FACT CHECK | NDA ನಾಯಕರನ್ನಾಗಿ ಮೋದಿಯನ್ನು ಆಯ್ಕೆ ಮಾಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದರೆ ನಿತಿನ್ ಗಡ್ಕರಿ ?

ಲೋಕಸಭೆಯಲ್ಲಿ ಬಹುಮತ ಸಾಬೀತು ಪಡಿಸುವ ಉತ್ಸಾಹದಲ್ಲಿರುವ NDA  ಈಗ 292 ಸಂಖ್ಯೆಯು ಬಲಾಬಲ ಹೊಂದಿದೆ. ಇದೇ ಕಾರಣದಿಂದ NDA ಕೂಟದ ಸಂಸದೀಯ ಪಕ್ಷದ ನಾಯಕರಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಭೆಯಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ ನೀಡಲಾಗಿದ್ದು. ಬಿಜೆಪಿ ಮತ್ತು ಮಿತ್ರಪಕ್ಷಗಳ ಎಲ್ಲಾ ಸಂಸದರು ಮತ್ತು ದೊಡ್ಡ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು. ಪ್ರಧಾನಿ ಮೋದಿಯವರು ಸಭೆಗೆ ಪ್ರವೇಶಿಸಿದ ಕೂಡಲೇ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಮೋದಿಯನ್ನು ಅಭಿನಂದಿಸಲು ಎಲ್ಲರೂ ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸುತ್ತಿದ್ದರೆ ಬಿಜೆಪಿಯ ಹಿರಿಯ ನಾಯಕ ನಿತಿನ್ ಗಡ್ಕರಿ ಮಾತ್ರ ಎದ್ದು ನಿಲ್ಲದೆ ಮೋದಿ ಆಯ್ಕೆಗೆ ಅಸಮ್ಮತಿ ಸೂಚಿಸುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ಅಸಹ್ಯವನ್ನು ವಿರೋಧ ಮಾಡುವಂತ ಧೈರ್ಯವನ್ನು ಒಬ್ಬರಾದರೂ ತೋರಿದ್ದಾರೆ. ವಿಡಿಯೋ ನೋಡಲು ಸಂತೋಷವಾಗುತ್ತಿದೆ ಎಂದು ಪ್ರತಿಪಾದಿಸಿ. ನಿತಿನ್ ಗಡ್ಕರಿ ಕುಳಿತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾದ ವಿಡಿಯೋದಲ್ಲಿ,  ದೆಹಲಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ನಾಯಕ ನಿತಿನ್ ಗಡ್ಕರಿ ಎದ್ದುನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಲು ನಿರಾಕರಿಸಿದರು ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯ ಕಿರು ವೀಡಿಯೊವನ್ನು ಪರಿಶೀಲಿಸಲು, ಕೀವರ್ಡ್‌ಗಳನ್ನು ಬಳಸಿ ಗೂಗಲ್ ಸರ್ಚ್ ಮಾಡಿದಾಗ, ನರೇಂದ್ರ ಮೋದಿ ಅವರು NDA ಸಂಸದೀಯ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದ  ಲೈವ್ ವಿಡಿಯೋ ಲಭ್ಯವಾಗಿದೆ.

 

ನರೇಂದ್ರ ಮೋದಿಯವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಾದ ಸುಧೀರ್ಘ 2ಗಂಟೆ 33 ನಿಮಿಷಗಳ ವಿಡಿಯೋದಲ್ಲಿ  ಮೋದಿಯವರು ಸಭೆಗೆ ಹಾಜರಾದಾಗ ಅವರನ್ನು ಸ್ವಾಗತಿಸಲು , ನಿತಿನ್ ಗಡ್ಕರಿ  ಸೇರಿದಂತೆ ಇತರ ನಾಯಕರು ಎದ್ದು ನಿಂತು ಚಪ್ಪಾಳೆ ತಟ್ಟುವುದನ್ನು 2 ನಿಮಿಷದ 20 ಸೆಕೆಂಡುಗಳ ಅವದಿಯಲ್ಲಿ ಕಾಣಬಹುದು.

Image

ಹಳೆಯ ಪಾರ್ಲಿಮೆಂಟ್‌ ಕಟ್ಟಡದಲ್ಲಿ ನಡೆದ NDA ಕೂಟದ ಸಂಸದೀಯ ಸಭೆಗೆ ಆಗಮಿಸಿದ ನರೇಂದ್ರ ಮೋದಿ ಆಗಮಿಸಿದಾಗ  ಎಲ್ಲರೊಂದಿಗೆ ನಿತಿನ್ ಗಡ್ಕರಿಯೂ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಮೋದಿಯನ್ನು ಸ್ವಾಗತಿಸಿದ್ದಾರೆ. ಹಾಗೆಯೇ ಮೋದಿಯನ್ನುNDA ಕೂಟದ ಸಂಸದೀಯ ನಾಯಕನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದಾಗಾಲೂ ನಿತಿನ್ ಗಡ್ಕರಿ ಮೋದಿಯನ್ನು ಅಭಿನಂದಿಸುವುದನ್ನು ಕಾಣಬಹುದು.

ಈ ವಿಡಿಯೋವನ್ನು ನರೇಂದ್ರ ಮೋದಿಯವರ ಅಧಿಕೃತ ಎಕ್ಸ್‌ ಖತೆಯಲ್ಲಿ ಹಂಚಿಕೊಂಡಿರುವುದನ್ನು ಇಲ್ಲಿ ನೋಡಬಹುದು. ಹಾಗಾಗಿ ನಿತಿನ್ ಗಡ್ಕರಿ ಮೋದಿ ಆಯ್ಕೆಗೆ ಬೇಸರ ಮಾಡಿಕೊಂಡ ಸಂಕೇತವಾಗಿ ಅವರಿಗೆ ಎದ್ದು ನಿಂತು ಚಪ್ಪಾಳೆ ತಟ್ಟಿಲ್ಲ ಎಂಬುದು ಸುಳ್ಳು

ಒಟ್ಟಾರೆಯಾಗಿ ಹೇಳುವುದಾದರೆ, ಎನ್‌ಡಿಎ ಸಂಸದೀಯ ಪಕ್ಷದ ನಾಯಕರಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿರುವುದಕ್ಕೆ ನಿತಿನ್ ಗಡ್ಕರಿ ಬೇಸರ ಮಾಡಿಕೊಂಡಿದ್ದಾರೆ ಎಂಬುದು ಸುಳ್ಳು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಚುನಾವಣೆಯಲ್ಲಿ ಸೋತ ನಂತರ ಬಿಜೆಪಿ ಅಭ್ಯರ್ಥಿ ನವನೀತ್ ರಾಣಾ ಬಿಕ್ಕಿ ಬಿಕ್ಕಿ ಅತ್ತಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights