Fact check: ಆಹಾರದ ಮೇಲೆ ಉಗುಳುವುದು ಹಲಾಲ್‌ನ ಭಾಗವೆಂದು ಮುಸ್ಲಿಂ ಸಮುದಾಯವು ನ್ಯಾಯಾಲಯದಲ್ಲಿ ಒಪ್ಪಿಕೊಂಡಿಲ್ಲ!

ತಮಿಳುನಾಡಿನ ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ, ಆಹಾರದ ಮೇಲೆ ಉಗುಳುವುದು ಹಲಾಲ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ ಎಂದು ಮುಸ್ಲಿಮರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದು ಹೇಳುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯ ಸತ್ಯಾ-ಸತ್ಯತೆಯನ್ನು ಪರಿಶೀಲಿಸೋಣ.

 

ಪ್ರತಿಪಾದನೆ: ಆಹಾರದ ಮೇಲೆ ಉಗುಳುವುದು ಹಲಾಲ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ ಎಂದು ಮುಸ್ಲಿಮರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಸತ್ಯ: ಶಬರಿಮಲೆಯಲ್ಲಿ ನೈವೇದ್ಯ ಮತ್ತು ಪ್ರಸಾದ ತಯಾರಿಕೆಯಲ್ಲಿ ಹಾಳಾದ ಹಲಾಲ್‌ಅನ್ನು ದೃಢಪಡಿಸಿದ ಬೆಲ್ಲದ ಬಳಕೆಯ ಬಗ್ಗೆ ಶಬರಿಮಲೆ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕರು ಕೇರಳ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಅದರಲ್ಲಿ, ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಹಲಾಲ್‌ಅನ್ನು ಪ್ರಮಾಣೀಕರಿಸಲು ಲಾಲಾರಸ (ಬಾಯಿಯ ಜೊಲ್ಲು)ವು ಅವಶ್ಯಕ ಅಂಶವಾಗಿದೆ ಎಂದು ಮುಸ್ಲಿಂ ಸಮುದಾಯವು ಸಾರ್ವಜನಿಕವಾಗಿ ಘೋಷಿಸುತ್ತಿದೆ ಎಂದು ಆರೋಪಿಸಿದ್ದಾರೆ. ಅರ್ಜಿದಾರರ ಈ ಆರೋಪವನ್ನು ಒಪ್ಪಿಕೊಂಡಿರುವ ಹಿಂದೂ ವ್ಯಕ್ತಿಯನ್ನು ಮುಸ್ಲಿಂ ವ್ಯಕ್ತಿಯನ್ನಾಗಿ ಬಿಂಬಿಸಿ ಆರೋಪ ಸತ್ಯವೆಂದು ವೈರಲ್‌ ಮಾಡಲಾಗಿದೆ. ಹಿಗಾಗಿ. ಪೋಸ್ಟ್‌ನಲ್ಲಿ ಮಾಡಿ ಪ್ರತಿಪಾದನೆ ತಪ್ಪಾಗಿದೆ.

ಈ ಹಿಂದೆ ನವೆಂಬರ್ 2021 ರಲ್ಲಿ, ತಮಿಳುನಾಡಿನ ಇಂದು ಮಕ್ಕಳ್ ಕಚ್ಚಿ ಟ್ವೀಟ್ ಮೂಲಕ ಅದೇ ರೀತಿಯ ಹೇಳಿಕೆಯನ್ನು ಪೋಸ್ಟ್‌ ಮಾಡಿದ್ದರು. ಈ ನಂತರ, ಈ ಹೇಳಿಕೆ ವೈರಲ್ ಆಗುತ್ತಿರಬಹುದು.

https://twitter.com/Indumakalktchi/status/1462710787667992578?s=20

ಆದಾಗ್ಯೂ, ಇಂಟರ್ನೆಟ್‌ನಲ್ಲಿ ಹುಡುಕಿದಾಗ, ಪ್ರಕರಣದ ವಿಚಾರಣೆ ನಡೆಯುತ್ತಿರುವುದು ತಮಿಳುನಾಡು ನ್ಯಾಯಾಲಯದಲ್ಲಿ ಅಲ್ಲ. ಬದಲಾಗಿ, ಕೇರಳ ಹೈಕೋರ್ಟ್‌ನಲ್ಲಿ ಎಂದು ಕಂಡುಬಂದಿದೆ. ಇದರಲ್ಲಿ ಶಬರಿಮಲೆ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕ ಎಸ್‌ಜೆಆರ್ ಕುಮಾರ್ ಸಲ್ಲಿಸಿದ ಮನವಿಯಲ್ಲಿ ಅರ್ಜಿದಾರರು, ಶಬರಿಮಲೆ ದೇವಸ್ಥಾನವನ್ನು ನಿರ್ವಹಿಸುತ್ತಿರುವ ಟ್ರಾವಂಕೂರ್ ದೇವಸ್ವಂ ಮಂಡಳಿ (ಟಿಡಿಬಿ)ಯು ದೇವಸ್ಥಾನದಲ್ಲಿ ನಿವೇದ್ಯಂ ಮತ್ತು ಪ್ರಸಾದವನ್ನು ತಯಾರಿಸಲು ಹಾಳಾದ ಹಲಾಲ್ಅನ್ನು ದೃಢಪಡಿಸುವ ಬೆಲ್ಲವನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.

ಹಲಾಲ್ಅನ್ನು ದೃಢಪಡಿಸುವ ಉತ್ಪನ್ನಗಳ ಬಳಕೆಯ ವಿರುದ್ಧ ಅರ್ಜಿದಾರರು ಮಾಡಿದ ಬಹು ಆರೋಪಗಳಲ್ಲಿ ಒಂದಾದ ‘ಮುಸ್ಲಿಂ ಸಮುದಾಯದ ಧಾರ್ಮಿಕ ವಿದ್ವಾಂಸರು ಆಹಾರ ಸಾಮಗ್ರಿಗಳ ತಯಾರಿಕೆಯಲ್ಲಿ ಹಲಾಲ್ ಅನ್ನು ಪ್ರಮಾಣೀಕರಿಸಲು ಲಾಲಾರಸವು ಅವಶ್ಯಕ ಅಂಶವಾಗಿದೆ ಎಂದು ಸಾರ್ವಜನಿಕವಾಗಿ ಘೋಷಿಸುತ್ತಿದ್ದಾರೆ. ಧಾರ್ಮಿಕ ವಿದ್ವಾಂಸರು ಪವಿತ್ರ ಗ್ರಂಥಗಳನ್ನು ಮತ್ತು ಅದರ ಮಾನ್ಯವಾದ ವ್ಯಾಖ್ಯಾನಗಳನ್ನು ಅರ್ಥೈಸುವ ಮೂಲಕ ಮೇಲಿನ ದೃಷ್ಟಿಕೋನವನ್ನು ತೆಗೆದುಕೊಂಡಿದ್ದಾರೆ. ಆದಾಗ್ಯೂ, ಧಾರ್ಮಿಕ ಮುಖಂಡರ ಒಂದು ವಿಭಾಗದಿಂದ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗಿದೆ.

ಇದರಿಂದ, ಉಗುಳುವುದು ಹಲಾಲ್ ಪ್ರಕ್ರಿಯೆಯನ್ನು ಪೂರ್ಣಗೊಳ್ಳುತ್ತದೆ ಎಂದು ನ್ಯಾಯಾಲಯದಲ್ಲಿ ಒಪ್ಪಿಕೊಂಡಿರುವುದು ಮುಸ್ಲಿಂ ಸಮುದಾಯವಲ್ಲ ಎಂಬುದು ಸ್ಪಷ್ಟವಾಗಿದೆ. ಈ ಹೇಳಿಕೆಗಳನ್ನು ಪ್ರಕರಣದ ಅರ್ಜಿದಾರರು ನ್ಯಾಯಾಲಯಕ್ಕೆ ಹಾಜರಿದ್ದವರ ಮೇಲೆ ಆರೋಪಿಸಿದ್ದಾರೆ. ಆದರೆ, ಅವರು ಹಿಂದೂ ಆಗಿದ್ದರು. ಹಾಗಿದ್ದರೂ, ಅವರು ಹೇಳಿದ್ದ ಹೇಳಿಕೆಯನ್ನು ನ್ಯಾಯಾಲಯದ ವಿಚಾರಣೆಯಲ್ಲಿ ಮುಸ್ಲಿಂ ಸಮುದಾಯವೇ ಒಪ್ಪಿಕೊಂಡಿದೆ ಎಂಬ ಬಿಂಬಿಸಿ ಹಂಚಿಕೊಳ್ಳಲಾಗಿದೆ.

ಇದಲ್ಲದೆ, ‘ಹಲಾಲ್ ಮಾಡಲು ಆಹಾರ ಪದಾರ್ಥಗಳ ಮೇಲೆ ಉಗುಳುವುದು ಮತ್ತು ಧಾರ್ಮಿಕ ವಿದ್ವಾಂಸರ ಪ್ರತಿಕ್ರಿಯೆಗಳ ಬಗ್ಗೆ ಇತ್ತೀಚಿನ ವಿವಾದವನ್ನು ಗಮನದಲ್ಲಿಟ್ಟುಕೊಂಡು, ಹಲಾಲ್ ಮಾಡಲಾದ ಆಹಾರ ಸಾಮಗ್ರಿಗಳನ್ನು ಗೃಹಬಳಕೆಯ ಉದ್ದೇಶಗಳಿಗಾಗಿಯೂ ಸಹ ಬಳಸುವುದರ ಬಗ್ಗೆ ಜನರು ಹೆಚ್ಚು ಅಸಹ್ಯಕರರಾಗಿದ್ದಾರೆ. ಅದರ ಪ್ರಮಾಣೀಕರಣದೊಂದಿಗೆ ಮತ್ತೊಂದು ಧರ್ಮದ ಆಚರಣೆಗಳು ಮತ್ತು ಧಾರ್ಮಿಕ ಆಚರಣೆಗಳನ್ನು ಅನುಸರಿಸಿ ತಯಾರಿಸಿದ ಆಹಾರ ಪದಾರ್ಥಗಳನ್ನು ತನ್ನದೇ ಆದ ಆಚರಣೆಗಳು ಮತ್ತು ಪದ್ಧತಿಗಳನ್ನು ಹೊಂದಿರುವ ಹಿಂದೂ ದೇವಾಲಯದಲ್ಲಿ ನೈವೇದ್ಯ / ಪ್ರಸಾದವನ್ನು ತಯಾರಿಸಲು ಆಹಾರ ಪದಾರ್ಥವಾಗಿ ಸ್ವೀಕರಿಸುವುದನ್ನು ನೋಡುವುದು ಅತ್ಯಂತ ನಿರಾಶಾದಾಯಕವಾಗಿದೆ ಎಂದೂ ಅರ್ಜಿದಾರರು ಆರೋಪಿಸಿದ್ದಾರೆ.

ಈ ಬಗ್ಗೆ ತಿರುವಾಂಕೂರು ದೇವಸ್ವಂ ಮಂಡಳಿ ಪ್ರತಿಕ್ರಿಯೆ ಸಲ್ಲಿಸಿದೆ. ಅವರ ಪ್ರತಿಕ್ರಿಯೆಯಲ್ಲಿ, ಕೋವಿಡ್-19 ಪ್ರೋಟೋಕಾಲ್‌ನಿಂದಾಗಿ 2019-20ನೇ ವರ್ಷಕ್ಕೆ ಹೆಚ್ಚಿನ ಪ್ರಮಾಣದ ಬೆಲ್ಲವು ಬಳಸದೆ ಉಳಿದಿದೆ. ಆದ್ದರಿಂದ ಮಂಡಳಿಯು ಈ ಉಳಿದ ಬೆಲ್ಲವನ್ನು M/s ಸದರ್ನ್ ಆಗ್ರೋ ಟೆಕ್ ಪ್ರೈವೇಟ್‌ ಲಿಮಿಟೆಡ್, ತ್ರಿಶೂರ್‌ಗೆ ನೀಡಿದೆ ಎಂದು ಮಂಡಳಿಯು ಹೇಳಿದೆ. ಆದರೆ 2020-21ನೇ ಸಾಲಿಗೆ ಬೆಲ್ಲ ಪೂರೈಕೆಯ ಗುತ್ತಿಗೆಯನ್ನು M/s S.P.Sugar and Agro Pvt. lmt, ಮಹಾರಾಷ್ಟ್ರಕ್ಕೆ ನೀಡಲಾಗಿದ್ದು, ಅವರು ಏಪ್ರಿಲ್ 2021 ರಿಂದ ಪೂರೈಕೆಯನ್ನು ಪ್ರಾರಂಭಿಸಿದ್ದಾರೆ. ಅಂದಿನಿಂದ ಆ ಬೆಲ್ಲವನ್ನು ಬಳಸಲಾಗುತ್ತಿದೆ.

ಹಲಾಲ್‌ನ ಪ್ರಶ್ನೆಗೆ, ‘ಬೆಲ್ಲದ ಪ್ಯಾಕೇಜಿಂಗ್‌ನಲ್ಲಿ ಇಂಗ್ಲಿಷ್‌ನಲ್ಲಿ “permissible” ಎಂದು ಅನುವಾದಿಸುವ ಅರೇಬಿಕ್ ಪದವಾದ ಹಲಾಲ್ ಎಂಬ ಪದವನ್ನು ಉಲ್ಲೇಖಿಸಲಾಗಿದೆ ಎಂದು TDB ವಿವರಿಸಿದೆ. ಈ ಸರಕುಗಳನ್ನು ಪಡೆದ ಕಂಪನಿಯು ಅರಬ್ ದೇಶಗಳಿಗೆ ಬೆಲ್ಲವನ್ನು ರಫ್ತು ಮಾಡಿದೆ. ಅಲ್ಲಿನ ನಿಯಮಗಳು ಇಸ್ಲಾಮಿಕ್ ನಿಯಮಗಳನ್ನು ಅನುಸರಿಸುವುದರಿಂದಾಗಿ, ಹಲಾಲ್ ಆಹಾರಗಳ ಮಾರಾಟವನ್ನು ಕಡ್ಡಾಯಗೊಳಿಸುತ್ತವೆ ಎಂದು ನ್ಯೂಸ್ 18 ವರದಿ ಮಾಡಿದೆ.

Halal Logo Stock Photos, Images & Photography | Shutterstock

ಅರ್ಜಿದಾರರು ಹಲಾಲ್ ಬಗ್ಗೆ ತಮ್ಮ ತಿಳುವಳಿಕೆಯನ್ನು ವಿವರಿಸಲು ವಿಫಲವಾದ ಹಿನ್ನೆಲೆಯಲ್ಲಿ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು ‘ಹಲಾಲ್ ಉತ್ಪನ್ನಗಳ ಬಳಕೆಯನ್ನು ಪ್ರಶ್ನಿಸುವ ಅರ್ಜಿಯನ್ನು ಸಲ್ಲಿಸುವ ಮೊದಲು, ನೀವು ಪರಿಕಲ್ಪನೆಯ ಆಳಕ್ಕೆ ಹೋಗಬೇಕು ಎಂದು ಅಭಿಪ್ರಾಯಪಟ್ಟಿದೆ. ಹಲಾಲ್ ಪರಿಕಲ್ಪನೆಯು ಕೆಲವು ವಿಷಯಗಳನ್ನು ನಿಷೇಧಿಸಲಾಗಿದೆ ಎಂದು ಮಾತ್ರ ಹೇಳುತ್ತದೆ; ಉಳಿದಂತೆ ಎಲ್ಲಾ ಇತರ ವಿಷಯಗಳು ಹಲಾಲ್‌ಗೆ ಒಳಪಟ್ಟಿವೆ ಎಂದು ಸೂಚಿಸಲಾಗುತ್ತದೆ. ಈ ಪ್ರಮಾಣೀಕರಣವು (ಹಲಾಲ್‌) ಆ ನಿಷೇಧಿತ ವಸ್ತುಗಳನ್ನು ನಿರ್ದಿಷ್ಟ ಉತ್ಪನ್ನದಲ್ಲಿ ಸೇರಿಸಲಾಗಿಲ್ಲ ಎಂಬುದನ್ನು ಮಾತ್ರ ಖಾತ್ರಿಪಡಿಸುತ್ತವೆ. ಯುಕೆಯಂತಹ ಇತರ ದೇಶಗಳಲ್ಲಿ ಇದು ಜಾರಿಯಲ್ಲಿದೆ. ಅಲ್ಲದೆ, ಕೆಲವು ಸುಪ್ರೀಂ ಕೋರ್ಟ್ ತೀರ್ಪುಗಳು ಕೂಡ ಅದರ ಬಗ್ಗೆ ಉಲ್ಲೇಖಿಸಿವೆ.

ಇದಲ್ಲದೆ, ಪ್ರಕರಣದ ವಿಚಾರಣೆಯ ಪ್ರಕ್ರಿಯೆಯ ಅವಧಿಯಲ್ಲಿ, ವೈರಲ್ ಪೋಸ್ಟ್‌ನಲ್ಲಿ ಮಾಡಿದ ಹೇಳಿಕೆಗೆ ವಿರುದ್ಧವಾಗಿ ಯಾವುದೇ ಮುಸ್ಲಿಂ ಸಂಘಟನೆ ಅಥವಾ ಯಾವುದೇ ಮುಸ್ಲಿಂ ವ್ಯಕ್ತಿಯನ್ನು ಪ್ರತಿವಾದಿಯನ್ನಾಗಿ ಮಾಡಲಾಗಿಲ್ಲ ಎಂದು ನಮೂದಿಸುವುದು ಗಮನಾರ್ಹವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಆಹಾರದ ಮೇಲೆ ಉಗುಳುವುದು ಹಲಾಲ್‌ನ ಭಾಗವೆಂದು ಮುಸ್ಲಿಂ ಸಮುದಾಯವು ನ್ಯಾಯಾಲಯದಲ್ಲಿ ಒಪ್ಪಿಕೊಂಡಿಲ್ಲ.

ಕೃಪೆ: ಫ್ಯಾಕ್ಟ್ಲಿ
ಕನ್ನಡಕ್ಕೆ: ಸೋಮಶೇಖರ್ ಚಲ್ಯ

ಇದನ್ನೂ ಓದಿ: Fact Check: ಕಸಬ್‌ನ ಮರಣದಂಡನೆಯನ್ನು ರದ್ದುಗೊಳಿಸಲು ಕೋರಿ ಅಖಿಲೇಶ್ ಯಾದವ್ ಅರ್ಜಿಗೆ ಸಹಿ ಹಾಕಿರಲಿಲ್ಲ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights