ಮಧ್ಯಪ್ರದೇಶ ಸರ್ಕಾರ ಸಂಪುಣ ವಿಸ್ತರಣೆ; ಐವರು ಸಚಿವರ ಪ್ರಮಾಣ ವಚನ

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಮ್ಮ ಮೊದಲ ಹಂತದ ಸಂಪುಟ ವಿಸ್ತರಣೆ ನೆರವೇರಿಸಿದ್ದಾರೆ. ಇಂದು ಮೊದಲ ಹಂತವಾಗಿ ಐವರು ಬಿಜೆಪಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಕೊರೋನಾವೈರಸ್  ಪ್ರೇರಿತ ಲಾಕ್‌ಡೌನ್ ಮಧ್ಯೆ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನರೋತ್ತಮ್ ಮಿಶ್ರಾ, ಕಮಲ್ ಪಟೇಲ್, ಮೀನಾ ಸಿಂಗ್, ತುಳಸಿ ಸಿಲಾವತ್ ಮತ್ತು ಗೋವಿಂದ್ ಸಿಂಗ್ ರಜಪೂತ್ ಅವರುಗಳು ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.

ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸುಮಾರು ಒಂದು ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ.

ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕಾರಣವಾದ 22 ಕಾಂಗ್ರೆಸ್ ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ಕಳೆದ ತಿಂಗಳು ಮಾರ್ಚ್ 23 ರಂದು ಚೌಹಾಣ್ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ನೂತನ ಸಚಿವರಿಗೆ ಮಧ್ಯಪ್ರದೇಶ ರಾಜ್ಯಪಾಲ ಳಾಲ್ ಜಿ ಟಂಡನ್ ಪ್ರಮಾಣವಚನ ಬೋಧಿಸಿದ್ದಾರೆ.

ಈ ಕುರಿತು ಮಾತನಾಡಿದ ನೂತನ ಸಚಿವ ನರೋತ್ತಮ್ ಮಿಶ್ರಾ “ಸಂಪುಟ ಚಿಕ್ಕದಾಗಿದೆ, ಆದರೆ ನಮ್ಮ ಗುರಿ ದೊಡ್ಡದಾಗಿದೆ  ಎಂದಿದ್ದಾರೆ.

“ಕ್ಯಾಬಿನೆಟ್ ಚಿಕ್ಕದಾಗಿದೆ ಆದರೆ ನಮ್ಮ ಗುರಿ ದೊಡ್ಡದಾಗಿದೆ. ರಾಷ್ಟ್ರ ಮತ್ತು ರಾಜ್ಯದಲ್ಲಿ ಕೊರೋನಾವೈರಸ್ ಸಾಂಕ್ರಾಮಿಕ ರೋಗ ಬಾಧಿಸುತ್ತಿದ್ದು ಇದರಿಂದ ಪೂರ್ಣ ಬಿಡುಗಡೆ ಪಡೆಯುವುದು ನಮ್ಮ ಮೊದಲ ಗುರಿಯಾಗಿದೆ.  ನಾನು ಈ ಹಿಂದೆ 12 ಕ್ಕೂ ಹೆಚ್ಚು ಇಲಾಖೆಗಳಲ್ಲಿ ಸೇವೆ ಸಲ್ಲಿಸಿದೇನೆ.ಯಾವುದೇ ಜವಾಬ್ದಾರಿಯನ್ನು ನೀಡಿದರೂ ನಿರ್ವಹಿಸಲು  ಪ್ರಯತ್ನಿಸುತ್ತೇನೆ” ಎಂದು ಮಿಶ್ರಾ ತಿಳಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights