ಅಕ್ರಮ ದೇವಾಲಯಗಳನ್ನು ಸಕ್ರಮಗೊಳಿಸಲು ಮೈಸೂರು ಶಾಸಕರಿಂದ ಖಾಸಗಿ ಮಸೂದೆ ಮಂಡನೆ!

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕೆಡವಲಾದ ದೇವಸ್ಥಾನದ ವಿಚಾರದಲ್ಲಿ ರಾಜಕೀಯ ನಡೆಯುತ್ತಿದೆ. ಇದೇ ಸಮಯದಲ್ಲಿ, ಬಿಜೆಪಿ ಶಾಸಕ ಎಸ್‌ಎ ರಾಮದಾಸ್ ಅವರು ಶನಿವಾರ ಕರ್ನಾಟಕದಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಹಿಂದೂ ದೇವಾಲಯಗಳ ಕಾಯಿದೆ-2021ಅನ್ನು ಜಾರಿಗೆ ತರಲು ಖಾಸಗಿ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸುವುದಾಗಿ ಹೇಳಿದ್ದಾರೆ.

ಮಸೂದೆಯ ಉದ್ದೇಶ ಅನಧಿಕೃತ ದೇವಸ್ಥಾನಗಳನ್ನು ನಿಯಂತ್ರಿಸುವುದಾಗಿದೆ. ಮಸೂದೆಯನ್ನು ಮಂಡಿಸುವ ಕುರಿತು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದಿದ್ದೇನೆ. ಈ ಮಸೂದೆಯನ್ನು ಸೆಪ್ಟೆಂಬರ್ 23 ರಂದು ಚರ್ಚೆಗೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ರಾಮದಾಸ್‌ ಹೇಳಿದ್ದಾರೆ.

“ನಾನು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್‌ ನಾಯಕರು ಸೇರಿದಂತೆ ಇತರ ಸದಸ್ಯರಿಗೆ ಪತ್ರ ಬರೆಯುತ್ತೇನೆ. ವಿರೋಧ ಪಕ್ಷಗಳಿಂದ ವಿಧಾನಸಭೆಯಲ್ಲಿ ಮಸೂದೆಗೆ ಬೆಂಬಲ ಕೋರುತ್ತೇನೆ” ಎಂದು ಅವರು ಹೇಳಿದ್ದಾರೆ.

“ದೇವಾಲಯಗಳು ಸಾಂಸ್ಕೃತಿಕ ಕೇಂದ್ರಗಳಾಗಿವೆ. ಅಂತಹ ದೇವಾಲಯಗಳು ಮತ್ತು ಅವುಗಳ ಆಸ್ತಿಗಳನ್ನು ಕ್ರೋಡೀಕರಿಸುವ ಮತ್ತು ಅವುಗಳನ್ನು ಸಕ್ರಮಗೊಳಿಸುವ ಅವಶ್ಯಕತೆಯಿದೆ. ಈ ಮಸೂದೆಯು 10 ಪ್ರಮುಖ ವಿಭಾಗಗಳನ್ನು ಒಳಗೊಂಡಿದೆ, ಪ್ರತಿ ತಾಲೂಕಿನಲ್ಲಿ ಅನಧಿಕೃತ ದೇವಸ್ಥಾನಗಳನ್ನು ಸಕ್ರಮಗೊಳಿಸುವಿಕೆಗಾಗಿ ಅರ್ಜಿಗಳನ್ನು ಸ್ವೀಕರಿಸಲು, ಎಲ್ಲಾ ದಾಖಲೆಗಳನ್ನು ಪರಿಗಣಿಸಿ ಕ್ರಮಕ್ಕೆ ಶಿಫಾರಸು ಮಾಡಲು ಒಂದು ಸಮರ್ಥ ಪ್ರಾಧಿಕಾರವನ್ನು ರಚಿಸಲಾಗುವುದು”ಎಂದು ಅವರು ಹೇಳಿದ್ದಾರೆ.

ಅಸೆಂಬ್ಲಿಯಲ್ಲಿ ಖಾಸಗಿ ಮಸೂದೆಯನ್ನು ಅಂಗೀಕರಿಸಬಹುದು ಅಥವಾ ಸರ್ಕಾರಿ ಮಸೂದೆಯಾಗಿ ಪರಿವರ್ತಿಸಬಹುದು ಮತ್ತು ಸರ್ಕಾರವು ಅದನ್ನು ವಿಧಾನಸಭೆಯಲ್ಲಿ ಚರ್ಚಿಸಿದ ನಂತರ ಜಾರಿಗೊಳಿಸಬಹುದು. ಈ ನಿರ್ಧಾರವನ್ನು ಬೊಮ್ಮಾಯಿ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಗೆ ಒತ್ತಾಯ; ರಾಜ್ಯಾದ್ಯಂತ ಸೈಕಲ್‌ ಜಾಥಾ ಮಾಡುತ್ತಿರುವ ಕಿರಣ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights