ಕೊರೊನಾ ರೂಪಾಂತರಿ ಒಮಿಕ್ರಾನ್ ಪ್ರಪಂಚಕ್ಕೆ ವರದಾನವಾಗುವ ಸಾಧ್ಯತೆ ಇದೆ: ಆರೋಗ್ಯ ತಜ್ಞರು

ದಕ್ಷಿಣ ಆಫ್ರಿಕಾ, ಹಾಂಕಾಂಗ್‌ನಲ್ಲಿ‌ ಕೊರೊನಾದ ಹೊಸ ರೂಪಾಂತರಿ ಓಮಿಕ್ರಾನ್(Omicron)‌ ಪತ್ತೆಯಾಗಿದೆ. ಹೀಗಾಗಿ ಈ ದೇಶಗಳಲ್ಲಿ‌‌ ಲಾಕ್‌ ಡೌನ್ ರೀತಿಯಲ್ಲಿ ಮಾರ್ಗಸೂಚಿಗಳನ್ನು ಜಾರಿ ಮಾಡಲಾಗಿದೆ. ಈ ನಡುವೆ ಈ ರೂಪಾಂತರಿಯು ಅತಿ ವೇಗವಾಗಿ ಹರಡುತ್ತದೆಯಾದರೂ, ಹೆಚ್ಚು ಮಾರಕವಲ್ಲ ಎಂದು ಹೇಳಲಾಗಿದೆ. ಹೀಗಾಗಿ, ಕೆಲವು ಆರೋಗ್ಯ ತಜ್ಞರು ರೂಪಾಂತರಿ ವೈರಸ್ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ.

ರೂಪಾಂತರಿ ಸೋಂಕಿನ ಲಕ್ಷಣಗಳು ಸೌಮ್ಯವಾಗಿವೆ ಎಂದು ದಕ್ಷಿಣ ಆಫ್ರಿಕದ ಆಸ್ಪತ್ರೆಗಳು ವರದಿ ಮಾಡಿವೆ. ಅಲ್ಲದೆ,‌ ಜೋಹಾನ್ಸ್‌ಬರ್ಗ್ ಪ್ರದೇಶದಲ್ಲಿ ಕಂಡುಬಂದ ಹೊಸ ಸೋಂಕಿತರಲ್ಲಿ 90% ಜನರಿಗೆ ಓಮಿಕ್ರಾನ್ ರೂಪಾಂತರ ತಗುಲಿದ್ದು, ಈ ಪೈಕಿ ಇಲ್ಲಿಯವರೆಗೆ ಸಾವಿನ ಪ್ರಮಾಣ ಹಾಗೂ ಆಸ್ಪತ್ರೆಯ ದಾಖಲಾತಿಗಳಲ್ಲಿ ಗಮನಾರ್ಹ ಹೆಚ್ಚಳವಾಗಿಲ್ಲ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಹೀಗಾಗಿ, ಓಮಿಕ್ರಾನ್ ಕಡಿಮೆ ಮಾರಕವಾಗಿದ್ದು, ಡೆಲ್ಟಾ ರೂಪಾಂತರಿಗಿಂತ ಸೌಮ್ಯ ಲಕ್ಷಣಗಳನ್ನು ಹೊಂದಿದೆ. ಇದು ಹೆಚ್ಚು ಸಾವುಗಳಿಗೆ ಕಾರಣವಾಗದೇ ಇರುವುದರಿಂದ ಇಂದು ವರದಾನವಾಗಬಹುದು ಎಂದು ತಜ್ಞರು ಉಲ್ಲೇಖಿಸಿದ್ದಾರೆ.

ದಕ್ಷಿಣ ಆಫ್ರಿಕಾದಾದ್ಯಂತ ನೂರಾರು ಸೋಂಕಿತ ಜನರು ವಾಕರಿಕೆ, ತಲೆನೋವು, ಆಯಾಸ ಮತ್ತು ಹೆಚ್ಚಿನ ನಾಡಿ ಬಡಿತದ ರೋಗ ಲಕ್ಷಣಗಳು ವರದಿಯಾಗಿದ್ದು ಕೋವಿಡ್‌ನ ಇತರ ರೂಪಾಂತರಗಳಲ್ಲಿ ಕಂಡುಬಂದ ರುಚಿ ಅಥವಾ ವಾಸನೆಯ ನಷ್ಟದಿಂದ ಯಾರೂ ಬಳಲಿದಂತೆ ಕಾಣುತ್ತಿಲ್ಲ. ಇದಲ್ಲದೆ ದಕ್ಷಿಣ ಆಫ್ರಿಕಾದ ಹೆಚ್ಚಿನ ವೈದ್ಯರು ಓಮಿಕ್ರಾನ್ ಸೋಂಕನ್ನು ಹೊಂದಿರುವ ರೋಗಿಗಳು ತೀವ್ರ ತಲೆನೋವು, ವಾಕರಿಕೆ ಇಲ್ಲವೇ ತಲೆತಿರುಗುವಿಕೆಯನ್ನು ಹೊಂದಿದ್ದಾರೆ ಎಂಬುದಾಗಿ ದೃಢಪಡಿಸಿದ್ದಾರೆ.

ಕೋವಿಡ್ ಹೊಸ ರೂಪಾಂತರವಾಗಿ ಮಾರ್ಪಾಡಾಗಿದೆ ಎಂದು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ ಮೊದಲ ಆಫ್ರಿಕನ್ ವೈದ್ಯೆ ಡಾ. ಏಂಜೆಲಿಕ್ ಕೊಯೆಟ್ಜಿ ಪತ್ರಿಕೆಗಳಿಗೆ ಉಲ್ಲೇಖಿಸಿರುವ ಮಾಹಿತಿಯ ಪ್ರಕಾರ ಅವರು ಚಿಕಿತ್ಸೆ ನೀಡಿದ ರೋಗಿಗಳಲ್ಲಿ ಕೋವಿಡ್ ಲಕ್ಷಣಗಳು ತುಂಬಾ ವಿಭಿನ್ನ ಹಾಗೂ ಸೌಮ್ಯವಾಗಿವೆ ಎಂದಿದ್ದಾರೆ. ರೋಗಲಕ್ಷಣಗಳು ತಕ್ಷಣವೇ ಪ್ರಭಾವ ಬೀರುವುದಿಲ್ಲವೆಂದು ತಿಳಿಸಿರುವ ಸ್ಥಳೀಯ ಪತ್ರಿಕೆಗಳು ಆಯಾಸದಿಂದ ಬಳಲುತ್ತಿರುವ ಯುವ ಜನರು ಹಾಗೂ ಹೆಚ್ಚಿನ ನಾಡಿ ಬಡಿತವನ್ನು ಹೊಂದಿರುವ ಸಣ್ಣ ಮಗು ಸೇರಿದಂತೆ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದೆ.

ದಕ್ಷಿಣ ಆಫ್ರಿಕಾದಿಂದ ಬಂದಂತಹ ಮೊದಲ ಅಂಕಿ ಅಂಶ ನೋಡುವಾಗ, ವೈರಾಲಜಿಸ್ಟ್ ಮಾರ್ಕ್ ವ್ಯಾನ್ ರಾನ್ಸ್ಟ್ ಪ್ರಕಾರ “ಓಮಿಕ್ರಾನ್ ರೂಪಾಂತರವು ಕಡಿಮೆ ರೋಗಕಾರಕವಾಗಿದ್ದರೆ ಆದರೆ ಹೆಚ್ಚಿನ ಸೋಂಕಿನೊಂದಿಗೆ, ಡೆಲ್ಟಾವನ್ನು ಬದಲಿಸಲು ಓಮಿಕ್ರಾನ್‌ಗೆ ಅವಕಾಶ ನೀಡಿದರೆ, ಇದು ತುಂಬಾ ಧನಾತ್ಮಕವಾಗಿರುತ್ತದೆ” ಎಂದು ತಿಳಿಸಿದ್ದಾರೆ.

ಪ್ರಾಥಮಿಕ ಪುರಾವೆಗಳು ರೂಪಾಂತರವು ಮರು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಡೆಲ್ಟಾ ಸೇರಿದಂತೆ ಇತರ ತಳಿಗಳಿಗಿಂತ ಹೆಚ್ಚು ವೇಗವಾಗಿ ಹರಡಬಹುದು ಎಂದು WHO ಎಚ್ಚರಿಸಿದೆ. ಓಮಿಕ್ರಾನ್ ಮರು ಸೋಂಕಿನ ಅಪಾಯವನ್ನು ಹೆಚ್ಚಿಸಿದೆ ಎಂಬುದನ್ನು ಸೂಚಿಸಲು ಆರಂಭಿಕ ಪುರಾವೆಗಳಿಗೆ ಎಂದು ತಿಳಿಸಿದ ಅವರು ದಕ್ಷಿಣ ಆಫ್ರಿಕಾದಲ್ಲಿ ರೂಪಾಂತರದ ಕ್ಷಿಪ್ರ ಹರಡುವಿಕೆಯು ಬೆಳವಣಿಗೆಯ ಪ್ರಯೋಜನ ಹೊಂದಿದೆ ಎಂದು ತಿಳಿಸಿದ್ದಾರೆ.

ಇದರ ನಡುವೆಯೇ, ಜರ್ಮನಿ, ನೆದರ್ಲ್ಯಾಂಡ್, ಬೆಲ್ಜಿಯಂ, ಆಸ್ಟ್ರೇಲಿಯಾ, ಜೆಕ್ ರಿಪಬ್ಲಿಕ್, ಇಟಲಿ ಮತ್ತು ಯುಕೆ ದೇಶಗಳಲ್ಲಿ ಓಮಿಕ್ರಾನ್ ರೂಪಾಂತರಿ ವೈರಸ್ ಹರಡುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ದೃಢಪಡಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights