ಮುಂಬೈ-ದೆಹಲಿ ಎಕ್ಸ್‌ಪ್ರೆಸ್‌ ವೇ: ತಿಂಗಳಿಗೆ 1,500 ಕೋಟಿ ಆದಾಯ ದೊರೆಯಲಿದೆ: ಸಚಿವ ನಿತಿನ್ ಗಡ್ಕರಿ

ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್‌ಎಚ್‌ಎಐ)ಕ್ಕೆ ಟೋಲ್‌ಗಳಿಂದ ಸಂಗ್ರಹವಾಗುವ ವಾರ್ಷಿಕ ಆದಾಯವನ್ನು ಮುಂದಿನ ಐದು ವರ್ಷಗಳಲ್ಲಿ 1.40 ಲಕ್ಷ ಕೋಟಿಗೆ ಹೆಚ್ಚಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ಮಹತ್ವಾಕಾಂಕ್ಷಿ ಯೋಜನೆಯಾಗಿರುವ ದೆಹಲಿ- ಮುಂಬೈ ಎಕ್ಸ್ ಪ್ರೆಸ್ ವೇ ಹೆದ್ದಾರಿ ಕಾಮಗಾರಿಯು 2023ಕ್ಕೆ ಅಂತ್ಯಗೊಳ್ಳಲಿದೆ. ಈ ರಸ್ತೆಯಿಂದ ಸರ್ಕಾರದ ಬೊಕ್ಕಸಕ್ಕೆ ಪ್ರತಿ ತಿಂಗಳು 1,000- 1,500 ಕೋಟಿ ರೂ. ಆದಾಯ ದೊರೆಯಲಿದೆ. ಈ ರಸ್ತೆ ಸರ್ಕಾರದ ಪಾಲಿಗೆ ಚಿನ್ನದ ಗಣಿಯಾಗಲಿದೆ ಎಂದು ಅವರು ಹೇಳಿದ್ದಾರೆ.

ದೆಹಲಿ- ಮುಂಬೈ ಎಕ್ಸ್ ಪ್ರೆಸ್ ವೇ 4 ರಾಜ್ಯಗಳನ್ನು ಹಾದುಹೋಗುತ್ತಿದೆ. ವಿಶ್ವದಲ್ಲೇ ಅತಿದೊಡ್ಡ ರಸ್ತೆ ನಿರ್ಮಾಣ ಕಾಮಗಾರಿ ಎನ್ನುವ ಹೆಸರಿಗೆ ಅದು ಪಾತ್ರವಾಗಲಿದೆ ಎಂದು ಗಡ್ಕರಿತಿಳಿಸಿದ್ದಾರೆ.

ಈ ರಸ್ತೆಯು ದೆಹಲಿ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಗುಜರಾತ್‌ ಮೂಲಕ ಮುಂಬೈಗೆ ಸಂಪರ್ಕ ಕಲ್ಪಿಸಲಿದ್ದು, ದೆಹಲಿ-ಮುಂಬೈ ನಡುವಿನ ಪ್ರಯಾಣದ ಅವಧಿಯನ್ನು 24 ಗಂಟೆಗಳಿಂದ 12 ಗಂಟೆಗೆ ಇಳಿಯುತ್ತದೆ ಎಂದು ಹೇಳಲಾಗಿದೆ.

ದೇಶದಲ್ಲಿರುವ ಟೋಲ್‌ಗಳಿಂದ ಪ್ರಸ್ತುತ ವಾರ್ಷಿಕ 40,000 ಕೋಟಿ ರೂ ಆದಾಯವಿದೆ ಎಂದು ಗಡ್ಕರಿ ಹೇಳಿದ್ದಾರೆ.

ಇದನ್ನೂ ಓದಿ: ಐಪಿಎಲ್‌ 2ನೇ ಇನ್ನಿಂಗ್ಸ್‌ ಆರಂಭ; ಭಾನುವಾರ ಮುಂಬೈ ಮತ್ತು ಚೆನೈ ತಂಡಗಳ ನಡುವೆ ಹಣಾಹಣಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights