ಎಎಪಿಯನ್ನು ಎದುರಿಸಲು ‘ಆಮ್ ಆದ್ಮಿ ಅವತಾರ್’?; ಸಾಮಾನ್ಯರತ್ತ ಹೊರಟ ಪಂಜಾಬ್‌ ಚನ್ನಿ ಸರ್ಕಾರ!

ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಮತ್ತು ಅವರ ಕ್ಯಾಬಿನೆಟ್ ಸಹೋದ್ಯೋಗಿಗಳು ಉತ್ತರ ರಾಜ್ಯದಲ್ಲಿ ಚುನಾವಣೆಗೆ ಮುಂಚಿತವಾಗಿ ‘ಆಮ್ ಆದ್ಮಿ ಅವತಾರ’ ಧರಿಸುತ್ತಿದ್ದಾರೆ.

ಈ ಹೊಸ ‘ಅವತಾರ’ ಎಎಪಿಯ ಜನಪ್ರಿಯತೆಯ ಎದುರು ಕಾಂಗ್ರೆಸ್ ಪ್ರಭಾವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೊದಲ ದಿನ ಚನ್ನಿ ಅವರು ತನ್ನ ಸರ್ಕಾರವು ಬಡವರಿಂದ, ಬಡವರಿಗಾಗಿ ಮತ್ತು ಬಡವರೊಂದಿಗೆ ಎಂದು ಹೇಳಿದರು.

ಚನ್ನಿ ಇತ್ತೀಚೆಗೆ ಒಬ್ಬ ಅಂಧ ವೃದ್ದನಿಗೆ ಸೆರವು ನೀಡಿದ್ದಾರೆ. ಅವರಿಗೆ ಸರ್ಕಾರಿ ಆಸ್ಪತ್ರೆಯಿಂದ ಉಚಿತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಂಡಿ ಕಲಾನ್ ಗ್ರಾಮದಲ್ಲಿ, ಅವರು ಹೊಸದಾಗಿ ಮದುವೆಯಾದ ಬಡ ದಂಪತಿಗಳಿಗೆ ‘ಶಗುನ್’ ನೀಡಲು ತೆರಳಿದ್ದರು. ನವ ವಿವಾಹಿತರ ಕುಟುಂಬ ನೀಡಿದ ಸಿಹಿತಿಂಡಿಯನ್ನು ಅವರೊಂದಿಗೆ ಸವಿದರು. ನಂತರ ಅವರಿಗೆ ಶುಭ ಹಾರೈಕೆಗಳನ್ನು ಮಾಡಿದರು.

ಅದು ಮಾತ್ರವಲ್ಲದೆ, ಸಾಲದಿಂದಾಗಿ ಜೀವ ಕಳೆದುಕೊಂಡ ರೈತರ ಕುಟುಂಬಗಳನ್ನು ಅವರು ಭೇಟಿ ಮಾಡಿದರು. ಅವರು ರೈತ ಕುಟುಂಬವೊಂದರ ಮನೆಯಲ್ಲಿ ಊಟ ಮಾಡಿದರು.

ಕೆಲವು ದಿನಗಳ ಹಿಂದೆ, ತಡರಾತ್ರಿ ಮನೆಗೆ ಮರಳಿದ ಚನ್ನಿ ಅವರು ತನ್ನ ಅಧಿಕೃತ ನಿವಾಸದ ಹೊರಗೆ ಕೆಲವು ಸಂದರ್ಶಕರು ಅವರಿಗಾಗಿ ಕಾಯುತ್ತಿರುವುದನ್ನು ಗಮನಿಸಿದರು. ತಕ್ಷಣ ಅವರು ತಮ್ಮ ಎಸ್‌ಯುವಿಯಿಂದ ಹೊರಬಂದರು, ರಸ್ತೆಬದಿಯಲ್ಲಿ ಕುಳಿತು ಅವರೊಂದಿಗೆ ಮಾತನಾಡಿದರು. ಅವರ ಸಮಸ್ಯೆಗಳನ್ನು ಬಗೆಹರಿಸಿದರು.

ಜನರು ಅವರನ್ನು ಸುಲಭವಾಗಿ ಸಮೀಪಿಸಲು, ತಮಗೆ ನೀಡಲಾಗಿದ್ದ ಸುಮಾರು 1,000 ಪೊಲೀಸ್ ಸಿಬ್ಬಂದಿಯುಳ್ಳ ರಕ್ಷಣಾ ಪಡೆಯನ್ನುಕಡಿಮೆ ಮಾಡುವಂತೆ ಆದೇಶಿಸಿದ್ದಾರೆ.

ಚನ್ನಿ ನೇತೃತ್ವದ ಹೊಸ ಪಂಜಾಬ್ ಕ್ಯಾಬಿನೆಟ್‌ನಲ್ಲಿನ ಈ ರೀತಿಯ ಬದಲಾವಣೆಯು ಹಿಂದಿನ ಸಿಎಂ ಅಮರೀಂದರ್ ಸಿಂಗ್ ಅವರ ಆಡಳಿತಕ್ಕೆ ತದ್ವಿರುದ್ಧವಾಗಿದೆ.

ಅವರದೇ ಪಕ್ಷದ ಕಾರ್ಯಕರ್ತರು ಅಮರೀಂದರ್ ಅವರನ್ನು ಭೇಟಿ ಮಾಡಲಾಗುವುದಿಲ್ಲ. ಅವರು ತಮ್ಮ ತೋಟದ ಮನೆಯಿಂದ ಸರ್ಕಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಚನ್ನಿ ಅವರ ಮಾರ್ಗವನ್ನೇ ಅನುಸರಿಸಿದ ಸಾರಿಗೆ ಸಚಿವ ಅಮರಿಂದರ್ ಸಿಂಗ್ ರಾಜಾ ವಾರ್ರಿಂಗ್ ಅವರು ಎರಡು ಬಾರಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಸಿದರು. ಪೌರ ಕಾರ್ಮಿಕರೊಂದಿಗೆ ತಾವು ಇದ್ದೇವೆ ಎಂಬ ಒಗ್ಗಟ್ಟಿನ ಭಾವವನ್ನು ವ್ಯಕ್ತಪಡಿಸಲು, ಅವರು ರಸ್ತೆಯಲ್ಲಿ ಕಸವನ್ನು ಎತ್ತಿದರು.

ಪಂಜಾಬ್ ಉಪ ಮುಖ್ಯಮಂತ್ರಿ-ಕಮ್-ಗೃಹ ಸಚಿವ ಸುಖಜಿಂದರ್ ಸಿಂಗ್ ರಾಂಧವ ಪಂಜಾಬ್ ಪೊಲೀಸ್ ಪ್ರಧಾನ ಕಚೇರಿಗೆ ದಿಢೀರ್‌ ಭೇಟಿ ನೀಡಿದ ಪರಿಶೀಲನೆ ನಡೆಸಿದರು.

ಸಾರ್ವಜನಿಕರಿಗೆ ತೊಂದರೆಯಾಗದಂತೆ ನೌಕರರು ಮತ್ತು ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ತಲುಪುವಂತೆ ನೋಡಿಕೊಳ್ಳುವುದು ಅವರ ಉದ್ದೇಶವಾಗಿತ್ತು.

ಇದನ್ನೂ ಓದಿ: ಮಹಾರಾಷ್ಟ್ರ ಉಪಚುನಾವಣೆ: ಎಂವಿಎ ಮೈತ್ರಿಕೂಟಕ್ಕೆ ಭರ್ಜರಿ ಗೆಲುವು; ಬಿಜೆಪಿಗೆ ಭಾರೀ ಹಿನ್ನಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights