ಮತಗಟ್ಟೆಗೆ ಸೈಕಲ್‌ನಲ್ಲಿ ತೆರಳಿದ ನಟ ವಿಜಯ್‌; ಪ್ರತಿಭಟನೆ ಎಂದ ಅಭಿಮಾನಿಗಳು – ಯಾವ ಉದ್ದೇಶವೂ ಇಲ್ಲ ಎಂದ ವಕ್ತಾರರು

ತಮಿಳು ಸ್ಟಾರ್‌ ನಟ ವಿಜಯ್‌ ಅವರು ಇಂದು ನಡೆದ ತಮಿಳುನಾಡು ಚುನಾವಣೆಗೆ ಮತದಾನ ಮಾಡಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ಅವರು ತಮ್ಮ ಮನೆಯಿಂದ ನೀಲಂಗರೈನ ಮತಗಟ್ಟೆಗೆ ಸೈಕಲ್‌ನಲ್ಲಿ ತೆರಳಿ ಮತ ಚಲಾಯಿಸುವ ಮೂಲಕ ಇಂಧನ ಬೆಲೆಯ ವಿರುದ್ದ ತಮ್ಮ ಪ್ರತಿಭಟನೆಯನ್ನೂ ದಾಖಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯ್ ಅವರು ತಮ್ಮ ಮನೆಯಿಂದ ನೀಲಂಗರೈನ ಬೂತ್‌ಗೆ ಸೈಕಲ್‌ನಲ್ಲಿ ತೆರಳಿ ಮತದಾನ ಮಾಡಿದ್ದಾರೆ. ಅವರೊಂದಿಗೆ ಹಲವಾರು ಮಂದಿ ಬೈಕ್‌ನಲ್ಲಿ ತೆರಳಿದ್ದಾರೆ. ಅವರು ಮತದಾನಕ್ಕೆ ತೆರಳುತ್ತಿದ್ದಂತೆಯೇ ಅವರ ಅಭಿಮಾನಿಗಳು ಅವರ ಸುತ್ತ ನೆರೆದಿದ್ದರು. ಅವರನ್ನು ಚದುರಿಸಲು ಒಬ್ಬ ಪೊಲೀಸ್‌ ಸಿಬ್ಬಂದಿಯೂ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗಬೇಕಾಯಿತು.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ವಿರೋಧಿಸಿ ವಿಜಯ್‌ ದಾಖಲಿಸಿರುವ ಪ್ರತಿಭಟನೆ ಇದು ಎಂದು ಅವರ ಹಲವಾರು ಅಭಿಮಾನಿಗಳು ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ.  ವಿಜಯ್ ಸೈಕಲ್ ಸವಾರಿ ಮಾಡುವ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಆದಾಗ್ಯೂ, ವಿಜಯ್ ಅವರ ತಂಡವು ಶೀಘ್ರದಲ್ಲೇ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, “ಮತಗಟ್ಟೆಯು ಅವರ ಮನೆಯ ಹಿಂದಿನ ಬೀದಿಯಲ್ಲಿದೆ. ಆ ಪ್ರದೇಶವು ಕಿರಿದಾಗಿದೆ. ಹಾಗಾಗಿ ಅವರು ಅಲ್ಲಿ ಕಾರು ನಿಲ್ಲಿಸುವುದು ಕಷ್ಟಕರವಾಗಿತ್ತು. ಅದಕ್ಕಾಗಿಯೇ ಅವರು ಬೈಸಿಕಲ್‌ನಲ್ಲಿ ಮತಗಟ್ಟೆಗೆ ತೆರಳಿದರು. ಈ ವಿಚಾರದ ಹಿಂದೆ ಯಾವುದೇ ಪ್ರಚೋದನೆ-ಪ್ರೇರಣೆ ಇಲ್ಲ” ಎಂದು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಇಂದು ಚುನಾವಣೆ ನಡೆಯುತ್ತಿದೆ. ಹಲವಾರು ಸ್ಟಾರ್‌ಗಳು, ಸೆಲೆಬ್ರಟಿಗಳು ಮತದಾನ ಮಾಡಿದ್ದಾರೆ. ರಜನಿಕಾಂತ್, ಎಂಎನ್‌ಎಂ ನಾಯಕ ಕಮಲ್ ಹಾಸನ್, ವಿಜಯ್ ಮತ್ತು ಅಜಿತ್ ಮತ ಚಲಾಯಿಸಿದ್ದಾರೆ.

ಇದನ್ನೂ ಓದಿ: ಹೋಟೆಲ್‌ನಲ್ಲಿ ಪ್ರಚಾರ ಪಡೆಯಲು ಮುಂದಾದ ತೇಜಸ್ವಿ ಸೂರ್ಯ; ತಂಬಿ ಇದು ತಮಿಳುನಾಡು ಎಂದ ತಮಿಳರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights