FACT CHECK | ದಲಿತ ಯುವಕನಿಗೆ ಥಳಿಸಿ ‘ಬೂಟು’ ನೆಕ್ಕಿಸಿ ಹಿಂಸೆ ನೀಡಲಾಗಿದೆ ಎಂಬ ವಿಡಿಯೋದ ಅಸಲೀಯತ್ತೇನು ಗೊತ್ತೇ?

ದಲಿತ ಯುವಕನನ್ನು ಕೆಲವರು ಥಳಿಸಿ ಅವರ ಬೂಟುಗಳನ್ನು ನೆಕ್ಕುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ.

ವೈರಲ್ ವಿಡಿಯೋದಲ್ಲಿ ಜಾತಿ ದೌರ್ಜನ್ಯಕ್ಕೆ ಒಳಗಾಗಿರುವ ಯುವಕನನ್ನು ರಾಯ್‌ಬರೇಲಿ ಬಳಿಯ ಉಂಚಹಾರ್ ಕೊತ್ವಾಲಿ ಪ್ರದೇಶದ ಸವಯ್ಯ ರಾಜೇ ಗ್ರಾಮದ ನಿವಾಸಿ ಅಮನ್ ಸಿಂಗ್ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ 15 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹಾಗಿದ್ದರೆ ಈ ಘಟನೆಯ ಹಿನ್ನಲೆ ಏನು ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ದಲಿತ ಯುವಕನ ಮೇಲೆ ಸವರ್ಣೀಯರು ಹಲ್ಲೆ ನಡೆಸಿ ಬೂಟು ನೆಕ್ಕಿಸಿದ್ದಾರೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆಯನ್ನು ಪರಿಶೀಲಿಸಲು ಸೋಶಿಯಲ್ ಮೀಡಿಯಾದಲ್ಲಿ ಸರ್ಚ್ ಮಾಡಿದಾಗ, ರಾಯ್‌ಬರೇಲಿ ಪೊಲೀಸರ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ ಟ್ವೀಟ್‌ವೊಂದು ಲಭ್ಯವಾಗಿದೆ.

ಸಂಬಂಧಿತ ಕೀವರ್ಡ್‌ಗಳ ಸಹಾಯದಿಂದ NBT ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿ ಲಭ್ಯವಾಗಿದ್ದು, ವರದಿಯ ಪ್ರಕಾರ, ರಾಯ್ ಬರೇಲಿಯ ಉಂಚಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಸವಯ್ಯ ರಾಜೇ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿಗಳು ಅಜಯ್ ಪ್ರತಾಪ್ ಸಿಂಗ್ ಅವರ ಪುತ್ರ ಅಮನ್ ಸಿಂಗ್ ಅವರನ್ನು ಥಳಿಸಿ ಶೂ ನೆಕ್ಕುವಂತೆ ಮಾಡಿದ್ದರು.

ಪೊಲೀಸರು ಈ ಸಂಪೂರ್ಣ ವಿಷಯದಲ್ಲಿ ಅಧಿಕೃತ ಹೇಳಿಕೆಯನ್ನು ನೀಡಿದ್ದು, ಆರೋಪಿಗಳು ಮತ್ತು ಸಂತ್ರಸ್ತ ಇಬ್ಬರೂ ಅಪರಾಧ ಸ್ವಭಾವದವರು ಎಂದು ಹೇಳಿದ್ದಾರೆ. ಮತ್ತು ಅವರ ನಡುವೆ ಪ್ರಾಬಲ್ಯಕ್ಕಾಗಿ ಹೋರಾಟ ನಡೆಯುತ್ತಿದೆ. ಈ ಪ್ರಕರಣ ಹಳೆಯದಾಗಿದ್ದು, ಸಂತ್ರಸ್ತನ ದೂರಿನ ಮೇರೆಗೆ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಒ ಡಾಲ್ಮೌ ಅರುಣ್ ನೌಹರ್ ತಿಳಿಸಿದ್ದಾರೆ ಎಂದು ಉಲ್ಲೇಖಿಸಿದೆ.

वीडियो वायरल

ರಾಯ್‌ಬರೇಲಿ ಪೊಲೀಸರು ಹಂಚಿಕೊಂಡ ಪೋಸ್ಟ್‌ನ ಮಾಹಿತಿ ಪ್ರಕಾರ, ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೆ ಮಾಡಲಾಗುತ್ತಿರುವ ವಿಡಿಯೋದಲ್ಲಿನ ಘಟನೆಯು 21.08.2024ರಂದು ನಡೆದಿದ್ದು ಆರೋಪಿ ಮತ್ತು ಸಂತ್ರಸ್ತ ಇಬ್ಬರೂ ಸಾಮಾನ್ಯ ಜಾತಿಗೆ ಸೇರಿದವರು. ಉಂಚಹಾರ್ ಪೊಲೀಸ್ ಠಾಣೆಯಿಂದ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಸಂತ್ರಸ್ತ ನೀಡಿದ ದೂರಿನ ಆಧಾರದ ಮೇಲೆ ಉಂಚಹಾರ್ ಪೊಲೀಸ್ ಠಾಣೆಯಲ್ಲಿ ಸಂಬಂಧಪಟ್ಟ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಫಿರ್ಯಾದಿ ಮತ್ತು ಪ್ರತಿವಾದಿ ಇಬ್ಬರೂ ಅಪರಾಧ ಸ್ವಭಾವದ ವ್ಯಕ್ತಿಗಳಾಗಿದ್ದಾರೆ ಎಂದು ತಿಳಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ರಾಯ್ ಬರೇಲಿಯಲ್ಲಿ ಯುವಕನೊಬ್ಬನಿಗೆ ಥಳಿಸಲಾಗಿದ್ದು, ಶೂ ನೆಕ್ಕುವಂತೆ ಮಾಡಲಾಗಿದೆ ಎಂದು ಪ್ರಸಾರವಾಗುತ್ತಿರುವ ವಿಡಿಯೋದ ಘಟನೆಯಲ್ಲಿ ಹಲ್ಲೆಗೊಳಗಾದ ಸಂತ್ರಸ್ತ ದಲಿತ ಎಂದು ಬಣ್ಣಿಸಿ ಜಾತಿ ಕೋನವನ್ನೂ ನೀಡಲಾಗುತ್ತಿದೆ. ಆದರೆ ವಾಸ್ತವವೇನೆಂದರೆ, ಆರೋಪಿ ಮತ್ತು ಸಂತ್ರಸ್ತರಿಬ್ಬರು ಒಂದೇ ಜಾತಿಗೆ ಸೇರಿದ್ದಾರೆ ಎಂದು ರಾಯ್‌ಬರೇಲಿ ಪೊಲೀಸರು ತಿಳಿಸಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ‘ಈದ್ ಹಬ್ಬದ’ ಮರವಣಿಗೆಗೆಂದು ಕೊಂಡೊಯ್ಯುತ್ತಿದ್ದ ಇಸ್ಲಾಮಿಕ್ ಧ್ವಜವನ್ನು ಪಾಕ್ ಧ್ವಜ ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights