FACT CHECK | ಸೈನಿಕರು ಗಡಿಯಲ್ಲಿ ಕಡು ಬಿಸಿಲಿನಲ್ಲಿ ಊಟ ಮಾಡುತ್ತಿದ್ದಾರೆ ಎಂದು AI ನಿಂದ ರಚಿಸಿದ ಫೋಟೊ ಹಂಚಿಕೆ

ದೇಶ ಕಾಯುವ ಸೈನಿಕರ ಫೊಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು ಗಡಿಯಲ್ಲಿ ಕಡು ಬಿಸಿಲಿನಲ್ಲಿ ಭಾರತೀಯ ನಾರಿ ಸೈನ್ಯ, ಈ ವೀರ ವನಿತಯರಿಗೆ ನಮನಗಳು ಎಂದು ಪ್ರತಿಪಾದಿಸಿ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

“ಭಾರತೀಯ ಸೇನೆಯ ಮಹಿಳಾ ಸೈನಿಕರು 48° ಬಿಸಿಲಿನಲ್ಲಿ ಪಾಕಿಸ್ತಾನದ ಗಡಿಯಲ್ಲಿರುವ ರಾಜಸ್ಥಾನದ ಬ್ಯಾಡ್ಮೇರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ರಸ್ತೆಯಲ್ಲಿ ಆಹಾರ ಸೇವಿಸುತ್ತಿರುವ” ಫೋಟೋ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

3 ಜನರು ನ ಚಿತ್ರವಾಗಿರಬಹುದು

ಮರಳು ನೆಲದಲ್ಲಿ ಸೈನಿಕನೊಬ್ಬ ಊಟ ಮಾಡುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಗರಿಷ್ಠ ಉಷ್ಣಾಂಶಕ್ಕೆ ಹೆಸರಾದ ರಾಜಸ್ಥಾನದ ಬಾರ್ಮರ್‌ ಗಡಿಯಲ್ಲಿ ಈ ಚಿತ್ರವನ್ನು ಸೆರೆಹಿಡಿಯಲಾಗಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೊಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ನಡೆಸಿದಾಗ, ವೈರಲ್ ಫೋಟೊ ಕುರಿತು ಯಾವುದೇ ಮಾಹಿತಿ ಲಭ್ಯವಾಗಲಿಲ್ಲ. ವೈರಲ್ ಫೋಟೊವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿ ಹಲವು ಲೋಪಗಳನ್ನು ಕಾಣಬಹುದು.

ಮೊದಲನೆಯದಾಗಿ, ಊಟಕ್ಕೆ ಕುಳಿತಿರುವ ಮಹಿಳಾ ಸೈನಿಕರ ಚಿತ್ರದಲ್ಲಿ ಹಿಂದೆ ನಡೆದುಕೊಂಡು ಬರುತ್ತಿರುವ ಕೆಲವು ಸೈನಿಕರ ನೆರಳು ಕಾಣುವುದಿಲ್ಲ. ಊಟ ಮಾಡುತ್ತಿದ್ದ  ಮಹಿಳಾ ಸೈನಿಕರ ಊಟದ ಪಾತ್ರೆ ಹಿಡಿದಿರುವ ಕೈ ಬೆರಳುಗಳು ಮರೆಯಾಗವೆ.  AI ನಿಂದ ಕ್ರಿಯೇಟ್ ಮಾಡಿದ ಫೋಟೋಗಳಲ್ಲಿ ಸಾಮಾನ್ಯವಾಗಿ ಈ ರೀತಿ ಕೈ ಬೆರಳುಗಳು, ಪಾದಗಳಲ್ಲಿ ನ್ಯೂನ್ಯತೆಗಳು ಸಾಮಾನ್ಯವಾಗಿರುತ್ತವೆ.

ಅಲ್ಲದೆ, ಫೋಟೋದ ಎಡಭಾಗದಲ್ಲಿ ಮುಂದಿನ ಸಾಲಿನ ಯೋಧೆಯ ಭುಜದ ಮೇಲಿರುವ ಭಾರತೀಯ ಧ್ವಜವು ತುಂಬಾ ವಿಚಿತ್ರವಾಗಿದೆ. ಭಾರತೀಯ ಧ್ವಜದಲ್ಲಿ ಇರುವ ಮೂರು ಬಣ್ಣಗಳ ಹೊರತಾಗಿ, ಇದು ಹಲವಾರು ಬಣ್ಣಗಳನ್ನು ಹೊಂದಿದೆ. ಮುಂದೆ ಕುಳಿತಿದ್ದ ಇನ್ನೊಬ್ಬ ಸೈನಿಕಳಿಗೆ ಮೂರು ಕೈಗಳು ಇರುವುದನ್ನು ಕಣಬಹುದು.

ಇವುಗಳನ್ನು ನೋಡುವಾಗ ಸಹಜವೆಂಬಂತೆ ಕಂಡರೂ, ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಸಮವಸ್ತ್ರದಲ್ಲಿ ಭುಜದ ಮೇಲಿರುವ ಚಿತ್ರದಲ್ಲಿ ಲೋಪವನ್ನು ಕಾಣಬಹುದು. ಮತ್ತು ಭಾರತದ ರಾಷ್ಟ್ರ ಧ್ವಜದ ಬಣ್ಣಗಳದಲ್ಲಿ ವ್ಯತ್ಯಾಸಗಳನ್ನು ಗಮನಿಸಬಹುದು.

ಚಿತ್ರವನ್ನು ಇನ್ನಷ್ಟು ಪರಿಶೀಲನೆಗೆ ಒಳಪಡಿಸಿರುವ ಫ್ಯಾಕ್ಟ್‌ಲಿ ತಂಡ  AI-ಪೋಟೋ ಸರ್ಚ್ ಟೂಲ್‌ ‘ಹೈವ್’ ಮತ್ತು ಟ್ರೂ ಮೀಡಿಯಾ ಬಳಸಿಕೊಂಡು ಈ ಫೋಟೋಗಳನ್ನು ಚೆಕ್ ಮಾಡಿದಾಗ, ಇದು ಖಂಡಿತವಾಗಿಯೂ AI ಬಳಸಿ ರಚಿಸಿರುವ ಫೋಟೋಗಳು ಎಂದು  ಖಚಿತಪಡಿಸಿದೆ

ಒಟ್ಟಾರೆಯಾಗಿ ಹೇಳುವುದಾದರೆ, AI ನಿಂದ ರಚಿಸಿದ ಫೋಟೋವನ್ನು ಹಂಚಿಕೊಂಡು ಇದು ನಮ್ಮ ಭಾರತೀಯ ಮಹಿಳಾ ಸೈನಿಕರು ಗಡಿಯಲ್ಲಿ ಕಡು ಬಿಸಿಲಿನಲ್ಲಿ ಆಹಾರ ಸೇವಿಸುತ್ತಿರುವ ನಿಜವಾದ ಫೋಟೋ ಎಂಬಂತೆ ಹಂಚಿಕೊಳ್ಳುತ್ತಿದ್ದಾರೆ. ವಾಸ್ತವವಾಗಿ ಇವು ನೈಜ ಚಿತ್ರಗಳಲ್ಲ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕೇರಳದ ಮುಸಲ್ಮಾನರು RSS ಕಾರ್ಯಕರ್ತನ ತಲೆ ಕಡಿದಿದ್ದಾರೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights