FACT CHECK | ಬಾಂಗ್ಲಾದ ಸೇನೆಯು ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ ಎಂದು ಸುಳ್ಳು ವಿಡಿಯೋ ಹಂಚಿಕೆ
ಬಾಂಗ್ಲಾದೇಶದ ಸೇನೆಯು ಅಲ್ಲಿನ ದುಷ್ಕರ್ಮಿಗಳೊಂದಿಗೆ ಸೇರಿ ಹಿಂದೂಗಳನ್ನು ಅವರ ಮನೆಗಳಿಂದ ಹೊರಹಾಕುತ್ತಿದೆ ಮತ್ತು ಬಲವಂತವಾಗಿ ಅಲ್ಲಿಂದ ಓಡಿಸುತ್ತಿದೆ ಎಂದು ಹೇಳುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಶ್ರೀಹಸ್ತಿನಿ ಎಂಬವರು ಆಗಸ್ಟ್ 20, 2024 ರಂದು ಈ ವೀಡಿಯೊವನ್ನು ಹಂಚಿಕೊಂಡಿದ್ದು, ‘ಈಗ ಬಾಂಗ್ಲಾದೇಶದ ಗಲಭೆಕೋರರ ಜೊತೆಗೆ ಅಲ್ಲಿನ ಸೇನೆಯೂ ಅವರಿಗೆ ಬಹಿರಂಗವಾಗಿ ಬೆಂಬಲ ನೀಡುತ್ತಿದೆ ಮತ್ತು ಹಿಂದೂಗಳನ್ನು ದೊಡ್ಡ ಮನೆಗಳು ಮತ್ತು ಬಂಗಲೆಗಳಿಂದ ಅವರ ಮನೆಗಳಿಂದ ಹೊರಹಾಕಲಾಗಿದೆ, ಹೊಡೆದು ಬಾಂಗ್ಲಾದೇಶದಿಂದ ಓಡಿಸಲಾಗುತ್ತಿದೆ.’ ಎಂದು ಬರೆದುಕೊಂಡಿದ್ದಾರೆ.
ಈಗ ಬಾಂಗ್ಲಾದೇಶದ ಗಲಭೆಕೋರರ ಜೊತೆಗೆ ಅಲ್ಲಿನ ಸೇನೆಯೂ ಅವರಿಗೆ ಬಹಿರಂಗವಾಗಿ ಬೆಂಬಲ ನೀಡುತ್ತಿದೆ ಮತ್ತು ಹಿಂದೂಗಳನ್ನು ದೊಡ್ಡ ಮನೆಗಳು ಮತ್ತು ಬಂಗಲೆಗಳಿಂದ ಅವರ ಮನೆಗಳಿಂದ ಹೊರಹಾಕಲಾಗಿದೆ, ಹೊಡೆದು ಬಾಂಗ್ಲಾದೇಶದಿಂದ ಓಡಿಸಲಾಗುತ್ತಿದೆ. pic.twitter.com/4GwD48CuKT
— ಶ್ರೀಹಸ್ತಿನಿ (Modi ka Parivar) (@Shobha_Music) August 19, 2024
ಹಾಗೆಯೆ ಮರಿಯಪ್ಪ ಕೊಟ್ನಿಕಲ್ ಎಂಬವರು ಆಗಸ್ಟ್ 19, 2024 ರಂದು ಇದೇ ವಿಡಿರೋವನ್ನು ರೀಲ್ಸ್ ನಂತೆ ಅಅಪ್ಲೋಡ್ ಂಆಡಿಇ ಹಂಚಿಕೊಂಡು, ‘ಈಗ, ಬಾಂಗ್ಲಾದೇಶಿ ಜಿಹಾದಿಗಳೊಂದಿಗೆ, ಅಲ್ಲಿಯ ಸೈನ್ಯವೂ ಅವರಿಗೆ ಬಹಿರಂಗವಾಗಿ ಬೆಂಬಲ ನೀಡುತ್ತಿದೆ ಮತ್ತು ದೊಡ್ಡ ಮನೆಗಳು ಮತ್ತು ಬಂಗಲೆಗಳಿಂದ ಹಿಂದೂಗಳನ್ನು ಅವರ ಮನೆಗಳಿಂದ ಹೊರಹಾಕಲಾಗುತ್ತಿದೆ. ಹಾಗೆಯೇ ದೊಡ್ಡ ಮನೆಗಳು ಮತ್ತು ಬಂಗಲೆಗಳನ್ನು ಹೊಂದಿರುವ ಹಿಂದೂಗಳು ಅಲ್ಲಿನ ಲೋಕಸಭಾ ಚುನಾವಣೆಯಲ್ಲಿ ಮತ ಹಾಕಲು ಹೋಗಿಲ್ಲ ತಮ್ಮ ತಮ್ಮ ಹೆಂಡತಿ ಮತ್ತು ಮಕ್ಕಳೊಂದಿಗೆ ಪ್ರವಾಸ ಹೋಗಿದ್ದರು, ದಯವಿಟ್ಟು ಇಲ್ಲಿನ ಅಂತಹವರಿಗೆ ಪಾಠ ಕಲಿಸಲು ಶೇರ್ ಮಾಡಿ’ ಎಂದು ಅಡಿ ಬರಹ ನೀಡಿದ್ದಾರೆ.
ಇದೇ ರೀತಿಯ ವೈರಲ್ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ಕಾಣಬಹುದು. ಹಾಗಿದ್ದರೆ ಈ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಬಾಂಗ್ಲಾದಲ್ಲಿ ಹಿಂದೂಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ಗಳನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಹಲವು ಬಾಂಗ್ಲಾದೇಶದ ಯೂಟ್ಯೂಬ್ ಚಾನಲ್ಗಳಲ್ಲಿ ಅಪ್ಲೋಡ್ ಅದೇ ವಿಡಿಯೋ ಲಭ್ಯವಾಗಿದೆ. ಜೊತೆಗೆ ಬಾಂಗ್ಲಾದೇಶ ಮಿಲಿಟರಿ ಫೇಸ್ಬುಕ್ ಖಾತೆಯಲ್ಲಿ ಈ ಘಟನೆ ಕುರಿತು ಮಾಹಿತಿ ನೀಡಲಾಗಿದೆ.
ವೈರಲ್ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಇದರಲ್ಲಿ ಅನೇಕ ಜನರು ಕಟ್ಟಡದಿಂದ ಹೊರಗೆ ಓಡುತ್ತಿರುವುದನ್ನು ಕಾಣಬಹುದು. ಒಟ್ಟು ಒಂದು ನಿಮಿಷ 30 ಸೆಕೆಂಡ್ಗಳ ವೀಡಿಯೋದಲ್ಲಿ 33 ಸೆಕೆಂಡ್ ನಿಂದ 37 ಸೆಕೆಂಡ್ ವರೆಗಿನ ಫ್ರೇಮ್ನಲ್ಲಿ ವ್ಯಕ್ತಿಯೊಬ್ಬರು ಕದ್ದ ವಸ್ತುಗಳನ್ನು ರಸ್ತೆಯಲ್ಲೇ ಇಟ್ಟು ಹೊಡೆಯುವುದರಿಂದ ತಪ್ಪಿಸಲು ಯತ್ನಿಸುತ್ತಿರುವುದನ್ನು ಕಾಣಬಹುದು. ಇದಾದ ನಂತರ ಇನ್ನೊಂದು ಚೌಕಟ್ಟಿನಲ್ಲಿ ಕಟ್ಟಡದಿಂದ ಗಂಡಸರು ಮತ್ತು ಹೆಂಗಸರು ಹೊರಬರುವುದನ್ನು ನೋಡುತ್ತೇವೆ, ಸೈನಿಕರನ್ನು ಕಂಡ ಕೂಡಲೇ ಇವರು ಓಡಲು ಶುರು ಮಾಡುತ್ತಾರೆ.
.jpg?w=640&auto=format%2Ccompress)
ಪ್ರಾಥಮಿಕ ತನಿಖೆಯಲ್ಲಿ ಇದು ದರೋಡೆ ಪ್ರಕರಣವೆಂದು ಕಾಣುತ್ತದೆ. ಫೇಸ್ಬುಕ್ ಖಾತೆಯಲ್ಲಿ ಆಗಸ್ಟ್ 10, 2024 ರಂದು ಇದೇ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ‘ಬಾಂಗ್ಲಾದೇಶ ಸೇನೆಯು ಲೂಟಿಕೋರರು ಮತ್ತು ಅವಕಾಶವಾದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ.’ ಎಂದು ಬರೆದುಕೊಂಡಿದೆ.
ಹಾಗೆಯೆ ಆಗಸ್ಟ್ 10, 2024 ರಂದು ‘ಬಾಂಗ್ಲಾಧಾರ’ ಯೂಟ್ಯೂಬ್ ಚಾನೆಲ್ನಲ್ಲಿ ಇದೇ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಬಂಗಾಳಿ ಭಾಷೆಯಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘ದರೋಡೆ ಮಾಡುತ್ತಿದ್ದ ಜನರ ವಿರುದ್ಧ ಸೇನೆಯ ಕ್ರಮ’ ಎಂದು ಶೀರ್ಷಿಕೆ ನೀಡಲಾಗಿದೆ.
ಇನ್ನೊಂದು ಯೂಟ್ಯೂಬ್ ಚಾನಲ್ನಲ್ಲಿ ಕೂಡ ನಾವು ಇದೇ ವೀಡಿಯೊವನ್ನು ಕಂಡುಕೊಂಡಿದ್ದೇವೆ, ಅದನ್ನು ಆಗಸ್ಟ್ 11, 2024 ರಂದು ಅಪ್ಲೋಡ್ ಮಾಡಲಾಗಿದೆ. ಇದಕ್ಕೆ ‘ಚಿತ್ತಗಂಗ್ನಲ್ಲಿ ಮನೆಯನ್ನು ಲೂಟಿ ಮಾಡಿದ ಸಂದರ್ಭ’ ಎಂಬ ಹೆಡ್ಲೈನ್ ನೀಡಲಾಗಿದೆ.
”ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ದರೋಡೆ ಮಾಡಿದ ವಸ್ತುಗಳೊಂದಿಗೆ ಓಡಿಹೋಗಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಬಳಿಕ ಸೈನಿಕರು ಆತನನ್ನು ಸುತ್ತುವರಿದಾಗ ಅದನ್ನು ಹಿಂದಿರುಗಿಸುವುದನ್ನು ಸಹ ಕಾಣಬಹುದು. ಬಾಂಗ್ಲಾದೇಶದ ಸೇನೆಯು ಹಿಂದೂಗಳನ್ನು ಅವರ ಮನೆಗಳಿಂದ ಹೊರಹಾಕುತ್ತಿದೆ ಎಂದು ವೈರಲ್ ಆಗುತ್ತಿರುವ ಸುದ್ದಿ ಸುಳ್ಳು,” ಎಂದು ಅವರು ಹೇಳಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಇರುವಂತೆ ಬಾಂಗ್ಲಾ ಸೈನಿಕರು ಹಿಂದೂಗಳನ್ನು ಮನೆಯಿಂದ ಹೊರಹಾಕಲಾಗುತ್ತಿದೆ ಎಂಬುದು ಸುಳ್ಳು. ವಾಸ್ತವವಾಗಿ ದರೋಡೆ ಮಾಡುತ್ತಿದ್ದ ಜನರ ವಿರುದ್ಧ ಕ್ರಮ ಕೈಗೊಳ್ಳುತ್ತಿರುವ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಐಶ್ವರ್ಯಾ ರೈಗೆ ಡಿವೋರ್ಸ್ ನೀಡಿದ್ರಾ ಅಭಿಷೇಕ್ ಬಚ್ಚನ್ ! ವೈರಲ್ ವಿಡಿಯೋದ ಅಸಲೀಯತ್ತೇನು?

