FACT CHECK | ಬಿಜೆಪಿ ಕಾರ್ಯಕರ್ತರು EVM ಯಂತ್ರಗಳಲ್ಲಿ ವಿವಿಪ್ಯಾಟ್ ಸ್ಲಿಪ್‌ಗಳನ್ನು ಬದಲಾಯಿಸುವಾಗ ಸಿಕ್ಕಿ ಬಿದ್ದರು ಎಂಬ ವಿಡಿಯೋದ ಅಸಲೀಯತ್ತೇನು?

ಇವಿಎಂ ಯಂತ್ರದಿಂದ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ (VVPAT) ಸ್ಲಿಪ್‌ಗಳನ್ನು ಕೆಲವರು ತೆಗೆದು ಕಪ್ಪು ಲಕೋಟೆಯಲ್ಲಿ ಇಡುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿರುವ ವ್ಯಕ್ತಿ ಇವಿಎಂನಿಂದ ಸ್ಲಿಪ್‌ಗಳನ್ನು ಕದಿಯುತ್ತಿದ್ದಾನೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿದೆ. ಹಲವು ವಾಟ್ಸಾಪ್ ಗ್ರೂಪ್‌ಗಳಲ್ಲಿ ಈ ವಿಡಿಯೋವನ್ನು ಹಲವರು ಶೇರ್ ಮಾಡಿಕೊಳ್ಳುತ್ತಾ “ಈ ವಿಡಿಯೋವನ್ನು ಹೆಚ್ಚು ಹೆಚ್ಚು ಶೇರ್ ಮಾಡಿ ಸುಪ್ರಿಂ ಕೋರ್ಟ್‌ವರೆಗೂ ತಲುಪಲಿ ಎಂಬ ಸಾಲುಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಇವಿಎಂ ಯಂತ್ರದಿಂದ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಸ್ಲಿಪ್‌ಗಳನ್ನು ತೆಗೆದು ಕಪ್ಪು ಲಕೋಟೆಯಲ್ಲಿ ಇಟ್ಟುಕೊಳ್ಳುತ್ತಿರುವ ವ್ಯಕ್ತಿಯ ವೀಡಿಯೊವನ್ನು Instagram ಬಳಕೆದಾರರು ಏಪ್ರಿಲ್ 23 ರಂದು ಹಂಚಿಕೊಂಡಿದ್ದಾರೆ. ವ್ಯಕ್ತಿ ಇವಿಎಂ ಯಂತ್ರದಿಂದ ಚೀಟಿಗಳನ್ನು ಕದಿಯುತ್ತಿದ್ದಾನೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

 

View this post on Instagram

 

A post shared by Panchshila Bauddh (@panchshilabauddh)

ಚುನಾವಣೆ ಸಮೀಪಿಸುತ್ತಿರುವಂತೆಯೇ, ಇಬ್ಬರು ವ್ಯಕ್ತಿಗಳು ವಿವಿಪ್ಯಾಟ್ (ಮತದಾರ-ಪರಿಶೀಲಿಸಿದ ಪೇಪರ್ ಆಡಿಟ್ ಟ್ರಯಲ್) ಯಂತ್ರಗಳಿಂದ ಸ್ಲಿಪ್‌ಗಳನ್ನು ಸ್ಟ್ರಾಂಗ್ ರೂಮ್‌ನಲ್ಲಿ ತೆಗೆಯುತ್ತಿರುವ ಹಳೆಯ ವೀಡಿಯೊವನ್ನು ತೋರಿಸುವ ಹಳೆಯ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ, ಇದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರು ಇವಿಎಂ ವಂಚನೆಯಲ್ಲಿ ತೊಡಗಿರುವುದನ್ನು ತೋರಿಸುತ್ತದೆ ಆರೋಪಿಸಿ ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯ ದೃಶ್ಯಗಳು ಎಂದು ಹಂಚಿಕೊಳ್ಳಲಾಗುತ್ತಿದೆ.

“ BJP ಕಾರ್ಯಕರ್ತರು ಇವಿಎಂ ಯಂತ್ರಗಳಲ್ಲಿ ವಿವಿಪ್ಯಾಟ್ ಸ್ಲಿಪ್‌ಗಳನ್ನು ಬದಲಾಯಿಸುವಾಗ ಸಿಕ್ಕಿಬಿದ್ದರು. @ECISVEEP ಖಂಡಿತವಾಗಿಯೂ ಏನನ್ನೂ ಮಾಡುವುದಿಲ್ಲ! ಈ #LokSabhaElections2024 ನಲ್ಲಿ ಮೋದಿ ಗೆಲುವಿಗೆ ಸಹಾಯ ಮಾಡಿದ ಇವರೆಲ್ಲ  ಗವರ್ನರ್ ಹುದ್ದೆಯ ನಿರೀಕ್ಷೆಯ ಮೇಲೆ ಜೊಲ್ಲು ಸುರಿಸುತ್ತಾರೆ! ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳು ನನ್ನ ಗುರಿ ಎಂಬ ಶೀರ್ಷಿಕೆಯೊಂದಿಗೆ ಎಕ್ಸ್‌ ಬಳಕೆದಾರರು ಈ ವಿಡಿಯೊವನ್ನು  ಹಂಚಿಕೊಂಡಿದ್ದಾರೆ.

ಹಾಗಿದ್ದರೆ ಈ ವಿಡಿಯೋದಲ್ಲಿ ಮಾಡಿರುವ ಪ್ರತಿಪಾದನೆ ನಿಜವೇ? ಬಿಜೆಪಿ ಕಾರ್ಯಕರ್ತರು ಇವಿಎಂ ಯಂತ್ರಗಳಲ್ಲಿ ವಿವಿಪ್ಯಾಟ್ ಸ್ಲಿಪ್‌ಗಳನ್ನು ಬದಲಾಯಿಸುವಾಗ ಸಿಕ್ಕಿಬಿದಿದ್ದಾರೆ ಎಂಬ ಹೇಳಿಕೆಯ  ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯ ವಿಡಿಯೋ ಡಿಸೆಂಬರ್ 2022 ರ  ಗುಜರಾತ್ ಅಸೆಂಬ್ಲಿ ಚುನಾವಣೆಯ ಸಂದರ್ಭದ್ದು ಎಂದು ಬೂಮ್ ಫ್ಯಾಕ್ಟ್‌ಚೆಕ್ ವರದಿಯನ್ನು ಪ್ರಕಟಿಸಿದೆ.

ಡಿಸೆಂಬರ್ 2022ರಲ್ಲಿ ಗುಜರಾತ್ ಅಸೆಂಬ್ಲಿ ಚುನಾವಣೆಯ ಸಮಯದಲ್ಲಿ ಇಬ್ಬರು ಚುನಾವಣಾ ಅಧಿಕಾರಿಗಳು ಈ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೋದ ದೃಶ್ಯಗಳಲ್ಲಿ ಕಂಡುಬರುವ ತುಣುಕು ಯಾವುದೇ ರೀತಿಯ ಇವಿಎಂ ಅಕ್ರಮ ಅಥವಾ ವಂಚನೆಗೆ ಸಂಬಂಧಿಸಿದಲ್ಲ. ಚುನಾವಣಾ ಆಯೋಗದ ಆದೇಶದ ಮೇರೆಗೆ ನಡೆಸಿದ ಕಾರ್ಯವಿಧಾನವಾಗಿದೆ.

 ವ್ಯಕ್ತಿಯೊಬ್ಬ ಸೀಲ್ ಮಾಡಿದ ಪೆಟ್ಟಿಗೆಯನ್ನು ತೆರೆದು ವಿವಿಪ್ಯಾಟ್ ಯಂತ್ರದಿಂದ ಸ್ಲಿಪ್‌ಗಳನ್ನು (ಮತಗಳನ್ನು) ತೆಗೆಯುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ನಂತರ ಚೀಟಿಗಳನ್ನು ಕಪ್ಪು ಬ್ಯಾಗ್‌ವೊಂದರಲ್ಲಿ ಸ್ಲಿಪ್‌ಗಳನ್ನು ಹಾಕಿ, ಪೆಟ್ಟಿಗೆಯನ್ನು ಮುಚ್ಚಿ ಅದರ ಮೇಲೆ ಸ್ಲಿಪ್‌ಗಳ ಖಾಲಿ ರೋಲ್ ಅನ್ನು ಇರಿಸುವುದನ್ನು ನೋಡಬಹುದು. ವಿಡಿಯೋವನ್ನು ರೆಕಾರ್ಡ್ ಮಾಡುವ ವ್ಯಕ್ತಿಯು  ಸ್ಟ್ರಾಂಗ್ ರೂಮ್‌ನ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತ ಎಣಿಕೆಯ ನಂತರ EVM ಯಂತ್ರದಿಂದ VVPAT ಸ್ಲಿಪ್‌ಗಳನ್ನು ತೆಗೆಯುತ್ತಿರುವ ಪ್ರಕ್ರಿಯೆಯನ್ನು ಚಿತ್ರಿಸಿರುವ ವಿಡಿಯೋವನ್ನು, ಬಿಜೆಪಿ ಕಾರ್ಯಕರ್ತರು ಇವಿಎಂ ಯಂತ್ರಗಳಲ್ಲಿ ವಿವಿಪ್ಯಾಟ್ ಸ್ಲಿಪ್‌ಗಳನ್ನು ಬದಲಾಯಿಸುವಾಗ ಸಿಕ್ಕಿಬಿದ್ದರು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ:FACT CHECK | BJP ನಾಯಕನ ಅಶ್ಲೀಲ ಫೋಟೋವನ್ನು ಡಿ.ಕೆ.ಶಿವಕುಮಾರದ್ದು ಎಂದು ತಪ್ಪಾಗಿ ಹಂಚಿಕೊಂಡ ಜಾತ್ಯಾತೀತ ಜನತಾದಳ ಯುವ ಘಟಕ ಹೆಸರಿನ ಫೇಸ್‌ಬುಕ್ ಪೇಜ್‌


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights