FACT CHECK | ಮಹಿಳೆಯರನ್ನು ಮಾರಾಟ ಮಾಡುವ ಮಾರುಕಟ್ಟೆ ಅಫ್ಘಾನಿಸ್ತಾನದಲ್ಲಿ ಇರುವುದು ನಿಜವೇ?
ಮಾರ್ಕೆಟ್ ಎಂದರೆ ಹೂವು, ಹಣ್ಣು, ತರಕಾರಿ, ಮೀನು ಮತ್ತು ಮಾಂಸಗಳನ್ನು ಮಾರಾಟ ಮಾಡುವಂತಹ ಮಾರುಕಟ್ಟೆಗಳ ಬಗ್ಗೆ ಪರಿಚಯ ಎಲ್ಲರಿಗೂ ಇದೆ. ಆದರೆ ಅಫ್ಘಾನಿಸ್ತಾನದಲ್ಲಿ ಮಹಿಳೆಯರನ್ನು ಸರಕಿನಂತೆ ಮಾರಾಟ ಮಾಡಲಾಗುತ್ತಿದೆ ಎಂದು ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಅಫ್ಘಾನಿಸ್ತಾನದ ಮಾರುಕಟ್ಟೆಯಲ್ಲಿ ಮಹಿಳೆಯರನ್ನು ಮಾರಾಟ ಮಾಡುತ್ತಿದೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್ ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 2023ರಲ್ಲಿ ಅಫ್ಶಿನ್ ಇಸ್ಮಾಯಿಲಿ ಎಂಬ ಪತ್ರಕರ್ತ ಜುಲೈ 21 ರಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, “ಆಫ್ಘಾನಿಸ್ತಾನದಲ್ಲಿ ಒಂದು ಮಾರುಕಟ್ಟೆ. ಬಡತನ” ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಿದ್ದಾರೆ.
“ಈ ವೀಡಿಯೊವನ್ನು ಅಫ್ಘಾನಿಸ್ತಾನದ ಫರಿಯಾಬ್ ಪ್ರಾಂತ್ಯದ ಬಳಿ ಇರುವ ಸಾಮಾನ್ಯ ಮಾರುಕಟ್ಟೆಯಲ್ಲಿ 2023ರಲ್ಲಿ ತೆಗೆಯಲಾಗಿದ್ದು, ದೈನಂದಿನ ವಸ್ತುಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವುದಕ್ಕಾಗಿ ಮಹಿಳೆಯರು ನೆರೆದಿರುವ ಸಾಮಾನ್ಯ ಮಾರುಕಟ್ಟೆ ಚಿತ್ರ” ಎಂದು ಯುದ್ಧ ಮತ್ತು ಸಂಘರ್ಷ ಪತ್ರಕರ್ತ ಅಫ್ಶಿನ್ ಇಸ್ಮಾಯಿಲಿ ದೃಢೀಕರಿಸಿದ್ದಾರೆ.
ಮಾರುಕಟ್ಟೆಯಲ್ಲಿ ಮಹಿಳೆಯರನ್ನು ಮಾರಾಟ ಮಾಡಲಾಗುತ್ತಿದೆ ಎಂಬುದು ಅಕ್ಷರಶಃ ಸುಳ್ಳು. ಅಫ್ಘಾನಿಸ್ತಾನದಲ್ಲಿರುವ ಬಡತನವನ್ನು ಚಿತ್ರಿಕರಿಸಲು 2023ರ ಅಕ್ಟೋಬರ್ 13ರಂದು ಈ ವಿಡಿಯೋ ಚಿತ್ರಿಸಿದ್ದಾಗಿ ಪತ್ರಕರ್ತ ಅಫ್ಶಿನ್ ಇಸ್ಮಾಯಿಲಿ ಸ್ಪಷ್ಟ ಪಡಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಅಫ್ಘಾನಿಸ್ತಾನದ ಸಾಮಾನ್ಯ ಮಾರುಕಟ್ಟೆಯ ವಿಡಿಯೋವನ್ನು, ಮಹಿಳೆಯರನ್ನು ಮಾರಾಟ ಮಾಡುವ ಮಾರುಕಟ್ಟೆ ಅಫ್ಘಾನಿಸ್ತಾನದಲ್ಲಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ. ಇತರೆ ದೇಶಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರ ಬಗ್ಗೆ ವೈರಲ್ ಆಗುವ ವಿಡಿಯೋಗಳಲ್ಲಿ ಪ್ರಸಾರವಾಗುವ ಸುಳ್ಳು ಸುದ್ದಿಗಳನ್ನು ಪರಿಶೀಲಿಸದೆ ಕುರುಡಾಗಿ ಹಂಚಿಕೊಳ್ಳಬೇಡಿ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ದಲಿತ ಯುವಕನಿಗೆ ಥಳಿಸಿ ‘ಬೂಟು’ ನೆಕ್ಕಿಸಿ ಹಿಂಸೆ ನೀಡಲಾಗಿದೆ ಎಂಬ ವಿಡಿಯೋದ ಅಸಲೀಯತ್ತೇನು ಗೊತ್ತೇ?