೊಲೀಸ್ ಪ್ರಧಾನ ಕಚೇರಿಯು ಕಳೆದ ಎರಡು ತಿಂಗಳಲ್ಲಿ 1,477 ಸ್ಮಾರ್ಟ್ ಫೋನ್‌ಗಳು, 32 ಟ್ಯಾಬ್‌ಗಳು, 21 ಲ್ಯಾಪ್‌ಟಾಪ್‌ಗಳು ಮತ್ತು 36 ಕಂಪ್ಯೂಟರ್‌ಗಳನ್ನು ಸ್ವೀಕರಿಸಿದೆ. ಶಾಲಾ ಪ್ರಾಂಶುಪಾಲರ ಶಿಫಾರಸಿನಂತೆ ಇವುಗಳನ್ನು ಕ್ರಮೇಣವಾಗಿ ಮಕ್ಕಳಿಗೆ ವಿತರಿಸಲಾಗುತ್ತಿದೆ ಎಂದು ವರದಿಯಾಗಿದೆ.

“ಇದು ಡಿಜಿಪಿ ಸಿನ್ಹಾ ಅವರ ಚಿಂತನೆಯಾಗಿದ್ದು, ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಜಾರ್ಖಂಡ್‌ನಾದ್ಯಂತ ನಡೆಸಲಾಗುತ್ತಿದೆ. ಎಲ್ಲಾ ಜಿಲ್ಲೆಯ ಎಸ್‌ಪಿಗಳು ಮತ್ತು ಅಧಿಕಾರಿಗಳು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಜಾರ್ಖಂಡ್ ಪೊಲೀಸ್ ವಕ್ತಾರ ಎವಿ ಹೋಮ್ಕರ್ ಹೇಳುತ್ತಾರೆ.

“ನಾವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಆದ್ದರಿಂದ ತಮ್ಮ ಎಲೆಕ್ಟ್ರಾನಿಕ್ ಸಾಧನಗಳನ್ನುಜ ದಾನ ಮಾಡುವ ಜನರು ಭವಿಷ್ಯದಲ್ಲಿ ಯಾವುದೇ ತೊಂದರೆಯನ್ನು ಎದುರಿಸುವುದಿಲ್ಲ” ಎಂದು ಹೋಮ್ಕರ್ ತಿಳಿಸಿದ್ದಾರೆ.

ಇದನ್ನೂ ಓದಿ: ಬರ್ತಡೇ ಪಾರ್ಟಿಗೆ ಕರೆದು ಮಹಿಳಾ ಪೇದೆ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರ ಬಂಧನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights