ಟಾಕಿಂಗ್ ಟಾಮ್ ಅಕೂಲ್ ಬಾಲಾಜಿ ವಿರುದ್ಧ ದೂರು ಕೊಟ್ಟ ಗ್ರಾಮಸ್ಥರು..!

ಪ್ಯಾಟೆಹುಗ್ಡೀರ್ ಹಳ್ಳಿ ಲೈಫು, ಹಳ್ಳಿ ಹೈದಾ ಪ್ಯಾಟೆಗೆ ಬಂದ ನಂತಹ ಪಾಪುಲರ್ ರಿಯಾಲಿಟಿ ಶೂನಾ ಆಂಕರ್ ಅಕೂಲ್ ಬಾಲಾಜಿ ಮೇಲೆ ಕೇಸ್  ದಾಖಲಾಗಿದೆ.

ಹೌದು… ಕಿರುತೆರೆಯ ಟಾಕಿಂಗ್ ಟಾಮ್ ಅಂತಲೇ ಫೇಮಸ್ ಆಗಿದ್ದ ನಿರೂಪಕ ಅಕೂಲ್ ಬಾಲಾಜಿ ಮೇಲೆ ಲಾಕ್ ಡೌನ್ ನಿಯಮ ಉಲ್ಲಂಘನೆಯ ಕೇಸ್ ದಾಖಲಾಗಿದೆ. ಇವರ ಮೇಲೆ ಕೇಸ್ ಹಾಕಿದ್ದು ಪೊಲೀಸರಲ್ಲಿ ಬದಲಿಗೆ ಗ್ರಾಮಸ್ಥರು. ಎಸ್..  ಅಕೂಲ್ ಬಾಲಾಜಿ ವಿರುದ್ಧ ದೊಡ್ಡಬಳ್ಳಾಪುರ ತಾಲೂಕಿನ ಲಗುಮೇನಹಳ್ಳಿ ಗ್ರಾಮದಲ್ಲಿರುವ ಜನ ದೂರು ನೀಡಿದ್ದಾರೆ.

ಅಕುಲ್ ಬಾಲಾಜಿ ಒಡೆತನದ ಸನ್ ಶೈನ್ ರೆಸಾರ್ಟ್ ದೊಡ್ಡಬಳ್ಳಾಪುರ ತಾಲೂಕಿನ ಲಗುಮೇನಹಳ್ಳಿ ಗ್ರಾಮದಲ್ಲಿದ್ದು, ಭಾನುವಾರ ಬೆಂಗಳೀನ  ಥಣಿಸಂದ್ರ ನಿವಾಸಿಗಳ ವಿವಾಹ ಕಾರ್ಯಕ್ರಮಕ್ಕೆ ಇದೇ ರೆಸಾರ್ಟ್ ನಲ್ಲಿ ಜನ ವಾಸ ಮಾಡಿದ್ದಾರೆ. ಮಧ್ಯರಾತ್ರಿ ವೇಳೆ 20ಕ್ಕೂ ಹೆಚ್ಚು ಮಂದಿ ರೆಸಾರ್ಡ್ ಗೆ ಬಂದಿಳಿದಿದ್ದಾರೆ.

ಇದನ್ನು ಕಂಡ ಗ್ರಾಮಸ್ಥರು ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ ರೆಸಾರ್ಟ್ ನಡೆಸಿದ ಆರೋಪದಡಿ ನಿರೂಪಕ ಅಕುಲ್ ಬಾಲಾಜಿ ಮತ್ತು ಶ್ರೀನಿವಾಸ ಸುಬ್ರಹ್ನಣ್ಯಂ ಎಂಬುವವರ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಇದೀಗ ಪ್ರಕರಣದ ಗಂಭೀರತೆ ಅರಿತ ಪೊಲೀಸರು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಡೆ ಕಾಯಿದೆ 188 ಐಪಿಸಿ ಕಲಂ 269ರ ಅನ್ವಯ ಎಫ್ಐಆರ್ ದಾಖಲಿಸಿದ್ದಾರೆ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights