ಫ್ಯಾಕ್ಟ್‌ಚೆಕ್ : ಕೆನಡಾದಲ್ಲಿ RSS ಅನ್ನು ನಿಷೇಧಿಸಲಾಗಿದೆಯೇ?

ಕೆನಡಾ ಮತ್ತು ಭಾರತದ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಉದ್ವಿಗ್ನತೆಯ ನಡುವೆ, ಕೆನಡಾವು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್ಎಸ್ಎಸ್) ನಿಷೇಧಿಸಿದೆ ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ಉದ್ವಿಗ್ನತೆ ಉಲ್ಬಣಗೊಂಡಿದೆ.ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಸರ್ಕಾರಿ ಏಜೆಂಟರು ಸಮರ್ಥವಾಗಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಕೆನಡಾ ಪುರಾವೆಗಳನ್ನು ವಾರಗಳ ಹಿಂದೆ ನವದೆಹಲಿಯೊಂದಿಗೆ ಹಂಚಿಕೊಂಡಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಶುಕ್ರವಾರ ಹೇಳಿದ್ದಾರೆ.

ಇದರ ನಡುವೆ ಕೆನಡಾ RSS ಅನ್ನು ನಿಷೇದಿದೆ ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸೊಣ.

ಫ್ಯಾಕ್ಟ್‌ಚೆಕ್ :

ಕೆನಡಾದಲ್ಲಿ ನಿಜವಾಗಿಯೂ RSS ಅನ್ನು ಬ್ಯಾನ್ ಮಾಡಲಾಗಿದೆಯೇ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸಿದಾಗ, NCCM ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋ ಲಭ್ಯವಾಗಿದೆ.

NCCM ಒಂದು ಸರ್ಕಾರೇತರ ಸಂಸ್ಥೆಯಾಗಿದೆ (ಅವರ ವೆಬ್‌ಸೈಟ್ ಪ್ರಕಾರ), ಮತ್ತು ವೀಡಿಯೊದಲ್ಲಿ ಕಂಡುಬರುವ ಸ್ಟೀಫನ್ ಬ್ರೌನ್ ಅವರು CEO ಆಗಿದ್ದಾರೆ. ಎನ್‌ಸಿಸಿಎಂ ಮತ್ತು ಕೆನಡಾದ ವರ್ಲ್ಡ್ ಸಿಖ್ ಆರ್ಗನೈಸೇಶನ್ ಆಯೋಜಿಸಿದ್ದ ಪತ್ರಿಕಾಗೋಷ್ಠಿಯ ಕ್ಲಿಪ್‌ಅನ್ನು ಹಂಚಿಕೊಳ್ಳಲಾಗಿದೆ.

ಇಲ್ಲಿ, ಸ್ಟೀಫನ್ ಆರೆಸ್ಸೆಸ್ ಅನ್ನು ನಿಷೇಧಿಸಲು ಕರೆ ನೀಡಿದ್ದು ಹೌದು, ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಗೆ ಸಂಬಂಧಿಸಿದಂತೆ  ಮೂರು ಹೆಚ್ಚುವರಿ ಬೇಡಿಕೆಗಳನ್ನು ಮಂಡಿಸಿದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸ್ಟೀಫನ್ ಬ್ರೌನ್ ಕೆನಡಾ ಸರ್ಕಾರದ ಅಧಿಕೃತ ವ್ಯಕ್ತಿ ಅಲ್ಲ ಆತ ಒಂದು ಸಂಸ್ಥೆಯ ಮುಖ್ಯಸ್ಥ. ಹಾಗಾಗಿ ಆತ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತ ಈ ಹೇಳಿಕೆಯನ್ನು ನೀಡಿದ್ದಾನೆ.

ಆರ್‌ಎಸ್‌ಎಸ್‌ನ ನಿಷೇಧದ ಕುರಿತು ಯಾವುದೇ ಅಧಿಕೃತ ಪ್ರಕಟಣೆಯನ್ನು ಮಾಡಲಾಗಿದೆಯೇ ಎಂದು ಪರಿಶೀಲಿಸಲು ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿಯೂ ಸರ್ಚ್ ಮಾಡಿದಾಗ ಅಲ್ಲಿಯೂ ಅಂತಹ ಯಾವುದೇ ಉಲ್ಲೇಖವಾಗಲಿ ಆದೇಶಗಳಾಗಲಿ ಇಲ್ಲ. ಕೆನಡಾ RSS ಅನ್ನು ನಿಷೇಧಿಸುವಂತಹ ಯಾವುದೇ ವಿಶ್ವಾಸಾರ್ಹ ಮಾಹಿತಿ ಲಭ್ಯವಾಗಿಲ್ಲ. ಅಂದರೆ 22 ಸೆಪ್ಟೆಂಬರ್ 2023 ರ ವರೆಗೂ ಅಂತಹ ಯಾವುದೇ ಸುದ್ದಿ ವರದಿಗಳಿಲ್ಲ ಲಭ್ಯವಾಗಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಕೆನಡಾದ ಸಮುದಾಯ ಸಂಸ್ಥೆಯ ಸಿಇಒ ಸ್ಟೀಫನ್ ಬ್ರೌನ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ತಮ್ಮ ವಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತ ಕರೆ ನೀಡಿದ್ದ ಸಂದರ್ಭವನ್ನು, ಕೆನಡಾ ಸರ್ಕಾರವು ಭಾರತಕ್ಕೆ ತಿರುಗೇಟು ನೀಡಲು RSS ಅನ್ನು ನಿಷೇಧಿಸಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ ಮತ್ತು ಬೂಮ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಮದುವೆ ವಿಚಾರವಾಗಿ ರೂಮರ್ಸ್ ಹಬ್ಬಿಸಬೇಡಿ ಎಂದ ನಟಿ ಸಾಯಿ ಪಲ್ಲವಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights