ಫ್ಯಾಕ್ಟ್‌ಚೆಕ್: ಗುಜರಾತ್ ಮಾಡೆಲ್ ಎಂದು ಮುಂಬೈ ಚಿತ್ರವನ್ನು ಹಂಚಿಕೊಂಡ BJP ಪಕ್ಷ

ಗುಜರಾತ್ ವಿಧಾನಸಭೆ ಚುನಾವಣೆಯ ಹಣಾಹಣೆಯಲ್ಲಿಆಡಳಿತಾರೂಢ BJP ಸರ್ಕಾರದ ಅಡಿಯಲ್ಲಿ ಗುಜರಾತ್‌ನಲ್ಲಿನ ಮೂಲಸೌಕರ್ಯ ಅಭಿವೃದ್ಧಿ ಉತ್ತುಂಗಕ್ಕೆ ಏರಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಗುಜರಾತ್ ಬಿಜೆಪಿಯ ಅಧಿಕೃತ ಟ್ವಿಟರ್‌ನಲ್ಲಿ ಪ್ರಕಟಗೊಂಡಿರುವ ಈ ಪೋಸ್ಟ್‌ ವೈರಲ್ ಆಗುತ್ತಿದೆ. ಡಿಸೆಂಬರ್ 1 ಮೊದಲ ಹಂತದ ಚುನಾವಣೆ ಮುಕ್ತಾಯವಾಗಿದ್ದು, ಡಿಸೆಂಬರ್ 5 ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. BJP  ಪ್ರಚಾರವನ್ನು ಮತ್ತಷ್ಟು ಚುರುಕುಗೊಳಿಸಿದ್ದು, ರ್ಯಾಲಿ ಮತ್ತು ರೋಡ್‌ಶೋಗಳ ಜೊತೆಗೆ ಸೋಶಿಯಲ್ ಮೀಡಿಯಾದ ಪ್ರಚಾರವನ್ನು  ಜೋರಾಗಿ ನಡೆಸುತ್ತಿದೆ.

ಅತ್ಯಾಧುನಿಕ ಮೂಲಸೌಕರ್ಯಕ್ಕಾಗಿ ಭಾರತೀಯ ಜನತಾ ಪಕ್ಷದ ಗುರಿ ಗುಜರಾತ್ ಮಾಡೆಲ್ ಗೆ ಇದೇ ಉದಾಹರಣೆ ಎಂದು ಪ್ರತಿಪಾದಿಸಿ BJP ಬೆಂಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು  ಹಂಚಿಕೊಳ್ಳುತ್ತಿದ್ದಾರೆ. ಸಂಸದ ವಿನೋದ್ ಚಾವ್ಡಾ (ಕಚ್ಛ್) ಕೂಡ ಇದೇ ಹೇಳಿಕೆಯೊಂದಿಗೆ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.

ಟ್ವಿಟರ್ ಅಲ್ಲದೆ ಫೇಸ್‌ಬುಕ್‌ನಲ್ಲೂ ಇದೇ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಆದರೆ ಕೆಲವರು  ಇದು ಗುಜರಾತ್‌ನ ಮಾಡೆಲ್ ಅಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಹಾಗಿದ್ದರೆ ಈ ಚಿತ್ರ ಎಲ್ಲಿಯದ್ದು ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಗುಜರಾತ್ ಇನ್ಫ್ರಾ ಎಂದು ಪ್ರತಿಪಾದಿಸಿ ಹಂಚಿಕೊಂಡ ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, ಸ್ಟಾಕ್ ಫೋಟೋ ವೆಬ್‌ಸೈಟ್ ಅಲಾಮಿಯಲ್ಲಿ ಅಪ್‌ಲೋಡ್ ಮಾಡಲಾದ ಇದೇ ರೀತಿಯ ಚಿತ್ರವನ್ನು ನೋಡಿದ್ದೇವೆ. ಚಿತ್ರವು ವೈರಲ್ ಚಿತ್ರದೊಂದಿಗೆ ಹಲವಾರು ಹೋಲಿಕೆಗಳನ್ನು ಹೊಂದಿದೆ.

Anuncios ಚಿತ್ರವನ್ನು ನವೆಂಬರ್ 2014 ರಂದು ಅಲಾಮಿಗೆ ಡಿನೋಡಿಯಾ ಫೋಟೋಸ್ ಮೂಲಕ ಅಪ್‌ಲೋಡ್ ಮಾಡಲಾಗಿದೆ, ‘ಸಾಂತಾಕ್ರೂಜ್ ಚೆಂಬೂರ್ ಲಿಂಕ್ ರೋಡ್ ಫ್ಲೈಓವರ್, ಮುಂಬೈ, ಮಹಾರಾಷ್ಟ್ರ, ಎಂದು ಉಲ್ಲೇಖಿಸಲಾಗಿದೆ.

Image Credit: Alamy.com

ಮತ್ತಷ್ಟು ಸರ್ಚ್  ಮಾಡಿದಾ ಸ್ಟಾಕ್ ಫೋಟೋ ವೆಬ್‌ಸೈಟ್ ಶಟರ್‌ಸ್ಟಾಕ್‌ನಲ್ಲಿ ಅಪ್‌ಲೋಡ್ ಮಾಡಿದ ಅದೇ ಚಿತ್ರ ಕಂಡುಬಂದಿದ್ದು. ಚಿತ್ರವನ್ನು ನವೆಂಬರ್ 2, 2014 ರಂದು ಅಪ್‌ಲೋಡ್ ಮಾಡಲಾಗಿದೆ,  ತಿಲಕ್ ನಗರ ಮುಂಬೈನಲ್ಲಿ ಸಾಂತಾಕ್ರೂಜ್ ಚೆಂಬೂರ್ ಲಿಂಕ್ ರಸ್ತೆಯಲ್ಲಿ ನಿರ್ಮಿಸಲಾಗಿರುವ ನಾಲ್ಕು ಲೇನ್ ಎಲಿವೇಟೆಡ್ ಫ್ಲೈಓವರ್ ಕಾಂಕ್ರೀಟ್ ಸೇತುವೆಯ ವೈಮಾನಿಕ ವಿಹಂಗಮ ನೋಟ ಎಂದು ಬರೆಯಲಾಗದೆ.

Image Credit: Shutterstock

ಫ್ಲೈಓವರ್ ನ ಚಿತ್ರವನ್ನು ಛಾಯಾಗ್ರಾಹಕ ಹರಿ ಮಹಿಧರ್ ಅಪ್‌ಲೋಡ್ ಮಾಡಿದ್ದಾರೆ. ಫೋಟೋಗಳು ವಿಭಿನ್ನ ಮಾದರಿಯನ್ನು ಹೊಂದಿದ್ದು ಅದನ್ನು ವೈರಲ್ ಚಿತ್ರದಲ್ಲೂ ಗಮನಿಸಬಹುದು. ಫ್ಲೈಓವರ್ ಅನ್ನು ತೋರಿಸುವ ಸ್ಟಾಕ್ ಚಿತ್ರಗಳಲ್ಲಿ ಅಪ್‌ಲೋಡ್ ಮಾಡಿದ ಚಿತ್ರಗಳೊಂದಿಗೆ ವೈರಲ್ ಚಿತ್ರವನ್ನು ಹೋಲಿಸಿದಾಗ, ಹಲವಾರು ಹೋಲಿಕೆಗಳನ್ನು ಗಮನಿಸಬಹುದು. ಕೆಳಗೆ ನೀವು ಹೋಲಿಕೆಯನ್ನು ನೋಡಬಹುದು.

Image Comparision (Credit: Alamy)

ಬಿಜೆಪಿ ನಾಯಕರು ಮತ್ತು ಅದರ ITಸೆಲ್‌ಗಳು ಪ್ರಸಾರ ಮಾಡಿದ ಚಿತ್ರವು ಮುಂಬೈನ ಮೂಲಸೌಕರ್ಯ ಯೋಜನೆಯನ್ನು ಹೊಂದಿದ್ದು, ಸ್ಟಾಕ್ ಫೋಟೋ ವೆಬ್‌ಸೈಟ್‌ಗಳು ಮತ್ತು ಗೂಗಲ್ ನಕ್ಷೆಗಳಲ್ಲಿ ಅಪ್‌ಲೋಡ್ ಮಾಡಲಾದ ಚಿತ್ರಗಳ ಪ್ರಕಾರ ಸಾಂತಾಕ್ರೂಜ್ ಚೆಂಬೂರ್ ಲಿಂಕ್ ರೋಡ್ ಫ್ಲೈಓವರ್ ನದ್ದು ಎಂದು ಸ್ಪಷ್ಟವಾಗಿದೆ. ಹೀಗಾಗಿ, ಬಿಜೆಪಿಯು ಮುಂಬೈನಿಂದ ಸಾಂತಾಕ್ರೂಜ್ ಚೆಂಬೂರ್ ಲಿಂಕ್ ರಸ್ತೆಯ ಚಿತ್ರಗಳನ್ನ ಗುಜರಾತ್‌ನಲ್ಲಿ ಮೂಲಸೌಕರ್ಯ ಯೋಜನೆಯ ಚಿತ್ರಗಳು ಎಂದು ಸುಳ್ಳು ಸುದ್ದಿ ಹರಡಿದೆ. ಆದ್ದರಿಂದ ಪೊಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ದಿ ಲಾಜಿಕಲ್ ಇಂಡಿಯನ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ರೈಲಿನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಮುಸ್ಲಿಮರಿಂದ ಯೋಧನ ಮೇಲೆ ಹಲ್ಲೆ ನಡೆದಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights