2020ರಲ್ಲಿ ರಸ್ತೆ ಅಪಘಾತಗಳಲ್ಲಿ 1.20 ಲಕ್ಷ ಸಾವು; ದೈನಂದಿನ ಸರಾಸರಿ 328 ಸಾವುಗಳಾಗಿವೆ: NCRB ಡೇಟಾ

ಕೊರೊನಾ ಲಾಕ್‌ಡೌನ್‌ನ ಹೊರತಾಗಿಯೂ 2020ರಲ್ಲಿ ನಡೆದಿರುವ ಅಪಘಾತಗಳಲ್ಲಿ 1.20 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಪ್ರತಿದಿನ ಸರಾಸರಿ 328 ಜನರು ಜೀವ ಕಳೆದುಕೊಂಡಿದ್ದಾರೆ ಎಂದು ಸರ್ಕಾರದ ಅಧಿಕೃತ ಮಾಹಿತಿ ಹೇಳಿದೆ.

ರಸ್ತೆ ಅಪಘಾತಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದಿಂದಾಗಿ ಮೂರು ವರ್ಷಗಳಲ್ಲಿ ಸುಮಾರು 3.92 ಲಕ್ಷ ಜೀವಗಳು ಸಾವನ್ನಪ್ಪಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ತನ್ನ ವಾರ್ಷಿಕ ” ಕ್ರೈಮ್ ಇಂಡಿಯಾ ” ವರದಿಯಲ್ಲಿ ಬಹಿರಂಗಪಡಿಸಿದೆ.

2020ರಲ್ಲಿ 1.20 ಲಕ್ಷ ಸಾವುಗಳು ದಾಖಲಾಗಿದ್ದರೆ, 2019ರಲ್ಲಿ 1.36 ಲಕ್ಷ ಮತ್ತು 2018ರಲ್ಲಿ 1.35 ಲಕ್ಷ ಸಾವುಗಳು ಸಂಭವಿಸಿವೆ ಎಂದು ಅಂಕಿಅಂಶಗಳು ಹೇಳಿವೆ.

2018ರಿಂದ ದೇಶದಲ್ಲಿ 1.35 ಲಕ್ಷ “ಹಿಟ್ ಅಂಡ್ ರನ್” ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್‌ಸಿಆರ್‌ಬಿಯ ವರದಿ ಹೇಳಿದೆ.

2020ರಲ್ಲಿ 41,196 “ಹಿಟ್ ಅಂಡ್ ರನ್” ಪ್ರಕರಣಗಳಾಗಿದ್ದರೆ, 2019 ರಲ್ಲಿ 47,504 ಮತ್ತು 2018 ರಲ್ಲಿ 47,028 ಪ್ರಕರಣಗಳು ವರದಿಯಾಗಿವೆ.

ಕಳೆದ ವರ್ಷದಲ್ಲಿ ಪ್ರತಿದಿನ ಸರಾಸರಿ 112 “ಹಿಟ್ ಅಂಡ್ ರನ್” ಪ್ರಕರಣಗಳು ದೇಶಾದ್ಯಂತ ವರದಿಯಾಗಿವೆ.

ಏತನ್ಮಧ್ಯೆ, 2020ರಲ್ಲಿ ದೇಶದಾದ್ಯಂತ ರೈಲು ಅಪಘಾತಗಳಿಗೆ ಸಂಬಂಧಿದಂತೆ ನಿರ್ಲಕ್ಷ್ಯದಿಂದ 52 ಸಾವುಗಳು ದಾಖಲಾಗಿದ್ದು, 2019 ರಲ್ಲಿ 55 ಮತ್ತು 2018 ರಲ್ಲಿ 35 ಪ್ರಕರಣಗಳು ವರದಿಯಾಗಿವೆ.

2020 ರಲ್ಲಿ ದೇಶದಲ್ಲಿ “ವೈದ್ಯಕೀಯ ನಿರ್ಲಕ್ಷ್ಯದಿಂದ 133 ಸಾವುಗಳ ಪ್ರಕರಣಗಳು ದಾಖಲಾಗಿವೆ. 2019 ರಲ್ಲಿ 201 ಮತ್ತು 2018 ರಲ್ಲಿ 218 ಪ್ರಕರಣಗಳು ದಾಖಲಾಗಿವೆ ಎಂದು NCRB ಡೇಟಾ ಹೇಳಿದೆ.

2020 ರಲ್ಲಿ “ನಾಗರಿಕ ಸಂಸ್ಥೆಗಳ ನಿರ್ಲಕ್ಷ್ಯದಿಂದ” 51 ಸಾವುಗಳು ಸಂಭವಿಸಿದ್ದರೆ, 2019 ರಲ್ಲಿ 147 ಮತ್ತು 2018 ರಲ್ಲಿ 40 ಪ್ರಕರಣಗಳು ವರದಿಯಾಗಿವೆ.

“ಇತರ ನಿರ್ಲಕ್ಷ್ಯದಿಂದ ಸಾವು”ಗಳು 2019 ರಲ್ಲಿ 7,912 ಮತ್ತು 2018 ರಲ್ಲಿ 8,687 ರಷ್ಟಿದ್ದ 2020 ರಲ್ಲಿ 6,367  ಪ್ರಕರಣಗಳು ವರದಿಯಾಗಿವೆ.

ಎನ್‌ಸಿಆರ್‌ಬಿ ವರದಿಯಲ್ಲಿ ಹೇಳಿದ್ದು, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ದೇಶವು ಮಾರ್ಚ್ 25, 2020 ರಿಂದ ಮೇ 31, 2020 ರವರೆಗೆ ಸಂಪೂರ್ಣ ಲಾಕ್‌ಡೌನ್‌ ಹೇರಲಾಗಿತ್ತು. ಈ ಸಮಯದಲ್ಲಿ ಸಾರ್ವಜನಿಕ ಸಂಚಾರ “ಬಹಳ ಸೀಮಿತವಾಗಿತ್ತು”.

ಇದನ್ನೂ ಓದಿ: ಮುಂಬೈ-ದೆಹಲಿ ಎಕ್ಸ್‌ಪ್ರೆಸ್‌ ವೇ: ತಿಂಗಳಿಗೆ 1,500 ಕೋಟಿ ಆದಾಯ ದೊರೆಯಲಿದೆ: ಸಚಿವ ನಿತಿನ್ ಗಡ್ಕರಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights