ಫ್ಯಾಕ್ಟ್‌ಚೆಕ್: ರೈಲಿನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಮುಸ್ಲಿಮರಿಂದ ಯೋಧನ ಮೇಲೆ ಹಲ್ಲೆ ನಡೆದಿದ್ದು ನಿಜವೇ?

ರೈಲಿನಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಮುಸ್ಲಿಂ ಸಮುದಾಯದ ಕೆಲವರು ಯೋಧ ವಿಲಾಸ್ ನಾಯಕ್ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸೇನೆಯ ನಿವೃತ್ತ ಯೋಧರೊಬ್ಬರ ಮುಖದ ಮೇಲೆ ರಕ್ತದ ಕಲೆ ಹಾಗೂ ಗಾಯದ ಗುರುತು ಕಾಣಿಸುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸ್ವರ್ಣ ಜಯಂತಿ ರೈಲಿನಲ್ಲಿ ನಡೆದ ಈ ಘಟನೆಯ ವಿಡಿಯೊವನ್ನು ಹಲವರು ಹಂಚಿಕೊಂಡಿದ್ದು, ರೈಲಿನಲ್ಲಿ ಪ್ರಾರ್ಥನೆ ಮಾಡುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದೆ. ‘ಜಿಹಾದಿಗಳು ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಸುದರ್ಶನ್ ವಾಹಿನಿಯ ಪತ್ರಕರ್ತರೊಬ್ಬರು ಟ್ವೀಟ್ ಮಾಡಿದ್ದಾರೆ.

ದೈನಿಕ್ ಭಾಸ್ಕರ್ ಪತ್ರಕರ್ತ ರಾಹುಲ್ ಶರ್ಮಾ ಕೂಡ ಇದೇ ಟ್ವೀಟ್‌ಅನ್ನು ಹಂಚಿಕೊಂಡಿದ್ದು ಹಿಂದೂ ವ್ಯಕ್ತಿಗೆ ಹಲ್ಲೆ ನಡೆಸಿದ ಹಲ್ಲೆಕೋರರ ಚಿತ್ರಗಳು ಎಂದು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಈ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದ ಸ್ಕ್ರೀನ್‌ಶಾಟ್‌ಅನ್ನು ಗೂಗಲ್ ಸರ್ಚ್ ಮಾಡಿದಾಗ, ಯೋಧನ ಮೇಲೆ ಮುಸ್ಲಿಮರು ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು ಎಂದು ಲಾಜಿಕಲ್ ಇಂಡಿಯನ್ ವೆಬ್‌ಸೈಟ್ ಫ್ಯಾಕ್ಟ್‌ಚೆಕ್ ವರದಿಯನ್ನು ಪ್ರಕಟಿಸಿದೆ. ಗಾಯಾಳು ವ್ಯಕ್ತಿಯು ವಿಡಿಯೊದಲ್ಲಿ ಮಾತನಾಡಿರುವ ಪ್ರಕಾರ, ಹಲ್ಲೆ ನಡೆಸಿದ್ದು ರೈಲಿನ ಅಡುಗೆ ಕೆಲಸಗಾರರೇ ಹೊರತು ಮುಸ್ಲಿಮರಲ್ಲ ಎಂದು ದೃಢಪಟ್ಟಿದೆ.

https://twitter.com/FltLtAnoopVerma/status/1594769792841486349?ref_src=twsrc%5Etfw%7Ctwcamp%5Etweetembed%7Ctwterm%5E1594769792841486349%7Ctwgr%5E1a81a50e5b693f0b9e57e5fb8023ff2a1f63a6ff%7Ctwcon%5Es1_&ref_url=https%3A%2F%2Fwww.firstpost.com%2Findia%2Fretired-army-jawan-beaten-for-protesting-namaz-onboard-train-in-mp-11674551.html

ನ.22ರಂದು ‘ಫಸ್ಟ್‌ಪೋಸ್ಟ್‌’ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ ಈ ಅಂಶವಿದೆ. ಮುಸ್ಲಿಮರು ಬೋಗಿಯಲ್ಲಿ ಆಗಾಗ್ಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ನಾಯಕ್ ಅವರಿಗೆ ಶೌಚಾಲಯಕ್ಕೆ ಹೋಗಲು ದಾರಿ ಸಿಗಲಿಲ್ಲ. ಇದನ್ನು ಪ್ರತಿಭಟಿಸುವ ಸಲುವಾಗಿ ನಾಯಕ್ ಸಹ ಅದೇ ಜಾಗದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಅಡುಗೆ ಕೆಲಸಗಾರರು ಹೇಳಿದರು. ಆದರೆ, ಅವರು ಒಪ್ಪದ್ದರಿಂದ ವಾಗ್ವಾದ ನಡೆದು, ಅದು ಘರ್ಷಣೆಗೆ ತಿರುಗಿತು ಎಂದು ವರದಿ ಉಲ್ಲೇಖಿಸಿದೆ.

Image Credit: Firstpost

ಮಾಜಿ ಸೈನಿಕ ವಿಲಾಸ್ ನಾಯಕ್ ಅವರು ತಮ್ಮ ಕುಟುಂಬದೊಂದಿಗೆ ನಿಜಾಮುದ್ದೀನ್‌ನಿಂದ ವಿಶಾಖಪಟ್ಟಣಕ್ಕೆ ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್ ನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಅವರ ಬೋಗಿಗೆ 3 ಮುಸ್ಲಿಂ ಯುವಕರೂ ಹತ್ತಿದ್ದಾರೆ. ಸಮಯ ಸಿಕ್ಕಾಗ ನೆಲದ ಮೇಲೆ ನಮಾಜ್ ಮಾಡುತ್ತಿದ್ದರು. ಇದನ್ನು ನೋಡಿದ ನಾಯಕ್  ಸ್ವಲ್ಪ ವಿಚಲಿತನಾದಂತೆ ಕಂಡುಬಂದಿದೆ. 1-2 ಬಾರಿ ನಮಾಜ್ ಸಮಯದಲ್ಲಿಯೂ ಶೌಚಾಲಯಕ್ಕೆ ಹೋಗಬೇಕೆಂದು ಪ್ರಯತ್ನಿಸಿದ್ದಾನೆ. ಎಂದು ವರದಿಯಾಗಿದೆ.

‘ನಾಯಕ್ ನೀಡಿರುವ ದೂರಿನಲ್ಲಿ ಇಬ್ಬರು ಅಡುಗೆ ಕೆಲಸಗಾರರಿಂದ ಹಲ್ಲೆ ಎಂಬ ಆರೋಪ ಮಾಡಿದ್ದಾರೆ. ಈ ಘರ್ಷಣೆಯಲ್ಲಿ ಮುಸ್ಲಿಮರು ಪಾಲ್ಗೊಂಡಿಲ್ಲ’ ಎಂದು ಜಿಆರ್‌ಪಿ ಬೇತುಲ್ ಪೊಲೀಸ್ ಠಾಣೆಯ ಉಸ್ತುವಾರಿ ಪೊಲೀಸ್ ಅಧಿಕಾರಿ ನರೋತ್ತಮ ಠಾಕೂರ್ ಸ್ಪಷ್ಟಪಡಿಸಿದ್ದಾರೆ. ಅಡುಗೆ ಕೆಲಸದವರಿಗೂ ಗಾಯಗಳಾಗಿವೆ ಎಂದು ಅಡುಗೆ ಕೆಲಸ ವಿಭಾಗದ ಮ್ಯಾನೇಜರ್ ಹರ್ವೇಶ್ ಶ್ರೀವಾಸ್ತವ ಹೇಳಿದ್ದಾರೆ.

ವೀಡಿಯೊ ಹೇಳಿಕೆಯಲ್ಲಿ, ರೈಲ್ವೆ ಪೊಲೀಸ್ ಅಧಿಕಾರಿ ನರೋತ್ತಮ್ ಸಿಂಗ್ ಠಾಕೂರ್ ಅವರು, ಮಾತನಾಡಿದ್ದು “ಅಡುಗೆ ಕೆಲಸಗಾರರಿಗೂ ಮತ್ತು ನಿವೃತ್ತ ಸೈನಿಕನ ನಡುವೆ ಮಾರಾಮಾರಿ ನಡೆದಿದೆ. ಯೋಧನ ಮೂಗಿಗೆ ಗಾಯವಾಗಿದ್ದು ರಕ್ತ ಸುರಿಯಲಾರಂಭಿತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಸ್ಲಿಂ ವ್ಯಕ್ತಿಗಳು ಪ್ರತ್ಯೇಕವಾಗಿ ನಮಾಜ್ ಮಾಡುತ್ತಿದ್ದರು ಅವರಿಗೂ ಈ ಘರ್ಷಣೆಗೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಸೆಕ್ಷನ್ 294, 323 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋ ಪೋಸ್ಟ್‌ನಲ್ಲಿ ನಮಾಜ್ ಮಾಡುತ್ತಿದ್ದ ಮುಸ್ಲಿಮರು ಮಾಜಿ ಸೈನಿಕನ ಮೇಲೆ ಹಲ್ಲ ನಡೆಸಿದ್ದಾರೆ ಎಂಬುದು ಸಂಪೂರ್ಣ ಸುಳ್ಳು.

ಕೃಪೆ: ದಿ ಲಾಜಿಕಲ್ ಇಂಡಿಯನ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ‘ಮೋದಿ’ಯವರನ್ನು ವಿಶ್ವದ ಅತ್ಯುತ್ತಮ ಪ್ರಧಾನಿ ಎಂದು UNESCO ಘೋಷಿಸಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights