ದ್ವನಿವರ್ಧಕ ನಿಷೇದಿಸಿದ್ದಕ್ಕೆ ರಸ್ತೆಯಲ್ಲೆ ಆಝಾನ್ ಕೂಗಿದ ಮುಸ್ಲಿಮರು! ವಾಸ್ತವವೇನು ?

“ಮುಂಬೈನಲ್ಲಿ ಆಝಾನ್ ಕೂಗಲು  ಧ್ವನಿವರ್ಧಕಗಳನ್ನು ಬಳಸಲು ಅನುಮತಿ ನೀಡದ ಕಾರಣ ಜನರು ರಸ್ತೆಯಲ್ಲೆ ಆಜಾನ್ ಪಠಿಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ  ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಆಝಾನ್ ಮತ್ತು ಹನುಮಾನ್ ಚಾಳೀಸ್ ಸಂಘರ್ಷದ  ಸಂದರ್ಭದಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಫೇಸ್‌ಬುಕ್‌ನಲ್ಲಿ ಬೇರೆ ಬೇರೆ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others


ಫ್ಯಾಕ್ಟ್‌ಚೆಕ್:

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ರನ್ ಮಾಡಿದಾಗ,  ಅನೇಕ ರೀತಿಯ ವೀಡಿಯೊಗಳು ಕಂಡುಬಂದಿವೆ. ಈ ವೀಡಿಯೊಗಳು ಕನಿಷ್ಠ ಏಪ್ರಿಲ್ 2020 ರಿಂದ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವುದು ಕಂಡುಬಂದಿದೆ. ಕೆಲವು ಹಳೆಯ ಪೋಸ್ಟ್‌ಗಳನ್ನು ಇಲ್ಲಿ  ಮತ್ತು ಇಲ್ಲಿ ನೋಡಬಹುದು. ಫೇಸ್‌ಬುಕ್ ಬಳಕೆದಾರರು 2020 ರಲ್ಲಿ ಅದೇ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು 2020ರಲ್ಲಿ ದೇಶದಲ್ಲಿ ಉಲ್ಭಣಿಸಿದ್ದ ಕೊರೋನಾ ವೈರಸ್‌ಅನ್ನು ನಿವಾರಿಸಲು ಈ ರೀತಿ ಆಝಾನ್ ಪಠಿಸುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ವಿಡಿಯೊ ಇತ್ತೀಚಿನದಲ್ಲ ಹಳೆಯದು ಎಂದು ಹೇಳಬಹುದು.

ವಿಡಿಯೊದಲ್ಲಿ ಕಾಣುವ ಅಂಗಡಿಯ ನಾಮಫಲಕಗಳಲ್ಲಿರುವ ವಿಳಾಸದಿಂದ ಘಟನೆ ನಡೆದಿರುವ ಸ್ಥಳ ಎಲ್ಲಿಯದು ಎಂದು ಮಾಹಿತಿ ನೀಡುತ್ತದೆ. ವೈರಲ್ ವೀಡಿಯೊ ಮುಂಬೈನಲ್ಲಿ ನಡೆದ ಘಟನೆ ಅಲ್ಲ, ಬದಲಿಗೆ ಹೌರಾದಲ್ಲಿ (ಪಶ್ಚಿಮ ಬಂಗಾಳ) ಚಿತ್ರೀಕರಿಸಲಾಗಿದೆ ಎಂದು ತೋರಿಸುತ್ತದೆ. ಹಿಂಭಾಗದಲ್ಲಿ ಬೋರ್ಡ್‌ನಲ್ಲಿ ‘ಹೌರಾ’ ಎಂದು ಬರೆಯಲಾಗಿದೆ ಮತ್ತು ಅಂಗಡಿಗಳ ಪಿನ್ ಕೋಡ್ ‘7’ ರಿಂದ ಪ್ರಾರಂಭವಾಗುವುದನ್ನು ನೋಡಬಹುದು. ಹೌರಾದಲ್ಲಿ ಎನ್. ರೈ (ಹೋಮಿಯೋಪತಿ) ಹೆಸರಿನ ವೈದ್ಯರೊಬ್ಬರು ನಡೆಸುತ್ತಿರುವ (ವೀಡಿಯೊದಲ್ಲಿ ಅವರ ಹೆಸರನ್ನು ಬೋರ್ಡ್‌ನಲ್ಲಿ ಕಾಣಬಹುದು)  ಕ್ಲಿನಿಕ್‌ ನ ನಾಮಫಲಕದಲ್ಲಿ ವಿಳಾಸವು ಸ್ಪಷ್ಟವಾಗಿ ಕಾಣಿಸುತ್ತದೆ.

ಅಲ್ಲದೆ, ಹೌರಾದಲ್ಲಿ ‘ನ್ಯೂ ಶಿಮ್ಲಾ ಬಿರಿಯಾನಿ’ ಅಂಗಡಿ (ಪೋಸ್ಟ್ ಮಾಡಿದ ವೀಡಿಯೊದಲ್ಲಿ ನೋಡಲಾಗಿದೆ)ಯ ನಾಮಫಲಕವೂ ಕಾಣುತ್ತಿದ್ದು ಈ ಘಟನೆಯು ಪಶ್ಚಿಮಬಂಗಾಳದಲ್ಲಿ ನಡೆದಿದೆ ಎಂದು ಖಾತ್ರಿಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2020ರ ಕೊರೊನಾ ಸಂದರ್ಭದಲ್ಲಿ ಮುಸ್ಲಿಮರು ವೈರಸ್ ನಿಯಂತ್ರಣಕ್ಕೆ ಬರಲೆಂದು ಪ್ರಾರ್ಥಿಸುತ್ತಿರುವ ಹಳೆಯ ವಿಡಿಯೊವನ್ನು  ಮುಂಬೈನಲ್ಲಿ ದ್ವನಿವರ್ಧಕವನ್ನು ನಿ‍ಷೇದಿಸಿದಕ್ಕೆ ರಸ್ತೆಯಲ್ಲಿ ಜನರು ಆಜಾನ್ ಪಠಿಸುತ್ತಿರುವ ಇತ್ತೀಚಿನ ವಿಡಿಯೊ ಎಂದು  ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮಳಲಿಪೇಟೆ ಜುಮ್ಮಾ ಮಸೀದಿಯಲ್ಲಿ ದೇವಸ್ಥಾನವಿದೆ ಎಂದು ಸುಳ್ಳು ಹೇಳಿದ ಬಲಪಂಥಿಯರು!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ದ್ವನಿವರ್ಧಕ ನಿಷೇದಿಸಿದ್ದಕ್ಕೆ ರಸ್ತೆಯಲ್ಲೆ ಆಝಾನ್ ಕೂಗಿದ ಮುಸ್ಲಿಮರು! ವಾಸ್ತವವೇನು ?

  • April 29, 2022 at 9:02 am
    Permalink

    ಕನ್ನಡ ಮತ್ತು ನಿಮ್ಮ ಸಂಚಿಕೆ ಉಳಿಯಬೇಕೆಂದರೆ, ಉರ್ದು ಮಾತಾಡುವ ಮುಸ್ಲೀಮರಿಂದ ಸಾಧ್ಯವಿಲ್ಲ. ಆದ್ದರಿಂದ ಅನಗತ್ಯವಾಗಿ ಅವರಿಗೆ ಬೆಂಬಲ ಕೊಡಬೇಡಿ.

    Reply

Leave a Reply

Your email address will not be published.

Verified by MonsterInsights