ದೇಶದಲ್ಲಿ ಮುಂದುವರೆದ ಕೊರೊನಾ ಹಾವಳಿ : ಒಂದೇ ದಿನ 32,981 ಹೊಸ ಕೇಸ್..!

ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಒಂದೇ ದಿನ 32,981 ಹೊಸ ಕೇಸ್ ದಾಖಲಾಗಿವೆ. ಈ ಮೂಲಕ ದೇಶದಲ್ಲಿನ ಒಟ್ಟು ಕೊರೊನಾ ಸಂಖ್ಯೆ 96.77 ಲಕ್ಷಕ್ಕೆ ಏರಿದೆ.

ಇದರಲ್ಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 91.3 ಲಕ್ಷಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸುತ್ತವೆ. ಒಟ್ಟು ಕೊರೊನವೈರಸ್ ಪ್ರಕರಣಗಳು ಒಂದು ದಿನದಲ್ಲಿ 32,109 ಹೊಸ ಸೋಂಕುಗಳು ವರದಿಯಾಗಿ 96,77,203 ಕ್ಕೆ ಏರಿದರೆ, ಕಳೆದ 24 ಗಂಟೆಗಳಲ್ಲಿ 391 ಹೊಸ ಸಾವುಗಳೊಂದಿಗೆ ಒಟ್ಟು ಸಾವಿನ ಸಂಖ್ಯೆ 1.4 ಲಕ್ಷಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ನೀಡಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು ಬಿಡುಗಡೆಯಾದ ಪ್ರಕರಣಗಳು 91,39,901 ಆಗಿದ್ದು, ಕಳೆದ 24 ಗಂಟೆಗಳಲ್ಲಿ 39,109 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights