ಫ್ಯಾಕ್ಟ್‌ಚೆಕ್: ಈ ಫೋಟೋ ಚೋಳ ರಾಜಕುಮಾರಿ ಕುಂದವೈ ಅವರ ಚಿತ್ರವಲ್ಲ! ಇನ್ಯಾರದ್ದು?

ಮಲೇಷ್ಯಾದ ಬ್ರಿಟಿಷ್ ಮ್ಯೂಸಿಯಂನಲ್ಲಿ ಇರಿಸಲಾಗಿರುವ ಚೋಳ ರಾಜಕುಮಾರಿ ಕುಂದವೈ ಅವರ ಅಪರೂಪದ ಛಾಯಾಚಿತ್ರ ಎಂಬ ಹೇಳಿಕೆಯೊಂದಿಗೆ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

 

View this post on Instagram

 

A post shared by Sumar Postu (@sumarpostu)

ಫ್ಯಾಕ್ಟ್‌ಚೆಕ್:

ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಫೋಟೋವನ್ನು ರನ್ ಮಾಡಿದಾಗ, ಅದೇ ಚಿತ್ರವನ್ನು ಅನೇಕ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ. ‘Alamy’ ಸ್ಟಾಕ್ ತನ್ನ ವೆಬ್‌ಸೈಟ್‌ನಲ್ಲಿ ಈ ಕೆಳಗಿನ ವಿವರಣೆಯೊಂದಿಗೆ ಅದೇ ಫೋಟೋವನ್ನು ಪ್ರಕಟಿಸಿದೆ. –

ವೆಬ್‌ಸೈಟ್‌ ಪ್ರಕಾರ ಮ್ಯೂಸಿಯಂನಲ್ಲಿ ಕಂಡುಂಬಿರುವ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಚಿತ್ರ “ಆಭರಣಗಳನ್ನು ಧರಿಸಿರುವ  ಮದ್ರಾಸ್‌ ಹುಡುಗಿಯ ಭಾವಚಿತ್ರವನ್ನು 1872ರಲ್ಲಿ ತೆಗೆಯಲಾಗಿದೆ. ಅಂದರೆ ಈ ಫೋಟೋ 19 ನೇ ಶತಮಾನದ್ದಾಗಿದೆ, ಆದರೆ ಚೋಳ ರಾಜಕುಮಾರಿ ಕುಂದವೈ 10 ರಿಂದ 11 ನೇ ಶತಮಾನದಲ್ಲಿ  ವಾಸಿಸುತ್ತಿದ್ದರು ಎಂದು ವರದಿಯಾಗಿದೆ.

ಅಲ್ಲದೆ, ಇದೇ ಫೋಟೋವನ್ನು ‘ಬ್ರಿಟಿಷ್ ಲೈಬ್ರರಿ’ ವೆಬ್‌ಸೈಟ್‌ನಲ್ಲಿ ಇದೇ ರೀತಿಯ ವಿವರಣೆಯೊಂದಿಗೆ ನೋಡಬಹುದು, ಫೋಟೋವು 19 ನೇ ಶತಮಾನಕ್ಕೆ ಸಂಬಂಧಿಸಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಮಲೇಷ್ಯಾದ ಬ್ರಿಟಿಷ್ ಮ್ಯೂಸಿಯಂನಲ್ಲಿ ಇರಿಸಲಾಗಿರುವ ಚೋಳ ರಾಜಕುಮಾರಿ ಕುಂದವೈ ಅವರ ಅಪರೂಪದ ಛಾಯಾಚಿತ್ರ ಎಂದು ಆಭರಣಗಳನ್ನು ಧರಿಸಿರುವ ಸಂಬಂಧವಿಲ್ಲದ ಹುಡುಗಿಯ ಭಾವಚಿತ್ರವನ್ನು ಹಂಚಿಕೊಳ್ಳಲಾಗಿದೆ. ಫೋಟೋದಲ್ಲಿರುವ ಮಹಿಳೆ ಚೋಳ ರಾಜಕುಮಾರಿ ಕುಂದವೈ ಅಲ್ಲ. ಫೋಟೋವನ್ನು 19 ನೇ ಶತಮಾನದಲ್ಲಿ ತೆಗೆದುಕೊಳ್ಳಲಾಗಿದೆ ಆದರೆ ಚೋಳ ರಾಜಕುಮಾರಿ ಕುಂದವೈ 10 ಮತ್ತು11 ನೇ ಶತಮಾನದಲ್ಲಿ ವಾಸಿಸುತ್ತಿದ್ದರು ಎಂದು ವರದಿಯಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: FIFA ವಿಶ್ವಕಪ್‌ನಲ್ಲಿ ನೀಡಿದ ಬ್ಯಾಗ್‌ ಮೇಲೆ ಮೋದಿ ಫೋಟೋ ಹಾಕಲಾಗಿತ್ತೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights