ಫ್ಯಾಕ್ಟ್‌ಚೆಕ್ : ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ಹಿಂದೂ ಯುವಕನನ್ನು ಕೊಲೆ ಮಾಡಿದ್ದು ನಿಜವೇ?
ಡಿ.ಜೆ ಆಗಿ ಕೆಲಸ ಮಾಡುತ್ತಿದ್ದ 28 ವರ್ಷದ ಹರೀಶ್ ಕುಮಾರ್ ಎಂಬ ವ್ಯಕ್ತಿಯು, ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದ ಎಂಬ ಕಾರಣಕ್ಕೆ ಹೈದರಾಬಾದ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಹೇಳುವ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಸಾಮಾಜಿಕ ಮಾಧ್ಯಮದ ಬಳಕೆದಾರರು ಹಾಗೂ Free Press Journal, IANS, ಮತ್ತು OpiIndia ದಂತಹ ಸುದ್ದಿವಾಹಿನಿಗಳು ಈ ಸುದ್ದಿಯನ್ನು, ಮುಸ್ಲಿಂ ಹುಡುಗಿಯ ಅಣ್ಣ ಕೊಲೆ ಮಾಡಿದ್ದಾನೆ ಎಂದು ಪ್ರಸಾರ ಮಾಡಿವೆ. ಮದುವೆಯಾದ ಬಳಿಕ ಪತ್ನಿಯ ಕುಟುಂಬದಿಂದ ಹರೀಶ್ ಹತ್ಯೆ ನಡೆದಿದೆ ಎಂದೂ ಹೇಳಲಾಗಿದೆ.
ಹರೀಶ್ ಎಂಬ ವ್ಯಕ್ತಿಯು ಮುಸ್ಲಿಂ ಧರ್ಮದ ಹುಡುಗಿಯನ್ನು ಮದುವೆಯಾಗಿದ್ದಾನೆ ಎಂದು ಮದುವೆ ಆದ ದೇವಸ್ಥಾನದ ಮುಂಭಾಗದಲ್ಲಿ ಮುಸ್ಲಿಂ ಹುಡುಗಿಯ ಸಹೋದರ ಇರಿದು ಕೊಂದಿದ್ದಾನೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿವೆ. ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವಂತೆ ಹರೀಶ್ ಎಂಬ ವ್ಯಕ್ತಿ ಮುಸ್ಲಿಂ ಯುವತಿಯನ್ನು ಮದುವೆಆದ ಎಂಬ ಕಾರಣಕ್ಕೆ ಹತ್ಯೆ ಮಾಡಲಾಗಿದೆಯೇ ಎಂದು ಪರಿಶೀಲಿಸಿದಾಗ, ಮಾರ್ಚ್ 4, 2023 ರ ದಿ ನ್ಯೂಸ್ ಮಿನಿಟ್‌ನ ವರದಿ ಮಾಡಿದೆ. ಈ ವರದಿಯ ಪ್ರಕಾರ ಮಾರ್ಚ್ 1 ರಂದು ದೂಲಪಲ್ಲಿಯ ದೇವಸ್ಥಾನದಲ್ಲಿ ಹರೀಶ್ ಮತ್ತು ಮನೀಷಾ ಗುಟ್ಟಾಗಿ ಮದುವೆ ಆಗುತ್ತಿರುವ ಬಗ್ಗೆ ಮಾಹಿತಿ ಪಡೆದ ಮನೀಷಾ ಅಣ್ಣ ದೀನದಯಾಳ್ ದಂಪತಿಗಳನ್ನು ಹಿಂಬಾಲಿಸಿ ಹರೀಶನನ್ನು ಹತ್ಯೆ ಮಾಡಿದ್ದಾನೆ.
ಹತ್ಯೆಯಾದ ವ್ಯಕ್ತಿ ಹಾಗೂ ಹತ್ಯೆ ಮಾಡಿದ ವ್ಯಕ್ತಿ ಒಬ್ಬರೂ ಒಂದೇ ಧರ್ಮಕ್ಕೆ ಸೇರಿದವರು ಎಂದು ‘ದಿ ಲಾಜಿಕಲ್ ಇಂಡಿಯನ್’ ವರದಿ ಮಾಡಿದೆ. ತೆಲಂಗಾಣದ ದೂಲಪಲ್ಲಿ ಎಂಬಲ್ಲಿ, ತನ್ನ ತಂಗಿಯ ಜೊತೆ ಗೌಪ್ಯವಾಗಿ ಮದುವೆ ಆಗಿದ್ದಾನೆ ಎಂಬ ಕಾರಣಕ್ಕೆ ಹರೀಶ್ ಕುಮಾರ್ ಎಂಬಾತನನ್ನು ದೀನ್‌ದಯಾಳ್ ಎಂಬಾತ ಮಾರ್ಚ್ 1ರಂದು ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಪ್ರಕರಣ ಸಂಬಂಧ ದಯಾಳ್ ಹಾಗೂ ಆತನ ಒಂಬತ್ತು ಸ್ನೇಹಿತರನ್ನು ತೆಲಂಗಾಣದ ಪೀತಬಷೀರಾಬಾದ್ ಪೊಲೀಸರು ಬಂಧಿಸಿದ್ದ ಸುದ್ದಿಯನ್ನು ಪ್ರಮುಖ ಪತ್ರಿಕೆಗಳು ವರದಿ ಮಾಡಿದ್ದವು. ಈ ಪ್ರಕರಣದಲ್ಲಿ ಅನ್ಯಕೋಮಿನ ವಿಚಾರ ಅಪ್ರಸ್ತುತ ಎಂದು ಠಾಣೆಯ ಇನ್‌ಸ್ಪೆಕ್ಟರ್ ಗೌರಿ ಪ್ರಶಾಂತ್ ಅವರು ತಿಳಿಸಿದ್ದಾರೆ ಎಂದುದಿ ಲಾಜಿಕಲ್ ಇಂಡಿಯನ್ ವರದಿ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಮುಖ್ಯವಾಹಿನಿಗಳಲ್ಲಿ ಪ್ರಸಾರ ಮಾಡಿದ ಸುದ್ದಿಗಳು ಸುಳ್ಳಾಗಿದ್ದು, ಹರೀಶ್ ಮತ್ತು ಮನಿಷಾ ಇಬ್ಬರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೆ ಇದನ್ನು ತಿರುಚಿ ಕೋಮು ದ್ವೇಷದ ಹಿನ್ನಲೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಎಂಬ ಕೋಮು ಬಣ್ಣ ನೀಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ಕೃಪೆ: ದಿ ಲಾಜಿಕಲ್ ಇಂಡಿಯನ್
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಬೇಸಿಗೆಯಲ್ಲಿ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕ್ಸಿದ್ರೆ ವಾಹನ ಸ್ಪೋಟಗೊಳ್ಳುವುದೇ?