ಅಮೆರಿಕದಲ್ಲಿ ಹಳಿತಪ್ಪಿದ ರೈಲು : ಮೂವರು ದುರ್ಮರಣ – ಹಲವರಿಗೆ ಗಾಯ!

ಚಲಿಸುತ್ತಿದ್ದ ರೈಲು ಹಳಿ ತಪ್ಪಿ ಭಾರೀ ದುರಂತ ಸಂಭವಿಸಿದ ಘಟನೆ ಅಮೇರಿಕಾದ ಮೊಂಟಾನಾದಲ್ಲಿ ನಡೆದಿದೆ.

ಅಮೆರಿಕದ ಮೊಂಟಾನಾದಲ್ಲಿ ಶನಿವಾರ ಮಧ್ಯಾಹ್ನ ರೈಲು ಹಳಿತಪ್ಪಿ ಮೂರು ಜನರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ರೈಲು ನಿರ್ವಾಹಕರು ತಿಳಿಸಿದ್ದಾರೆ. ರೈಲಿನ ಐದು ಬೋಗಿಗಳು ಉತ್ತರ ಮೊಂಟಾನಾದ ಜೋಪ್ಲಿನ್ ಬಳಿ ಶನಿವಾರ ಸಂಜೆ 4 ಗಂಟೆಗೆ (2200 GMT) ಹಳಿ ತಪ್ಪಿ ದುರಂತ ಸಂಭವಿಸಿದೆ.

“ಈ ಅಪಘಾತದ ಪರಿಣಾಮವಾಗಿ ಮೂರು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ದೃಢಪಡಿಸುತ್ತಿರುವುದನ್ನು ತಿಳಿದು ನಾವು ತುಂಬಾ ದುಃಖಿತರಾಗಿದ್ದೇವೆ” ಎಂದು ರೈಲು ನಿರ್ವಾಹಕ ಸಂಸ್ಥೆ ಹೇಳಿದೆ. ಜೊತೆಗೆ ಘಟನೆಯಲ್ಲಿ ರೈಲಿನಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿಗಳಿಗೆ ಗಾಯಗಳಾಗಿರುವ ವರದಿಯಾಗಿದೆ.

“ಸ್ಥಳೀಯ ಅಧಿಕಾರಿಗಳು ಗಾಯಗೊಂಡ ಪ್ರಯಾಣಿಕರನ್ನು ಸಾಗಿಸಲು ಮತ್ತು ಇತರ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಕೆಲಸ ಮಾಡುತ್ತಿದ್ದಾರೆ” ಎಂದು ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದ್ದು, ಸುಮಾರು 147 ಪ್ರಯಾಣಿಕರು ಮತ್ತು 13 ಸಿಬ್ಬಂದಿಗಳನ್ನು ರೈಲಿನಿಂದ ವಿಮಾನದಲ್ಲಿ ಸಾಗಿಸಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ತುಣುಕಿನಲ್ಲಿ ಜನರು ಹಳಿಗಳ ಬಳಿ ಕಾಯುತ್ತಿರುವುದನ್ನು ನೋಡಬಹುದು. ಅವರ ಪಕ್ಕದಲ್ಲಿ ಲಗೇಜ್ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಮತ್ತು ಹಲವಾರು ರೈಲು ಬೋಗಿಗಳು ಹಳಿ ತಪ್ಪಿರುವುದುನ್ನು ಚಿತ್ರದಲ್ಲಿ ನೋಡಬಹುದು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights