ಯಾದಗಿರಿಯಲ್ಲಿ ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್ : ಆರೋಪಿಗಳು ಅರೆಸ್ಟ್!
ಯಾದಗಿರಿಯಲ್ಲಿ ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು ಓರ್ವ ಪ್ರಮುಖ ಆರೋಪಿ ಪೊಲೀಸ್ ವಾಹನ ಚಾಲಕನಾಗಿದ್ದಾನೆ.
ಹೌದು.. ಒಂದುವರೆ ವರ್ಷದ ಹಿಂದೆ ಯಾದಗಿರಿ ಶಹಪುರ ತಾಲೂಕಿನ ರಸ್ತಾಪುರ ಕ್ರಾಸ್ ಬಳಿ ನಾಲ್ವರು ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿ ವಿಡಿಯೋ ಕೂಡ ಮಾಡಿದ್ದರು. ಈ ವಿಡಿಯೋ ಬಿಡುಗಡೆ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ ಓರ್ವ ಸರ್ಕಾರಿ ಕರ್ತವ್ಯದಲ್ಲಿದ್ದು ಪೊಲೀಸ್ ಹೋಂ ಗಾರ್ಡ್ ಆಗಿದ್ದು ನಂತರ ಚಾಲಕನಾಗಿ ಕೆಲಸ ಮಾಡುತ್ತಿದ್ದನೆಂದು ತಿಳಿದು ಬಂದಿದೆ.
ಪೊಲೀಸ್ ವಾಹನ ಚಾಲಕ ಲಿಂಗರಾಜು ಎಂಬಾತ ಈ ನೀಚ ಕೆಲ್ಸ ಮಾಡಿದ್ದಾನೆ. ಅತ್ಯಾಚಾರದ ನಂತರ ಮಹಿಳೆಯಿಂದ ಮೊಬೈಲ್ ಮತ್ತು 5000 ರೂಪಾಯಿ ಹಣ ಕಸಿದುಕೊಂಡ ಆರೋಪಿಗಳು ಹಣದ ಹಂಚಿಕೆಯಲ್ಲಿ ಜಗಳವಾಡಿದ್ದಾರೆ. ಮಾತ್ರವಲ್ಲದೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಪ್ರಕರಣ ಬಯಲಾಗುತ್ತಿದ್ದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಮಹಿಳೆ ಮೇಲೆ ಅತ್ಯಾಚಾರ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಎಸ್ ಪಿ ಡಾ ವೇದಮೂರ್ತಿ ಮಾಹಿತಿ ನೀಡಿದ್ದಾರೆ.
ಇನ್ನೂ ಯಾದಗಿರಿ ಶಹಪುರ ಠಾಣೆಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಕಿಡ್ಯ್ನಾಪ್, ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಾಗಿದೆ. ಮಹಿಳೆ ಕೂಡ ಆರೋಪಿಗಳ ವಿರುದ್ಧ ದೂರು ನೀಡಲು ಮುಂದಾಗಿದ್ದು ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಡಾ ವೇದಮೂರ್ತಿ ಭರವಸೆ ಕೊಟ್ಟಿದ್ದಾರೆ.