ಮಹಾರಾಷ್ಟ್ರ ಉಪಚುನಾವಣೆ: ಎಂವಿಎ ಮೈತ್ರಿಕೂಟಕ್ಕೆ ಭರ್ಜರಿ ಗೆಲುವು; ಬಿಜೆಪಿಗೆ ಭಾರೀ ಹಿನ್ನಡೆ!

ಮಹಾರಾಷ್ಟ್ರದ 85 ಜಿಲ್ಲಾ ಪರಿಷತ್‌ ಸ್ಥಾನಗಳು ಹಾಗೂ 144 ಪಂಚಾಯತ್ ಸಮಿತಿ ಸ್ಥಾನಗಳಿಗೆ ಉಪಚುನಾವಣೆ ನಡೆದಿದ್ದು, ಬುಧವಾರ ಫಲಿತಾಂಶ ಪ್ರಕಟವಾಗಿದೆ. ಈ ಪೈಕಿ ಮಹಾರಾಷ್ಟ್ರದ ಆಡಳಿತಾರೂಢ ಮಹಾವಿಕಾಸ್‌ ಅಘಾಡಿ ಮೈತ್ರಿಕೂಟವು ಅತಿ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ.

ಆರು ಜಿಲ್ಲಾ ಪರಿಷತ್‌ಗಳಲ್ಲಿ ಖಾಲಿ ಇದ್ದ 84 ಸ್ಥಾನಗಳಿಗೆ ಉಪಚುನಾವಣೆ ನಡೆದಿದೆ. ಅಲ್ಲದೆ, ದುಲೆ, ನಂದೂರ್‌ಬಾರ್, ಅಕೋಲಾ, ವಾಶಿಮ್, ನಾಗ್ಪುರ, ಪಾಲ್ಘರ್‌ ಜಿಲ್ಲೆಗಳ 37 ಪಂಚಾಯತ್ ಸಮಿತಿಗಳ 141 ಸ್ಥಾನಗಳ ಚುನಾವಣೆ ನಡೆದಿತ್ತು.

85 ಜಿಲ್ಲಾ ಪರಿಷತ್‌ ಸ್ಥಾನಗಳ ಪೈಕಿ ಬಿಜೆಪಿ 22 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ 19, ಎನ್‌ಸಿಪಿ 15 ಮತ್ತು ಶಿವಸೇನೆ 12 ಸ್ಥಾನಗಳಲ್ಲಿ ಗೆದ್ದಿದೆ (ಒಟ್ಟಾರೆಯಾಗಿ ಎಂವಿಎ ಮಿತ್ರಿಯು 46 ಸ್ಥಾನಗಳನ್ನು ಗೆದ್ದಿದೆ). ಪಕ್ಷೇತರ ಅಭ್ಯರ್ಥಿಗಳು ನಾಲ್ಕು ಸ್ಥಾನಗಳಲ್ಲಿ, ಸಿಪಿಐಎಂ ಒಂದು ಸ್ಥಾನದಲ್ಲಿ ಹಾಗೂ ಇತರೆ ಪಕ್ಷಗಳು 12 ಸ್ಥಾನದಲ್ಲಿ ಜಯ ಗಳಿಸಿವೆ. ಒಂದು ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಅದೇ ರೀತಿಯಲ್ಲಿ ಒಟ್ಟು 144 ಪಂಚಾಯತ್ ಸಮಿತಿಗಳ ಪೈಕಿ, ಬಿಜೆಪಿ 33 ಸ್ಥಾನಗಳಲ್ಲಿ ಗೆದ್ದಿದೆ. ಕಾಂಗ್ರೆಸ್ 36, ಶಿವಸೇನೆ 23 ಹಾಗೂ ಎನ್‌ಸಿಪಿ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ (ಎಂವಿಎ ಮೈತ್ರಿ ಒಟ್ಟು 73 ಸ್ಥಾನಗಳನ್ನು ಗೆದ್ದಿದೆ). ಪಕ್ಷೇತರ ಅಭ್ಯರ್ಥಿಗಳು ಏಳು ಸ್ಥಾನಗಳಲ್ಲಿ, ಮಹಾರಾಷ್ಟ್ರ ನವನಿರ್ಮಾಣ ಸೇನೆ ಹಾಗೂ ಇತರೆ ಪಕ್ಷಗಳು 26 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಮೂರು ಪಂಚಾಯತ್‌ ಸಮಿತಿ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು.

“ಜಿಲ್ಲಾ ಪರಿಷತ್‌ ಹಾಗೂ ಪಂಚಾಯತ್‌ ಸಮಿತಿ ಉಪಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಪೆಟ್ಟು ಬಿದ್ದಿದೆ. ಅದು ಮಾರಾಠ ಮೀಸಲಾಯಿಯ ವಿಚಾರದಲ್ಲಿ ಬಿಜೆಪಿಯ ದ್ವಿಮುಖ ನಿಲುವಿನಿಂದಾಗಿ ಆಗಿದೆ. ಕೇಂದ್ರದಲ್ಲಿ ಬಿಜೆಪಿಯೇ  ಅಧಿಕಾರದಲ್ಲಿದೆ. ಅವರು ಮೀಸಲಾತಿಯ ವಿಚಾರದಲ್ಲಿ ಒಂದು ಉತ್ತಮ ನಿರ್ಧಾರವನ್ನು ಕೈಗೊಳ್ಳಬಹುದು. ಆದರೆ ಬಿಜೆಪಿಯು ಯಾವುದೇ ಸರಿಯಾದ ನಿರ್ಧಾರವನ್ನು ಕೈಗೊಳಲ್ಲ. ಹೀಗಾಗಿ ಜನರು ಚುನಾವಣೆಯಲ್ಲಿ ಅವರನ್ನು ತಿಸ್ಕರಿಸಿದ್ದಾರೆ” ಎಂದು ಮಹಾರಾಷ್ಟ್ರ ಲೋಕೋಪಯೋಗಿ ಇಲಾಖೆ ಸಚಿವ, ಕಾಂಗ್ರಸ್‌ ನಾಯಕ ಅಶೋಕ್‌ ಚಾವಣ್‌ ಹೇಳಿದ್ದಾರೆ.

ಇದನ್ನೂ ಓದಿ: ತಲೆ ಬೋಳಿಸಿಕೊಂಡು ಬಿಜೆಪಿ ತೊರೆದ ತ್ರಿಪುರಾ ಶಾಸಕ: ಟಿಎಂಸಿ ಸೇರುವ ಸಾಧ್ಯತೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights