ಫ್ಯಾಕ್ಟ್‌ಚೆಕ್: ಹಳೆಯ ಸಂಬಂಧವಿಲ್ಲದ ವಿಡಿಯೋಗಳನ್ನು ಮುಸ್ಲಿಮರ ವಿರುದ್ದ ದ್ವೇಷ ಸಾಧಿಸಲು ಹಂಚಿಕೊಳ್ಳಲಾಗುತ್ತಿದೆ

ಮುಸ್ಲಿಮರು ನಮಾಜ್ ಮಾಡುವ ವೇಳೆ ಸಂಚರಿಸುತ್ತಿದ್ದ ರೈಲೊಂದು ಮಾಡುತ್ತಿದ್ದ ಶಿಳ್ಳೆ (ಹಾರ್ನ್)ಯ ಶಬ್ದದಿಂದ ನಮಾಜ್‌ಗೆ ತೊಂದರೆಯಾಗುತ್ತಿತ್ತು ಎಂದು ಉದ್ರಿಕ್ತಗೊಂಡ ಮುಸ್ಲಿಂ ಯುವಕರ ಗುಂಪು ರೈಲ್ವೆ ಇಲಾಖೆಯ ಕಟ್ಟಡಗಳು, ರೈಲು ಮತ್ತು ರೈಲಿನ ಹಳಿಗಳನ್ನು ದ್ವಂಸಗೊಳಿಸುತ್ತಿದ್ದಾರೆ ಎಂದು ಹೇಳುವ ವಿಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಇದು ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ನಡೆದಿದೆ ಎಂದು ಪ್ರತಿಪಾದಿಸಲಾಗಿದೆ.

ಇಲ್ಲಿ ಮೂರು ವಿಡಿಯೊಗಳನ್ನು ಹಂಚಿಕೊಳ್ಳಲಾಗಿದ್ದು ಅದರ ಹಿಂದಿರುವ ಸತ್ಯಾಸತ್ಯತೆಗಳು ಏನೆಂದು ಪರಿಶೀಲಿಸೋಣ.

ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others


ಫ್ಯಾಕ್ಟ್‌ಚೆಕ್:

ವೀಡಿಯೊ 1

ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ರೈಲ್ವೆ ಇಲಾಖೆಯ ಕಟ್ಟಡವನ್ನು ದ್ವಂಸಗೊಳಿಸುವಾಗ ಗೋಡೆಯ ಮೇಲೆ ಬರೆದಿರುವ ‘ನೋಪರ ಮಹಿಷಾಸುರ್’ ರೈಲು ನಿಲ್ದಾಣದ ಹೆಸರು ಕಾಣಿಸುತ್ತದೆ. ಇದರಿಂದ ಕ್ಲೂ ತೆಗೆದುಕೊಂಡು, ಸಂಬಂಧಿತ ಕೀವರ್ಡ್‌ಗಳೊಂದಿಗೆ ಫೇಸ್‌ಬುಕ್ ನಲ್ಲಿ ಸರ್ಚ್ ಮಾಡಿದಾಗ ವೈರಲ್ ವಿಡಿಯೊದ ಮೂಲ ಆವೃತ್ತಿಯನ್ನು ಕಂಡುಹಿಡಿಯಲಾಗಿದೆ. ಈ ವೀಡಿಯೊವನ್ನು ಡಿಸೆಂಬರ್ 2019 ರಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಈ ದೃಶ್ಯಗಳು ನೋಪರಾ ಮಹಿಷಾಸುರ್ ರೈಲ್ವೆ ನಿಲ್ದಾಣದ್ದು  ಎಂದು ತಿಳಿದುಬಂದಿದೆ.

ಯುವಕರ ಗುಂಪು  ನಿಲ್ದಾಣವನ್ನು ಧ್ವಂಸಗೊಳಿಸುತ್ತಿರುವ ಘಟನೆಗೆ ಸಂಬಂಧಿಸಿದ ಕೆಲವು ಇತರ ದೃಶ್ಯಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ದಾಳಿಯನ್ನು ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನಾಕಾರರು ನೋಪರಾ ಮಹಿಷಾಸೂರ್ ರೈಲು ನಿಲ್ದಾಣವನ್ನು ಧ್ವಂಸಗೊಳಿಸಿದ ಸಂದರ್ಭದ್ದು ಎಂದು ವರದಿಗಳು ಉಲ್ಲೇಖಿಸಿವೆ. ಅಲ್ಲದೆ, ಈ ಪ್ರತಿಭಟನೆಗಳ ಸಂದರ್ಭದಲ್ಲಿ ಪ್ರತಿಭಟನಾಕಾರರು ಬಂಗಾಳದ ಹಲವು ರೈಲು ನಿಲ್ದಾಣಗಳನ್ನು ಧ್ವಂಸಗೊಳಿಸಿದ ವರದಿಗಳಿವೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ)

ವೀಡಿಯೊ 2:

ಈ ವಿಡಿಯೊದಲ್ಲಿರುವ ದೃಶ್ಯಗಳು ತಮಿಳುನಾಡಿನ ಎರಡು ಕಾಲೇಜುಗಳ ವಿದ್ಯಾರ್ಥಿಗಳ ನಡುವೆ ನಡೆದ ಜಗಳಕ್ಕೆ ಸಂಬಂಧಿಸಿವೆ. ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್ ಸರ್ಚ್ ನಡೆಸಿದಾಗ ಈ ದೃಶ್ಯಗಳನ್ನು ವರದಿ ಮಾಡುವ ಹಲವು ಸುದ್ದಿ ವರದಿಗಳನ್ನು ಲಭ್ಯವಾಗಿವೆ. (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಈ ವರದಿಗಳ ಪ್ರಕಾರ, ದೃಶ್ಯಗಳು ಚೆನ್ನೈ ಪಚಯ್ಯಪ್ಪ ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿಗಳ ನಡುವಿನ ನಡೆದ ಹೊಡೆದಾಟದ ದೃಶ್ಯಗಳು ಎಂದು ಹೇಳಲಾಗಿದೆ. ಎರಡು ಕಾಲೇಜುಗಳ ವಿದ್ಯಾರ್ಥಿಗಳು ಈ ಹಿಂದೆ ಹಲವು ಸಂದರ್ಭಗಳಲ್ಲಿ ಜಗಳವಾಡಿದ ವರದಿಗಳಿವೆ. ಈ ಘಟನೆಗಳಿಗೆ ಸಂಬಂಧಿಸಿದ ಸುದ್ದಿ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.

ವೀಡಿಯೊ 3:

ಈ  ದೃಶ್ಯಗಳು ಕನಿಷ್ಠ 2019 ರಿಂದ ಇಂಟರ್ನೆಟ್‌ನಲ್ಲಿ ಲಭ್ಯವಿದೆ. ಸ್ಥಳೀಯ ಸುದ್ದಿ ವರದಿಯು ಅದೇ ವೀಡಿಯೊವನ್ನು ‘ನವೋಪಾರಾ ಮಹಿಷಾಸುರ ನಿಲ್ದಾಣದಲ್ಲಿ ರೈಲ್ವೆ ಹಳಿಯನ್ನು ದ್ವಂಸಗೊಳಿಲಾಗಿದೆ ಎಂಬ’ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ. ಆದರೆ ರೈಲಿನ ಶಿಳ್ಳೆಯಿಂದಾಗಿ ನಮಾಜ್ ಗೆ ತೊಂದರೆಯಾಗುತ್ತಿದೆ ಎಂದು ರೈಲು ಹಳಿಯನ್ನು ದ್ವಂಸಗೊಳಿಸಿದ್ದಾರೆ ಎನ್ನುವ ಸುದ್ದಿ ಎಲ್ಲಿಯೂ ವರದಿಯಾಗಿಲ್ಲ.

ದೃಶ್ಯಗಳಿಗೆ ಸಂಬಂಧಿಸಿದ ಸ್ಥಳ ಮತ್ತು ಸಂದರ್ಭವನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ, ಆದರೂ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹಂಚಿಕೊಂಡಿರುವುದನ್ನು ಗಮನಿಸಿದರೆ ಈ ದೃಶ್ಯಗಳು ಯಾವುದೇ ಇತ್ತೀಚಿನ ಘಟನೆಯಲ್ಲ ಎಂದು ಖಾತ್ರಿಯಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ  ಮೂರು ವಿಡಿಯೋಗಳಲ್ಲಿ ಚೆನ್ನೈನ ಎರಡು ಕಾಲೇಜುಗಳ ವಿದ್ಯಾರ್ಥಿಗಳು ನಡುವೆ ಹೊಡೆದಾಟದ ಘಟನೆಗೆ ಹೊರತು ಪಡಿಸಿ ಇನ್ನೆರಡು ವಿಡಿಯೊಗಳು  ಹಳೆಯದು ಮತ್ತು ಇತ್ತೀಚಿನ  ಘಟನೆಯಲ್ಲ. ಈ ವೀಡಿಯೊಗಳನ್ನು 2019 ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಘಟನೆಗಳಾಗಿವೆ.   ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮಂಗಳೂರಿನಲ್ಲಿ ಬಜರಂಗದಳ ಮತ್ತು ಶ್ರೀರಾಮಸೇನೆ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆಯಿತೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.