ಫ್ಯಾಕ್ಟ್‌ಚೆಕ್ : ದರೋಡೆಕೋರರನ್ನು ನಾಗರಿಕರೇ ಕೊಲ್ಲುವಂತೆ ಬ್ರೆಜಿಲ್ ಸರ್ಕಾರ ಆದೇಶಿಸಿದೆಯೇ?

ಬ್ರೆಜಿಲ್ ಸರ್ಕಾರವು, ದರೋಡೆ ಮಾಡುವವರನ್ನು ನಾಗರೀಕರೆ ನೇರವಾಗಿ ಕೊಲ್ಲುವಂತಹ ಕಾನೂನೊಂದನ್ನು ಜಾರಿ ಮಾಡಿದ್ದು,  ದರೋಡೆ ಮಾಡುವ ದರೋಡೆಕೋರರನ್ನು ಕೊಲ್ಲಲು ನಾಗರಿಕರಿಗೆ ಅನುಮತಿ ನೀಡಿದೆ ಎಂದು ಹೇಳಿಕೊಂಡು ವಿಡಿಯೋ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ನಾಗರಿಕರನ್ನು ಬೆದರಿಸಿ ದರೋಡೆ ಮಾಡುವ ಮೋಟಾರ್‌ಸೈಕಲ್ ಸವಾರರ ಹತ್ಯೆ ಮಾಡುವುದನ್ನು ತೋರಿಸುವ  ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. ಪೊಲೀಸರು ಎಲ್ಲ ಸಂದರ್ಭದಲ್ಲಿಯೂ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲ  ಹಾಗಾಗಿ ಈ ಕ್ರಮ ಅನಿವಾರ್ಯ ಮತ್ತು ಹೆಚ್ಚು ಪರಿಣಾಮಕಾರಿ ಎಂದು ಪ್ರತಿಪಾದಿಸಲಾಗಿದೆ. ಹಾಗೆಯೇ ದರೋಡೆಕೋರರನ್ನು ಕಾರಿನಲ್ಲಿ ಗುದ್ದಿ, ಅವರ ಮೇಲೆಯೇ ಕಾರು ಹರಿಸುವ ದೃಶ್ಯಗಳು ಹರಿದಾಡುತ್ತಿವೆ.

ಹಾಗಿದ್ದರೆ ಈ ವಿಡಿಯೋದಲ್ಲಿ ಹೇಳಿರುವಂತೆ ಬ್ರೆಜಿಲ್‌ನಲ್ಲಿ ಇಂತಹದೊಂದು ಕಾನೂನು ಜಾರಿಯಾಗಿದೆಯೇ ಎಂದು ವಿಡಿಯೊ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಬ್ರೆಜಿಲ್ ಸರ್ಕಾರ ಆ ರೀತಿಯ ಕಾನೂನು ತಂದಿದೆ ಎಂಬುದನ್ನು ಯಾವ ಮಾಧ್ಯಮಗಳು ಸಹ ವರದಿ ಮಾಡಿಲ್ಲ. ಒಂದು ವೇಳೆ ಕಾನೂನು ಬಂದಿದ್ದರೆ ಮಾಧ್ಯಮಗಳು ಖಂಡಿತ ವರದಿ ಮಾಡುತ್ತಿದ್ದವು. ಆ ವರದಿಗಳು ನಮಗೆ ಸಿಕ್ಕಿಲ್ಲ.

ಇನ್ನು ವೈರಲ್ ವಿಡಿಯೋವನ್ನು ಹೋಲುವ ಮತ್ತೊಂದು ವಿಡಿಯೋ ಇಂಡೋನೇಷಿಯಾದಲ್ಲಿ ಕಂಡುಬಂದಿದೆ. ಇಂಡೋನೇಷಿಯಾದ ಸುದ್ದಿ ಸೈಟ್ Suara.com ಪ್ರಕಾರ, ವೀಡಿಯೊದಲ್ಲಿ ಕಂಡುಬರುವ ಘಟನೆಯು ಏಪ್ರಿಲ್‌ನಲ್ಲಿ ಸಂಭವಿಸಿದ್ದು, ವೀಡಿಯೊದಲ್ಲಿ ಗಾಯಗೊಂಡ ದ್ವಿಚಕ್ರ ವಾಹನ ಚಾಲಕರು ವಾಸ್ತವಿಕವಾಗಿ ದರೋಡೆಕೋರರು ಎಂದು ವರದಿಗಳು ಹೇಳುತ್ತವೆ.  @DeniPetron ಎಂಬ ಟ್ವಿಟರ್ ಖಾತೆಯಿಂದ ಅಪ್‌ಲೋಡ್ ಮಾಡಲಾದ ವೀಡಿಯೊಗಳಲ್ಲಿ ದರೋಡೆಕೋರರ ನಡೆಸಲು ಉದ್ದೇಶಿಸಿದ್ದ ಕ್ರಿಯೆಗಳು ಸೆರೆಯಾಗಿವೆ, ದರೋಡೆಕೊರರನ್ನು ನಿಯಂತ್ರಿಸಲು ನಾಗರೀಕರು ತಮ್ಮ ಕಾರುಗಳಿಂದ ಗುದ್ದಿ ಗಾಯಗೊಳ್ಳುವಂತೆ ಮಾಡುವ ದೃಶ್ಯಗಳನ್ನು ಕಾಣಬಹುದು. ಆದರೆ ಇದು ಎಲ್ಲಿ ನಡೆದಿದೆ ಎಂದು ಪರಿಶೀಲಿಸಲು ಸಾಧ್ಯವಾಗದಿದ್ದರೂ ಈ ವಿಡಿಯೋಗೂ ಬ್ರೆಜಿಲ್‌ಗೂ ಸಂಬಂಧವಿಲ್ಲ ಎಂಬುದು ಖಚಿತವಾಗಿದೆ.

ವಿಡಿಯೋದಲ್ಲಿನ ದೃಶ್ಯಗಳನ್ನು ಟ್ವಿಟರ್‌ನಲ್ಲಿ  ಹಲವರು ಖಂಡಿಸಿದ್ದು,  ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದು ಅತ್ಯಂತ ನಿರ್ದಯ ಮತ್ತು ನ್ಯಾಯಸಮ್ಮತವಲ್ಲದ ಕೃತ್ಯಗಳು. ಇದು ಮಾನವ ಹಕ್ಕುಗಳ ಉಲ್ಲಂಘನೆ ಅಲ್ಲವೇ? ಪೊಲೀಸರಿಗೆ ಯಾವ ಉದ್ದೇಶಕ್ಕಾಗಿ ವೇತನ ನೀಡಲಾಗುತ್ತಿದೆ? ರಸ್ತೆಗಳಲ್ಲಿ ಅವರನ್ನು ಅಮಾನುಷವಾಗಿ ಕೊಲ್ಲುವುದಕ್ಕಿಂತ ತಂತ್ರಜ್ಞಾನ ಬಳಸಿ ದರೋಡೆಕೋರರನ್ನು ಬಂಧಿಸುವುದು ಪೊಲೀಸರ ಕರ್ತವ್ಯ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

ಆದರೂ, ಈ ವೀಡಿಯೊಲ್ಲಿ ಕಂಡು ಬರುವ ದೃಶ್ಯಗಳು ದೇಶದಲ್ಲಿ ಸಂಭವಿಸಿದ ಹಲವಾರು ಅಪರಾಧಗಳ ಸಂಮಿಶ್ರಣದ ವಿಡಿಯೊ ಆಗಿದೆ. ಆದರೆ ಬ್ರೆಜಿಲ್ ಸರ್ಕಾರ ಎಲ್ಲಿಯೂ ತನ್ನ ದೇಶದ ನಾಗರಿಕರಿಗೆ ದರೋಡೆಕೋರರನ್ನು ಕೊಲ್ಲುವಂತೆ ಆದೇಶ ಹೊರಡಿಸಿಲ್ಲ. ಮತ್ತು ವೈರಲ್ ದೃಶ್ಯಗಳಿಗೂ ಬ್ರೆಜಿಲ್ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಇದು ಸ್ಮೃತಿ ಇರಾನಿಯವರ 18 ವರ್ಷದ ಮಗಳು ಜೋಯಿಶ್ ಇರಾನಿಯ ನಿಶ್ಚಿತಾರ್ಥದ ಫೋಟೋ ಅಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights