ತಮಿಳು ನಾಡು: ಸ್ಫೋಟಕವನ್ನು ಆಹಾರವೆಂದು ಕಚ್ಚಿ ಆರು ವರ್ಷದ ಬಾಲಕ ಸಾವು

ತಮಿಳುನಾಡಿನ ತಿರುಚಿರಪಳ್ಳಿಯ ಅಲಗರೈ ಗ್ರಾಮದಲ್ಲಿ ನಾಡ ಸ್ಫೋಟಕವನ್ನು ಅಹಾರ ಎಂದುಕೊಂಡು ಕಚ್ಚಿದ್ದರ ಪರಿಣಾಮ ಆರು ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂದು ಇಂಡಿಯ ಟುಡೆ ವರದಿ ಮಾಡಿದೆ.

ಕಾವೇರಿ ತಟದಲ್ಲಿ ಮೀನು ಹಿಡಿಯಲು ಬಳಸುವ ಮೂರು ನಾಡ ಬಾಂಬ್ ಗಳನ್ನು ಮೂರು ಜನ ಕೊಂಡು ತಂದಿದ್ದರು. ಮೂರು ಜಿಲೆಟಿನ್ ಸ್ಫೋಟಕಗಳಲ್ಲಿ ಎರಡನ್ನು ಬಳಸಿ, ಉಳಿದ ಒಂದನ್ನು ಅವರ ಗೆಳೆಯ ಭೂಪತಿಯ ಮನೆಗೆ ತಂದಿದ್ದರು.

ಆಟವಾಡುತ್ತಿದ್ದ ಭೂಪತಿಯವರ ಮಗ ಸ್ಫೋಟಕವನ್ನು ಆಹಾರವೆಂದು ಎಣಿಸಿ ಕಚ್ಚಿದಾಗ, ಬಾಯಿಯಲ್ಲಿ ಸಿಡಿದು ತೀವ್ರ ಗಾಯಗೊಂಡಿದ್ದನು. ಚಿಕಿತ್ಸೆಗೆ ಮುಂಚಿತವಾಗಿಯೇ ಪ್ರಾಣ ಬಿಟ್ಟಿರುವ ದಾರುಣ ಘಟನೆ ನಡೆದಿದೆ.

ಸಮಸ್ಯೆಗೆ ಸಿಲುಕಿಕೊಳ್ಳುವ ಭಯದಿಂದ ಅಧಿಕಾರಿಗಳಿಗೆ ತಿಳಿಸದೇ ಮೃತ ಬಾಲಕನನ್ನು ಭೂಪತಿ ಮತ್ತು ಗೆಳೆಯರು ಮಣ್ಣು ಮಾಡಿದ್ದಾರೆ.

ನಂತರ ಈ ವಿಷಯ ತಿಳಿದಿರುವ ಪೊಲೀಸರು ಈ ಘಟನೆಯ ಸಂಬಂಧವಾಗಿ ಮೂವರನ್ನು ಬಂಧಿಸಿದ್ದು ಹೆಚ್ಚಿನ ತನಿಖೆಯನ್ನು ಆದೇಶಿಸಿದ್ದಾರೆ. ಹಾಗೆಯೇ ನಾಡಬಾಂಬ್ ಗಳ ಬಳಕೆಯನ್ನು ತಡೆಯಲು ಪೊಲೀಸರು ಶ್ರಮಿಸುತ್ತಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ, ಕಾಡುಹಂದಿಗಳನ್ನು ಕೊಲ್ಲಲ್ಲು ಇಟ್ಟಿದ್ದ ಸಿಡಿಯುವ ಮದ್ದು ಒಳಗೊಂಡಿದ್ದ ಹಣ್ಣು ತಿಂದು ಗರ್ಭಿಣಿ ಆನೆ ಮೃತಪಟ್ಟಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights