FACT CHECK | BJP ಪಕ್ಷವು ಮತದಾರರಿಗೆ ಹಂಚಲೆಂದು ಇರಿಸಿದ್ದ ಕಿಟ್‌ನಲ್ಲಿ ಚಿನ್ನದ ಬಿಸ್ಕತ್ ಇದ್ದದ್ದು ನಿಜವೇ?

ಚುನಾವಣೆ ಎಂದರೆ ಹಾಗೆ ಮತದಾರರ ಮನವೊಲಿಸಲು ಎಲ್ಲ ರಾಜಕೀಯ ಪಕ್ಷಗಳು ಉಡುಗೊರೆ ರೂಪದಲ್ಲಿ ಆಮಿಷಗಳನ್ನು ಒಡ್ಡುವುದನ್ನು ಸಾಮಾನ್ಯ ಸಂಗತಿ ಎಂಬಂತಾಗಿದೆ. 2024ರ ಈ ಲೋಕಸಭಾ ಚುನಾವಣೆಯೂ ಇದಕ್ಕೆ ಹೊರತಾಗಿಲ್ಲ. ಎಲ್ಲರನ್ನು ಸೋಲಿಸುತ್ತಿದ್ದ ಬಿಜೆಪಿ ಜನರಿಗೆ ಗಿಫ್ಟ್‌ ನೀಡುವುದರಲ್ಲಿಯೂ ಮುಂದಿದೆ.

ಈಗ ಮುಂಬೈನಲ್ಲಿ ಬಿಜೆಪಿ ಪಕ್ಷವು ಒಂದು ಕೈ ಮೇಲೆ ಎಂಬಂತೆ ಚಿನ್ನದ ಬಿಸ್ಕತ್ತು(ಗೋಲ್ಡ್‌ ಬಿಸ್ಕೆಟ್) ಗಳನ್ನು ಹಂಚುತ್ತಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಬಿಜೆಪಿ ಪಕ್ಷವು ಮುಂಬೈನ ಘಾಟ್ಕೋಪರ್‌ನಲ್ಲಿ ಮತದಾರರಿಗೆ ‘ಚಿನ್ನದ ಬಿಸ್ಕೆಟ್’ಗಳನ್ನು ಹಂಚುತ್ತಿದ್ದಾಗ, ಪೊಲೀಸರಿಗೆ ಸಿಕ್ಕಿಬಿದ್ದಾರೆ ಎಂದು ಪ್ರತಿಪಾದಿಸಿ, ಬಿಜೆಪಿಯ ಚುನಾವಣಾ ಪ್ರಚಾರದ ಕಿಟ್ ಅನ್ನು ಪರಿಶೀಲಿಸುತ್ತಿರುವ ಪೊಲೀಸ್ ಅಧಿಕಾರಿಯ ವಿಡಿಯೋವನ್ನು ಮೇ 12 ರಂದು ಸಾಮಾಜಿಕ ಮಾಧ್ಯಮದ ಬಳಕೆದಾರರು ಹಂಚಿಕೊಂಡಿದ್ದಾರೆ.

ಹಾಗಿದ್ದರೆ ವಿಡಿಯೋದಲ್ಲಿ ಪ್ರತಿಪಾದಿಸಿದಂತೆ ಮುಂಬೈನಲ್ಲಿ ಬಿಜೆಪಿಯು ಮತದಾರರಿಗೆ ಹಂಚಲು ತಂದಿದ್ದ ಕಿಟ್‌ನಲ್ಲಿ ಚಿನ್ನದ ಬಿಸ್ಕೆಟ್ ಪತ್ತೆಯಾಗಿದೆ ಎಂದು ಹೇಳಲಾಗಿದ್ದು, ಇದರ ಸತ್ಯಾಸತ್ಯತೆ ಏನು ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 11 ಮೇ 2024 ರಂದು ಪ್ರಕಟವಾದ NDTV  ವರದಿ ಲಭ್ಯವಾಗಿದೆ.

NDTV ವರದಿಯ ಪ್ರಕಾರ, ಉತ್ತರ ಮಧ್ಯ ಮುಂಬೈನ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಜಯ್ ಬದ್ಗುಜಾರ್ ಅವರು ಮಾತನಾಡುತ್ತಾ ನನ್ನ ಕಾರಿನಲ್ಲಿ  ಪೊಲೀಸರು ಅಧಿಕಾರಿಗಳು ತಪಾಸಣೆ ನಡೆಸಿದಾಗ, ಸುಗಂಧ ದ್ರವ್ಯದ ಪ್ಲಾಸ್ಟಿಕ್ ಬಾಟಲಿಗಳು ಮಾತ್ರ ಪತ್ತೆಯಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಾಗಿದೆ.

ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ, ಪೊಲೀಸ್ ಅಧಿಕಾರಿಗಳ ನಡೆಯನ್ನು ಟೀಕಿಸಿರುವ ಅವರು ಕಿಟ್‌ನಲ್ಲಿ ಏನು ಸಿಗದಿದ್ದಕ್ಕೆ  ಹತಾಶರಾಗಿರುವ ಪೊಲೀಸರು ಸುಗಂಧ ಬಾಟಲಿಯನ್ನು ಚಿನ್ನದ ಬಿಸ್ಕತ್ ಎಂದು ಹೇಳಿದ್ದಾರೆ ಎಂದು  ಪ್ಲಾಸ್ಟಿಕ್ ಸುಗಂಧ ಡಬ್ಬಿಯನ್ನು ತಾವೇ ತೆರೆದು ಅಜಯ್ ಬದ್ಗುಜಾರ್ ಮಾದ್ಯಮದವರಿಗೆ ಪ್ರದಶಿಸಿದ್ದಾರೆ.

ಮುಂಬೈ ಪ್ರೆಸ್ ಮತ್ತು ಡೆಕ್ಕನ್ ಹೆರಾಲ್ಡ್‌ನಂತಹ ಅನೇಕ ಮಾಧ್ಯಮಗಳು ಇದೇ ಮಾಹಿತಿಯನ್ನು ಒಳಗೊಂಡ ವರದಿಗಳನ್ನು ಪ್ರಕಟಿಸಿದವು.

NDTV ನಲ್ಲಿ ಇತ್ತೀಚಿನ ಮತ್ತು ಬ್ರೇಕಿಂಗ್ ನ್ಯೂಸ್

“ಮೇ 9 ರಾತ್ರಿ, ನನ್ನನ್ನು ಚಿರಾಗ್ ನಗರ ಪೊಲೀಸ್ ಠಾಣೆ, ಘಾಟ್ಕೋಪರ್ಗೆ ಕರೆದೊಯ್ಯಲಾಯಿತು. ಗಂಟೆಗಟ್ಟಲೆ ಸುಖಾಸುಮ್ಮನೆ ಕಾಯಿಸಿದ ಪೊಲೀಸರು ಹಲವು ತಾಸಿನ ನಂತರ ತನಿಖೆ ಆರಂಭಿಸಿದರು. ತನಿಖೆ ವೇಳೆ ನನ್ನ ಕಾರಿನಲ್ಲಿ ಪ್ರಚಾರ ಸಾಮಗ್ರಿಗಳು ಮಾತ್ರ ಪತ್ತೆಯಾಗಿವೆ ಆದರೆ ಯಾವುದೇ ಚಿನ್ನದ ಬಿಸ್ಕತ್ತುಗಳು ಕಂಡುಬಂದಿಲ್ಲ. ನಂತರ ಪೊಲೀಸರು ನನ್ನನ್ನು ಬಿಡುಗಡೆ ಮಾಡಿದರು. ಆದರೂ, ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿ ಪ್ರಸಾರ ಮಾಡಲಾಗಿದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ನೀಡಿದ ಹೇಳಿಕೆಯಲ್ಲಿ ಬಿಜೆಪಿಯ ಮುಂಬೈ ಉತ್ತರ ಮಧ್ಯ ಜಿಲ್ಲಾ ಉಪಾಧ್ಯಕ್ಷ ಅಜಯ್ ಬುದ್ಗುಜಾರ್ ತಿಳಿಸಿದ್ದಾಗಿ ವರದಿಯಗಿದೆ.

Latest and Breaking News on NDTV

ಸುದ್ದಿಗಾರರೊಂದಿಗೆ ಮಾತನಾಡಿದ ಚಿರಾಗ್ ನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು, “ಈ ಘಟನೆಯು ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ತಪಾಸಣೆ ನಡೆಸಲಾಗಿದೆ. ಆದರೆ ತಪಾಸಣೆ ವೇಳೆ ಯಾವುದೇ ಚಿನ್ನದ ಬಿಸ್ಕತ್ತುಗಳು ಕಂಡುಬಂದಿಲ್ಲ ಎಂದಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಮುಂಬೈನ ಘಾಟ್‌ಕೋಪರ್‌ನಲ್ಲಿ ಬಿಜೆಪಿಯು ಮತದಾರರಿಗೆ ‘ಚಿನ್ನದ ಬಿಸ್ಕೆಟ್’ಗಳನ್ನು ಹಂಚುತ್ತಿದೆ ಎಂದು ಪ್ರತಿಪಾದಿಸಿ ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಬಿಜೆಪಿ ಚುನಾವಣಾ ಕಿಟ್ ಅನ್ನು ಪೊಲೀಸ್ ಅಧಿಕಾರಿಗಳು ಪರಿಶೀಲಿಸುತ್ತಿರುವ ವಿಡಿಯೋವನ್ನು ತಪ್ಪಾಗಿ ಹಂಚಿಕೊಂಡಿದ್ದಾರೆ. ವಾಸ್ತವವಾಗಿ ಪೊಲೀಸರ ತಪಾಸಣೆಯಲ್ಲಿ ಪ್ಲಾಸ್ಟಿಕ್ ಸೆಂಟ್ ಬಾಟಲಿಗಳು ಮಾತ್ರ ಪತ್ತೆಯಾಗಿವೆ. ಇದನ್ನೆ ‘ಚಿನ್ನದ ಬಿಸ್ಕತ್ತು’ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ತನ್ನ ಮನೆಯಲ್ಲೇ ಕಳ್ಳತನ ಮಾಡಿ ಸಿಕ್ಕಿ ಬಿದ್ದಿದ್ರಾ ಮೋದಿ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights