FACT CHECK | ಚುನಾವಣೆಯಲ್ಲಿ ಸ್ಪರ್ಧಿಸಿದ್ದೇ 78 ಮಂದಿ ಮುಸ್ಲಿಂ ಅಭ್ಯರ್ಥಿಗಳು, 98 ಜನ ಹೇಗೆ ಆಯ್ಕೆಯಾಗ್ತಾರೆ?

ಮುಸ್ಲಿಂ ಕುರಿತಾದ ದ್ವೇಷ ಭರಿತ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ರಾಷ್ಟ್ರ ಧರ್ಮ ಎಂಬ ವಾಟರ್ ಮಾರ್ಕ್ ಹೊಂದಿರುವ ವಿಡಿಯೋವನ್ನು ಗಿರೀಶ್ ಉಪಾಧ್ಯಾಯ್ ಎಂಬ ಫೇಸ್‌ಬುಕ್ ಬಳದಾರರು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ “ಆತ್ಮ ತನ್ನ ಭವಿಷ್ಯದ ಬಗ್ಗೆ ಯೋಚಿಸುತ್ತಾ ನಡುಗುತ್ತದೆ..” ಎಂದು ಶೀರ್ಷಿಕೆಯನ್ನು ನೀಡಿ, ಅದರ ಕೆಳಗೆ 98 ಮುಸ್ಲಿಂ ಹೆಸರುಗಳನ್ನು ಬರೆದು, ಈ ಎಲ್ಲಾ ಮುಸ್ಲಿಂ ಹೆಸರುಗಳು ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ವಿಜಯ ಸಾಧಿಸಿದವರು ಎಂದು ಪ್ರತಿಪಾದಿಸಲಾಗಿದೆ.

 

 

 

 

 

 

 

“ಈ ಸಂಪೂರ್ಣ ಪಟ್ಟಿಯನ್ನು ಓದಿದ ನಂತರ ನಿಮಗೆ ಭವಿಷ್ಯದ ಬಗ್ಗೆ ಚಿಂತೆ ಇಲ್ಲದಿದ್ದರೆ, ಬಹುಶಃ ನೀವೂ ಹಿಂದೂಗಳ ನಡುವೆ ಅಡಗಿರುವ ತೋಳ ಅಥವಾ ನಿಧಾನ ಹಿಂದೂ .. ಪಾರಿವಾಳ ಕಣ್ಣು ಮುಚ್ಚಿದರೆ ಬೆಕ್ಕು ಓಡಿಹೋಗುವುದಿಲ್ಲ.. ಹಿಂದೂಗಳೇ ಎದ್ದೇಳಿ, ಎದ್ದೇಳಿ..ರಾಷ್ಟ್ರ ಸೇವಾ ಫೌಂಡೇಶನ್‌ಗೆ ಸೇರಿ ಮತ್ತು ಸಂಪರ್ಕ ಸಾಧಿಸಿ” ಎಂದು ಬರೆಯಲಾಗಿದ್ದು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಾಗುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌ :

ವೈರಲ್ ಪೋಸ್ಟ್‌ನಲ್ಲಿ ಹಲವು ಮುಸ್ಲಿಂ ಹೆಸರುಗಳಿದ್ದು, ಆ ಹೆಸರುಗಳಲ್ಲಿರುವವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರ ಕುರಿತು ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಹೀಗಾಗಿ ವೈರಲ್‌ ಸಂದೇಶ ಹಲವು ಅನುಮಾಗಳನ್ನು ಸಾರ್ವಜನಿಕ ವಲಯದಲ್ಲಿ ಹುಟ್ಟು ಹಾಕಿದೆ. ಹಾಗಾಗಿ ಕೀ ವರ್ಡ್ಸ್‌ಗಳನ್ನು ಬಳಸಿ ಗೂಗಲ್‌ ಸರ್ಚ್ ನಡೆಸಿದಾಗ, “Minority Report Card: Of 78 Muslims contesting Lok Sabha polls, 24 go past the winning line”ಎಂಬ ಶೀರ್ಷಿಕೆಯಡಿಯಲ್ಲಿ ದ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿಯೊಂದು ಲಭ್ಯವಾಗಿದೆ.

 

 

 

 

 

 

 

 

 

 

 

 

ಇಂಡಿಯನ್ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ 2024ರ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದಲ್ಲಿ ಸ್ಪರ್ಧಿಸಿದ್ದ ಒಟ್ಟು ಮುಸ್ಲಿಂ ಅಭ್ಯರ್ಥಿಗಳು 78 ಮಂದಿ. ಅದರಲ್ಲಿ 24 ಮುಸ್ಲಿಂ ಅಭ್ಯರ್ಥಿಗಳು ಸಂಸತ್‌ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಇದೇ ವರದಿಯಲ್ಲಿ ಲೋಕಸಭೆ ಪ್ರವೇಶಿಸಿದ ಮುಸ್ಲಿಂ ಸಂಸದರ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂಬುದನ್ನು ಉಲ್ಲೇಖಿಸಲಾಗಿದ್ದು 2019ರಲ್ಲಿ 26 ಮಂದಿ ಮುಸ್ಲಿಂ ಸಂಸದರು ಆಯ್ಕೆಯಾಗಿದ್ದರು,

ಆದರೆ ಈ ಬಾರಿ ಕೇವಲ 24 ಮಂದಿ ಮುಸ್ಲಿಂ ಸಂಸದರು ಆಯ್ಕೆಯಾಗಿದ್ದಾರೆ ಎಂಬ ಮಾಹಿತಿಯನ್ನು ಉಲ್ಲೇಖಿಸಲಾಗಿದೆ. ಇನ್ನು ವೈರಲ್‌ ವಿಡಿಯೋದಲ್ಲಿ ಯೂಸುಫ್ ಪಠಾಣ್, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೆಸರುಗಳು ಇಲ್ಲದಿರುವುದನ್ನು ಕೂಡ ಗಮನಿಸಬಹುದಾಗಿದೆ. ಈ ಬಗ್ಗೆ ABP ನ್ಯೂಸ್‌ ಕೂಡ ವರದಿಯನ್ನು ಮಾಡಿದೆ.

 

 

 

 

 

 

 

 

 

 

 

 

 

 

 

ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ 24 ಮುಸ್ಲಿಂ ಅಭ್ಯರ್ಥಿಗಳು ಗೆಲುವನ್ನು ಸಾಧಿಸಿದ್ದು, ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಮುಸ್ಲಿಂ ಸಂಸದರು ಲೋಕಸಭೆಗೆ ಪ್ರವೇಶಿಸಿರುವ ಸಂಖ್ಯೆಯಲ್ಲಿ ಕುಸಿತ ಕಂಡು ಬಂದಿದೆ. ಕಳೆದ ಬಾರಿ 26 ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಸಂಸದರು ಲೋಕಸಭೆ ಪ್ರವೇಶಿಸಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳೇ 78 ಮಂದಿ ಇರುವಾಗ ಅದು ಹೇಗೆ 98 ಜನ ಆಯ್ಕೆಯಾಗಲು ಸಾಧ್ಯ? ಹಾಗಾಗ 98 ಮಂದಿ ಮುಸ್ಲಿಂ ಸಂಸದರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾಗಿದ್ದಾರೆ ಎಂಬುದು ಸುಳ್ಳು.

ಚುನಾವಣೆಯಲ್ಲಿ ಸ್ಪರ್ಧಿಸಿದ್ದ 78 ಮಂದಿ ಮುಸ್ಲಿಂ ಅಭ್ಯರ್ಥಿಗಳ ಪೈಕಿ ಸಂಸದರಾಗಿ ಆಯ್ಕೆಯಾಗಿರುವವರು 24 ಜನರು ಮಾತ್ರ ಇನ್ನು ಈ ಸಂದೇಶದಲ್ಲಿ ಹಂಚಿಕೊಳ್ಳಲಾಗುತ್ತಿರುವ ಬಹುತೇಕ ಅಭ್ಯರ್ಥಿಗಳ ಹೆಸರು ನಕಲಿಯಾಗಿದೆ. ವಾಸ್ತವವಾಗಿ ರಾಷ್ಟ್ರ ಧರ್ಮ ಎಂಬ ಬಲಪಂಥೀಯ ಸೋಶಿಯಲ್ ಮೀಡಿಯಾದಿಂದ ಪ್ರಕಟವಾಗಿರುವ ಮುಸ್ಲಿಂ ದ್ವೇಷದ ವಿಡಿಯೋವನ್ನು ಬಲಪಂಥೀಯ ಪ್ರತಿಪಾದಕ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ತಪ್ಪು ಮಾಹಿತಿಯೊಂದಿಗೆ ಕೋಮು ಪ್ರಚೋದನೆಯ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: FACT CHECK | NDA ನಾಯಕರನ್ನಾಗಿ ಮೋದಿಯನ್ನು ಆಯ್ಕೆ ಮಾಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದರೆ ನಿತಿನ್ ಗಡ್ಕರಿ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights