ಫ್ಯಾಕ್ಟ್‌ಚೆಕ್: ‘ಮೋದಿ’ಯವರನ್ನು ವಿಶ್ವದ ಅತ್ಯುತ್ತಮ ಪ್ರಧಾನಿ ಎಂದು UNESCO ಘೋಷಿಸಿದೆಯೇ?

ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವದ ಅತ್ಯುತ್ತಮ ಪ್ರಧಾನಿ ಎಂದು ಕೆಲವೇ ನಿಮಿಷಗಳ ಹಿಂದೆ ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ UNESCO ಘೋಷಿಸಿದೆ ಎಂದು ಸಾಮಾಜಿಕ ಮಾಧ್ಯಮವಾದ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಷಯವನ್ನು ಎಲ್ಲೆಡೆ ಹಂಚಿಕೊಳ್ಳಿ. ದೇಶದ ಹೆಮ್ಮೆಯನ್ನು ಹಂಚಿಕೊಳ್ಳಿ ಎಂಬ ಸಂದೇಶವೊಂದು  ಆನ್‌ಲೈನ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.

UNESCO Calls PM Modi As World's Best Prime Minister? Fake Claim Revived | BOOM

ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ಇದೇ ಸುದ್ದಿ ಹೆಚ್ಚೆಚ್ಚು ಹಂಚಿಕೊಳ್ಳಲಾಗುತ್ತಿದ್ದು, ಈ ಸುದ್ದಿ ನಿಜವೇ ಎಂದು ಪರಿಶೀಲಿಸುವಂತೆ ಏನ್‌ಸುದ್ದಿ.ಕಾಂ ನ ಓದುಗರು ಸಂದೇಶಗಳ ಮೂಲಕ ವಿನಂತಿಸಿದ್ದಾರೆ. ಹಾಗಿದ್ದರೆ ಈ ಸುದ್ದಿ ನಿಜವೇ ? ಮೋದಿ ವಿಶ್ವದಲ್ಲಿಯೇ ಅತ್ಯುತ್ತಮ ಪ್ರಧಾನಿ ಎಂದು UNESCO ಘೋಷಿಸಿದೆಯೇ ಎಂದು ಪರಿಶೀಲಿಸೋಣ.

REVEALED: Here's TRUTH Behind Viral Message Saying Modi Is Declared Best PM By UNESCO - RVCJ Media

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಶ್ವದ ಅತ್ಯುತ್ತಮ ಪ್ರಧಾನಿ ಮೋದಿ ಎಂದು UNESCOಘೋಷಿಸಿ ಎನ್ನಲಾದ ಸುದ್ದಿ ನಿಜವೇ ಎಂದು ಪರಿಶೀಲಿಸಿದಾಗ, ಇಂಥದ್ದೊಂದು ಸುದ್ದಿ ಹರಿದಾಡುತ್ತಿರುವುದು ಇದೇ ಮೊದಲಲ್ಲ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಹಲವು ಬಾರಿ ಇಂಥದ್ದೊಂದು ಸುದ್ದಿ ಆಗಾಗ್ಗೆ ಫೇಸ್‌ಬುಕ್, ಟ್ವೀಟರ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇದೆ.

ಯುನೆಸ್ಕೋ ವಿಶ್ವದ ಅತ್ಯುತ್ತಮ ಪ್ರಧಾನಿಯನ್ನು ಆಯ್ಕೆ ಮಾಡುತ್ತದೆಯೇ ?

ಗುಜರಾತಿನಲ್ಲಿ ನಡೆಯುತ್ತಿರುವ ಚುನಾವಣಾ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರ ವರ್ಚಸ್ಸನ್ನು ಹೆಚ್ಚಿಸುವ ಸಲುವಾಗಿ ಇಂತಹ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯ ಬಿಡಲಾಗಿದೆ ಎನ್ನಲಾಗಿದೆ. ಇದನ್ನೆ ಜನಸಾಮಾನ್ಯರು ನಿಜವೆಂದು ನಂಬಿದ್ದಾರೆ. ವಾಸ್ತವವಾಗಿ ಯುನೆಸ್ಕೋ ವಿಶ್ವದ ಅತ್ಯುತ್ತಮ ಪ್ರಧಾನಿ ಎಂದು ಆಯ್ಕೆ ಮಾಡುವುದಾಗಲಿ, ಘೋಷಿಸುವುದಾಗಲಿ ಮಾಡುವುದಿಲ್ಲ. UNESCO ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ವಿಷಯಗಳಿಗೆ ಸಂಬಂಧಿಸಿದಂತೆ ಮಾತ್ರವೇ ಗಮನ ಹರಿಸುತ್ತದೆ. ಅದನ್ನು ಬಿಟ್ಟು ಯಾವುದೇ ಸಂದರ್ಭದಲ್ಲೂ ಅತ್ಯುತ್ತಮ ಪ್ರಧಾನಿಯನ್ನು ಆಯ್ಕೆ ಮಾಡುವ ಕೆಲಸ ಮಾಡಿಲ್ಲ. ಇದು ಸುಳ್ಳು ಸಂದೇಶ ಎಂದು ಬೂಮ್ ವರದಿ ಮಾಡಿದೆ.

” UNESCO ಎಂದಿಗೂ ಅತ್ಯುತ್ತಮ ಪ್ರಧಾನಿ ಎಂಬ ಬಿರುದ್ದನ್ನು ನೀಡುವುದಿಲ್ಲ ಎಂದು ಯುನೆಸ್ಕೋದ ಮಾಧ್ಯಮ ಕಚೇರಿಯ ಮೂಲಗಳಿಂದ ದೃಢಪಡಿಸಿದೆ.

         চিত্র

ಭಾರತದ ‘ಜನ ಗಣ ಮನ’ಗೆ ‘ಅತ್ಯುತ್ತಮ ರಾಷ್ಟ್ರಗೀತೆ’ (ಇಲ್ಲಿ ಓದಿ), ಅಥವಾ ಭಾರತದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಗೆ ‘ಅತ್ಯಂತ ಪ್ರಾಮಾಣಿಕ ರಾಜಕೀಯ ಪಕ್ಷ’ (ಓದಿ) ಎಂಬ ಶ್ರೇಣಿಗಳನ್ನು UNESCO ನೀಡಿದೆ ಎಂಬ ಸುಳ್ಳು ಸಂದೇಶಗಳನ್ನು ಹಿಂದೆಯೂ ಹಂಚಿಕೊಂಡ ಉದಾಹರಣೆಗಳಿವೆ ಅದನ್ನು ಇಲ್ಲಿ ನೋಡಬಹುದು.

ಯುನೆಸ್ಕೋ ಪ್ರಾರಂಭವಾದ 1945ರಿಂದ ಇಲ್ಲಿಯವರೆಗೂ ಅತ್ಯುತ್ತಮ ಪ್ರಧಾನಿಯನ್ನು ಆಯ್ಕೆ ಮಾಡುವ ಕೆಲಸ ಮಾಡಿಲ್ಲ. ಇದರಲ್ಲಿ ಈಗಲೂ ಯಾವುದೇ ಬದಲಾವಣೆ ಇಲ್ಲ. ಹೀಗಾಗಿ UNESCO ಹೆಸರಲ್ಲಿ ಹರಿದಾಡುತ್ತಿರುವ ಭಾರತದ ಪ್ರಧಾನಿ ಮೋದಿ ಅತ್ಯುತ್ತಮ ಪ್ರಧಾನಿ ಎಂಬ ಸಂದೇಶ ಸುಳ್ಳು.

ಕೃಪೆ: ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಅರುಣಾಚಲ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಮೋದಿಯೇ ಬರಬೇಕಾಯಿತೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights