ಫ್ಯಾಕ್ಟ್‌ಚೆಕ್ : ಭಯೋತ್ಪಾದಕನ ಜೊತೆ ಅಮೀರ್ ಖಾನ್ ಫೋಟೋ ಎಂಬುದು ಸುಳ್ಳು

ಜಮಾತ್-ಎ-ಉಲ್ ಭಯೋತ್ಪಾದಕ ತಾರಿಕ್ ಜಮೀಲ್ ಜೊತೆ ಅಮೀರ್ ಖಾನ್ ಮತ್ತು ಶಾಹೀದ್ ಅಫ್ರಿದಿ ಇದ್ದಾರೆ ಎಂಬ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಭಾರತದ ಖ್ಯಾತ ಚಿತ್ರನಟ ಅಮೀರ್ ಖಾನ್ ಜಮಾತ್-ಎ-ಉಲ್ ಭಯೋತ್ಪಾದಕ ತಾರಿಕ್ ಜಮೀಲ್ ಅವರೊಂದಿಗೆ ಇರುವುದು ನಿಜವೇ ಎಂದು ಪೊಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

“ಅಮೀರ್ ಖಾನ್, ಅಫ್ರಿದಿ, ತಾರಿಕ್ ಜಮೀಲ್” ಎಂಬ ಕೀವರ್ಡ್ ಬಳಸಿ ಸರ್ಚ್ ಮಾಡಿದಾಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಅದೇ ಚಿತ್ರವನ್ನು ಹೋಲುವ ಅಕ್ಟೋಬರ್ 23, 2012 ರಂದು ಪ್ರಕಟವಾದ ಸುದ್ದಿ ವರದಿಯು ಲಭ್ಯವಾಗಿದೆ.

ಪಾಕಿಸ್ತಾನದ ಧಾರ್ಮಿಕ ವಿದ್ವಾಂಸ ತಾರಿಕ್ ಜಮೀಲ್ ಅವರು ಸೌದಿ ಅರೇಬಿಯಾದ ಸ್ಥಳೀಯ ಹೋಟೆಲ್‌ನಲ್ಲಿ ಅಮೀರ್ ಅವರನ್ನು ಭೇಟಿಯಾಗಿದ್ದರು ಎಂದು ವರದಿ ಹೇಳಿದೆ. ನಟ ತನ್ನ ಹಜ್ ಭೇಟಿಯ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಯನ್ನು ಭೇಟಿಯಾಗಿದ್ದರು ಎಂದು ಲೇಖನ ವರದಿ ಮಾಡಿದೆ. ಅಕ್ಟೋಬರ್ 23, 2012 ರಂದು ಪ್ರಕಟವಾದ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಲೇಖನವೂ ಅದನ್ನೇ ವರದಿ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಆದರೆ ತಾರಿಕ್ ಜಮೀಲ್ ಅವರು ಯಾವುದೇ ಭಯೋತ್ಪಾದಕ ಸಂಘಟನೆಗೆ ಸೇರಿದವರಲ್ಲ. ಬದಲಿಗೆ ಖ್ಯಾತ ಧಾರ್ಮಿಕ ವಿದ್ವಾಂಶರಾಗಿದ್ದಾರೆ.

Shahid Afridi and Amir Khan in Saudi Arabia

ನಟ ಅಮೀರ್ ಖಾನ್ ಸೌದಿ ಅರೇಬಿಯಾದಲ್ಲಿ ಭಯೋತ್ಪಾದಕನನ್ನು ಭೇಟಿಯಾದರು ಎಂಬ ಸುಳ್ಳು ಹೇಳಿಕೆಯೊಂದಿಗೆ ನಟ ಅಮೀರ್ ಖಾನ್, ಮುಷ್ತಾಕ್ ಅಫ್ರಿದಿ ಮತ್ತು ಧಾರ್ಮಿಕ ವಿದ್ವಾಂಸ ಮೌಲಾನಾ ತಾರಿಕ್ ಜಮಿಲ್ ಅವರೊಂದಿಗೆ ನಿಂತಿರುವ ಸುಮಾರು ಹತ್ತು ವರ್ಷಗಳ ಹಳೆಯ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಈಗ ಹಂಚಿಕೊಳ್ಳಲಾಗಿದೆ.

ವೈರಲ್ ಚಿತ್ರವು ಹಳೆಯದಾಗಿದೆ ಎಂದು BOOM ವರದಿ ಮಾಡಿದೆ. ಪಾಕಿಸ್ತಾನಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರ ಸಹೋದರ ಮುಷ್ತಾಕ್ ಅಫ್ರಿದಿ ಮತ್ತು ಧಾರ್ಮಿಕ ವಿದ್ವಾಂಸ ಮೌಲಾನಾ ತಾರಿಕ್ ಜಮಿಲ್ ಅವರೊಂದಿಗೆ ಅಮೀರ್ ಖಾನ್ ಪೋಸ್ ನೀಡುವುದನ್ನು ಕಾಣಬಹುದು. 2012 ರ ಹಜ್ ಸಮಯದಲ್ಲಿ ಅಮೀರ್ ಖಾನ್ ತನ್ನ ತಾಯಿಯೊಂದಿಗೆ ಮೆಕ್ಕಾಗೆ ಪ್ರವಾಸ ಕೈಗೊಂಡಿದ್ದರು, ಆ ಸಂದರ್ಭದ ಫೋಟೋ ಎಂದು BHOOM ವರದಿ ಮಾಡಿದೆ.

ವರದಿಯ ಪ್ರಕಾರ, ಮಾಜಿ ವೈಟಲ್ ಸೈನ್ಸ್ ಸದಸ್ಯ ಜುನೈದ್ ಜಮ್ಶೆಡ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವೈಟಲ್ ಸೈನ್ಸ್  ಅನ್ನು ಪಾಕಿಸ್ತಾನದ ಮೊದಲ ಸಂಗೀತ ಬ್ಯಾಂಡ್ ಎಂದು ಕರೆಯಲಾಗುತ್ತದೆ.

Shahid Afridi and Aamir Khan on Dining Table

ಜುನೈದ್ ಜಮ್ಶೆಡ್ ಅವರ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಕೀವರ್ಡ್ ಸರ್ಚ್ ನಡೆಸಿದಾಗ, ಅದೇ ಫೋಟೋವನ್ನು ಅಕ್ಟೋಬರ್ 23, 2012 ರಂದು ಪೋಸ್ಟ್ ಮಾಡಲಾಗಿದೆ. ಜುನೈದ್ ಜಮ್‌ಶೆಡ್ 2016 ರಲ್ಲಿ ವಿಮಾನ ಅಪಘಾತದಲ್ಲಿ ಅಸುನೀಗಿದರು. ಚಿತ್ರದಲ್ಲಿ “ಶಾಹಿದ್ ಅಫ್ರಿದಿ ಮತ್ತು ಅಮೀರ್ ಖಾನ್ ಜೊತೆಗೆ ಮೌಲಾನಾ ತಾರಿಕ್ ಜಮೀಲ್..” ಎಂದು ಶೀರ್ಷಿಕೆ ನೀಡಲಾಗಿದೆ.

ಆದಾಗ್ಯೂ ಛಾಯಾಚಿತ್ರದಲ್ಲಿರುವ ವ್ಯಕ್ತಿ ಶಾಹಿದ್ ಅಫ್ರಿದಿ ಅವರ ಸಹೋದರ ಮುಷ್ತಾಕ್ ಅಫ್ರಿದಿ ಎಂದು BOOM ಖಚಿತಪಡಿಸಲು ಸಾಧ್ಯವಾಗಿದ್ದು, BOOM ಮುಷ್ತಾಕ್ ಅಫ್ರಿದಿ ಅವರನ್ನು ಸಂಪರ್ಕಿಸಿದ್ದು,  ಫೋಟೋದಲ್ಲಿ ಅಮೀರ್ ಖಾನ್‌ನೊಂದಿಗೆ ಇರುವುದು ಅವರೇ ಎಂದು ಖಚಿತಪಡಿಸಿದ್ದಾರೆ.

ಇದಲ್ಲದೆ, ನವೆಂಬರ್ 24, 2013 ರಂದು ದ ಇಂಕ್ ಆಫ್ ಸ್ಕಾಲರ್ಸ್ ಹೆಸರಿನ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ YouTube ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ಮೌಲಾನಾ ತಾರಿಕ್ ಜಮೀಲ್, 2012 ರ ಹಜ್ ಸಮಯದಲ್ಲಿ ಅಮೀರ್ ಖಾನ್ ಅವರ ಕೋರಿಕೆಯ ಮೇರೆಗೆ ಶಾಹಿದ್ ಅಫ್ರಿದಿ ಅವರನ್ನು ಭೇಟಿಯಾಗಲು ಹೇಗೆ ಸಹಾಯ ಮಾಡಿದರು ಎಂಬುದರ ಕುರಿತು ವೀಡಿಯೊದಲ್ಲಿ ಮಾತನಾಡಿದ್ದಾರೆ.

“ನಾನು (ಹಜ್ಜ್) ಹೋದಾಗ ಅವರನ್ನು (ಅಮೀರ್ ಖಾನ್) ಭೇಟಿಯಾಗಲು ನನಗೆ ಯಾವುದೇ ಮಾರ್ಗವಿರಲಿಲ್ಲ. ನನಗೆ ಅವರು ತಿಳಿದಿರಲಿಲ್ಲ ಅಥವಾ ಅವರು ನನ್ನನ್ನು ತಿಳಿದಿರಲಿಲ್ಲ, ಅವರನ್ನು ಭೇಟಿ ಮಾಡಲು ನನಗೆ ಅವಕಾಶ ಸಿಗಲಿಲ್ಲ. ಹಾಗಾಗಿ , ಅಲ್ಲಾಹನು ನಮ್ಮ ಕ್ರಿಕೆಟಿಗ ಶಾಹಿದ್ ಅಫ್ರಿದಿಯನ್ನು ಕಳುಹಿಸಿದನು, ಅವನೊಂದಿಗೆ ಸ್ನೇಹಿತನಾಗಿದ್ದ. ನಾನು ಅವರನ್ನು (ಶಾಹಿದ್ ಅಫ್ರಿದಿ) ಭೇಟಿಯ ಬಗ್ಗೆ ಪ್ರಸ್ತಾಪ  ಮಾಡಿದೆ.  ಶಾಹಿದ್ ಅಫ್ರಿದಿ ಯಿಂದ ಭೇಟಿ ಸಾಧ್ಯವಾಯಿತು ಎಂಧು ವಿಡಿಯೋದಲ್ಲಿ ಹೇಳಿದ್ದಾರೆ.”

ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಚಲನಚಿತ್ರವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ವಿಟರ್ ಮತ್ತು ಫೇಸ್‌ಬುಕ್‌ಗಳಲ್ಲಿ ಟ್ರೆಂಡಿಂಗ್ ಕ್ರಿಯೇಟ್ ಮಾಡಿದ್ದರು, ಈ ಬಗ್ಗೆ ಪ್ರತಿಕ್ರಿಯಿಸಿದ ಖಾನ್, ಸಾಮಾಜಿಕ ಮಾಧ್ಯಮ ಟ್ರೋಲಿಂಗ್ ತನಗೆ ಹೆಚ್ಚು ದುಃಖ ತಂದಿದೆ ಮತ್ತು ನಾನು ಭಾರತವನ್ನು ಪ್ರೀತಿಸುವುದಿಲ್ಲ ಎಂದು ತಪ್ಪು ಅಭಿಪ್ರಾಯ ಬರುವಂತೆ ಮಾಡಿದ್ದಾರೆ, ಆದರೆ ನಾನು ಭಾರತವನ್ನು ಹೆಚ್ಚು ಪ್ರೀತಿಸುತ್ತೇನೆ ಎಂದಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ಮೌಲಾನಾ ತಾರಿಕ್ ಜಮಿಲ್ ಅವರ ಸಂಪರ್ಕದ ಬಗ್ಗೆ ವರದಿ ಮಾಡುವ ಯಾವುದೇ ವಿಶ್ವಾಸಾರ್ಹ ಸುದ್ದಿ ಲೇಖನಗಳು ಲಭ್ಯವಾಗಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : BJP ಪ್ರಕಾರ ಸಿದ್ದರಾಮಯ್ಯನವರಿಗೆ 73 ವರ್ಷವಂತೆ! ಹೌದೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights