ಫ್ಯಾಕ್ಟ್ಚೆಕ್: ಮಳಲಿಪೇಟೆ ಜುಮ್ಮಾ ಮಸೀದಿಯಲ್ಲಿ ದೇವಸ್ಥಾನವಿದೆ ಎಂದು ಸುಳ್ಳು ಹೇಳಿದ ಬಲಪಂಥಿಯರು!
ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರದ, ಗಂಜಿಮಠ ಹತ್ತಿರವಿರುವ ಮಳಲಿ ಪೇಟೆ ಎಂಬಲ್ಲಿ ದರ್ಗಾವನ್ನು ನವೀಕರಿಸುವ ವೇಳೆ ದೇವಸ್ಥಾನ ಪತ್ತೆಯಾಗಿದೆ ಎಂದು ಹೇಳುವ ಪೋಸ್ಟ್ವೊಂದನ್ನು ಬಲಪಂಥೀಯ ಪ್ರತಿಪಾದನೆಯ ಪೋಸ್ಟ್ಕಾರ್ಡ್ ಕನ್ನಡ ಫೇಸ್ಬುಕ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ. ಮುಂದುವರೆದು ದರ್ಗಾವನ್ನು ದೇವಸ್ಥಾನದ ಮೇಲೆ ಕಟ್ಟಲಾಗಿದ್ದು, ಈಗ ಭೂಮಿಯನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು ಎನ್ನಿಸುವುದಿಲ್ಲವೆ ? ಎಂದು ಪ್ರತಿಪಾದಿಸಿದೆ.

ಹಾಗೆಯೇ ಕೆಲವು ಕನ್ನಡದ ಮುಖ್ಯ ವಾಹಿನಿಗಳಾದ ಟಿವಿ9 ಕನ್ನಡ, ಉದಯವಾಣಿ, ನ್ಯೂಸ್18 ಕನ್ನಡ, ಏಷ್ಯಾನೆಟ್ ಸುವರ್ಣನ್ಯೂಸ್, ಪಬ್ಲಿಕ್ ಟಿವಿ, ಹೊಸ ದಿಗಂತ, ಒನ್ ಇಂಡಿಯಾ ಕನ್ನಡ ಮತ್ತು ಬಿಟಿವಿ ನ್ಯೂಸ್ ಕೂಡ ಮಸೀದಿ ಜಾಗದಲ್ಲಿ ದೇವಸ್ಥಾನವೇ ಪತ್ತೆಯಾಗಿದೆ ಎಂಬಂತೆ ಸುದ್ದಿಯನ್ನು ನಿರೂಪಣೆ ಮಾಡಿವೆ. ಇದೇ ರೀತಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಗಳನ್ನು ಹಂಚಿಕೊಳ್ಳಲಾಗಿದೆ ಅದನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ಮಸೀದಿ ಜಾಗದಲ್ಲಿ ದೇವಸ್ಥಾನ ಪತ್ತೆಯಾಗಿರುವುದು ನಿಜವೆ? ಎಂದು ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ತಾಲೂಕಿನ ಗುರುಪುರ ಹೋಬಳಿಯ, ಗಂಜಿಮಠ ಪಂಚಾಯತ್ ವ್ಯಾಪ್ತಿಯಲ್ಲಿರುವ ತೆಂಕ ಉಳಿಪಾಡಿ ಗ್ರಾಮದ ಮಳಲಿ ಪೇಟೆಯಲ್ಲಿರುವ ನೂರಾರು ವರ್ಷದ ಹಳೆಯ ಮಸೀದಿ ಕಟ್ಟಡವನ್ನು ನವೀಕರಿಸುವಾಗ ಪ್ರಾಚೀನ ದೇವಸ್ಥಾದ ಕುರುಹು ಪತ್ತೆಯಾಗಿದೆ ಎಂಬ ಸುದ್ದಿ ಹರಡಿ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಸುದ್ದಿ ತಿಳಿದ ಸಂಘಪರಿವಾರದ ಕಾರ್ಯಕರ್ತರು ಮಸೀದಿಯೊಳಗೆ ದೇವಸ್ಥಾನ ಇದೆ ಎಂದು ತಗಾದೆ ತೆಗೆದಿದ್ದಾರೆ.
ಬಜರಂಗದಳ ಹಬ್ಬಿಸಿದ ಸುದ್ದಿಯನ್ನು ನಂಬಿದ ಕನ್ನಡ ಮಾಧ್ಯಮಗಳು ವಸ್ತು ಸ್ಥಿತಿಯನ್ನು ಪರಿಶೀಲಿಸದೆ ಸುಳ್ಳನ್ನೇ ವಾಸ್ತವ ಎಂಬಂತೆ ಸುದ್ದಿ ಪ್ರಸಾರ ಮಾಡಿವೆ. ಜೊತೆಗೆ ತಲತಲಾಂತರಗಳಿಂದಲೂ ನಮಾಜ್ ಸೇರಿದಂತೆ ಇಸ್ಲಾಮಿ ಆಚರಣೆ ಮಾಡುತ್ತಾ ಬರುತ್ತಿದ್ದ ಮಸೀದಿಯನ್ನು, “ಜೈನ ಬಸದಿ ಅಥವಾ ದೇವಸ್ಥಾನ” ಎಂದು ಪ್ರತಿಪಾದಿಸಿ ಜನರಲ್ಲಿ ಗೊಂದಲ ಮೂಡುವಂತೆ ಮಾಡಿದೆ.
ಮಸೀದಿ ಒಳಗೆ ದೇವಸ್ಥಾನ ಇರುವುದು ನಿಜವೆ?
ಗ್ರಾಮಸ್ಥರ ಪ್ರಕಾರ ಮಳಲಿಪೇಟೆ ಮಸೀದಿಯು ಸುಮಾರು 900 ವರ್ಷಗಳಷ್ಟು ಹಳೆಯದಾಗಿದ್ದು. ಊರು ಬೆಳೆದಂತೆ ಈ ಮಸೀದಿಯಲ್ಲಿ ಜನರಿಗೆ ಜಾಗ ಸಾಕಾಗದ ಕಾರಣಕ್ಕೆ ಅದರ ಹೊರ ಭಾಗದಲ್ಲಿ ಕೂಡಾ ಮಸೀದಿಯನ್ನು ವಿಸ್ತರಿಸಲಾಗಿತ್ತು. ಇದೀಗ ಪ್ರಾಚೀನ ಮಸೀದಿಯ ರಚನೆಯನ್ನು ಹಾಗೆ ಬಿಟ್ಟು, ನಂತರ ವಿಸ್ತರಿಸಿರುವ ಕಟ್ಟಡವನ್ನು ಕೆಡವಿ ನವೀಕರಣ ಮಾಡಲಾಗುತ್ತಿದೆ. ಮಸೀದಿಯನ್ನು ಕೇರಳ ಮಾದರಿಯ ಇಂಡೋ-ಇಸ್ಲಾಮಿಕ್ ವಾಸ್ತು ಶೈಲಿಯಲ್ಲಿ ಕಟ್ಟಲಾಗಿದ್ದು, ಒಳಾಂಗಣವು ಆಕರ್ಷಕವಾಗಿ ಕಾಣುತ್ತದೆ. ಇದನ್ನ ದೇವಸ್ಥಾನ ಎಂದು ತಪ್ಪು ತಿಳಿದು ಕೆಲವರು ಸುಳ್ಳು ಸುದ್ದಿ ಹಬ್ಬಿಸಿ ಗೊಂದಲ ಸೃಷ್ಟಿಸುವುದರ ಜೊತೆಗೆ ಕೋಮು ಪ್ರಚೋದನೆಗೆ ಅವಕಾಶ ನೀಡುತ್ತಿವೆ ಎನ್ನುತ್ತಾರೆ. ಆದರೆ ಇದು ದೇವಸ್ಥಾನವಾಗಿತ್ತು ಎಂದು ಹೇಳಲು ಯಾವುದೇ ಆಧಾರವಿಲ್ಲ.
Mangalore: Today at Manal(20kms from Mangalore) an 850years old historic Jumma Masjid was demolished for renovation. The Masjid committee had decided to build a bigger masjid. A part of the masjid was left untouched since it was an old heritage.
1/n pic.twitter.com/f39XLwPHo1— Mohammed Irshad (@Shaad_Bajpe) April 21, 2022
A women allegedly entered the premises and shared the photos of the remaining part of masjid on social media to which the Sanghparivar started building narration that it was some Hindu mandir and this need to be checked.
2/n pic.twitter.com/zcfcrRG6Xt— Mohammed Irshad (@Shaad_Bajpe) April 21, 2022
As part of their narration some pro hindutva portal have reported the same and today the VHP/Bajrangdal district leader has forcefully entered the masjid premises and started claiming it as mandir and have demanded to stay the construction work.
3/n pic.twitter.com/ggvT39GcoT— Mohammed Irshad (@Shaad_Bajpe) April 21, 2022
ಕನ್ನಡ ಮಾಧ್ಯಮಗಳು ಸುದ್ದಿ ಹರಡಿರುವಂತೆ ಅದು ಹೊಸದಾಗಿ ಪತ್ತೆಯಾದ ಕಟ್ಟಡ ಅಲ್ಲ. ಜೊತೆಗೆ ಅದು ದರ್ಗಾವನ್ನು ಕಡೆವಿದಾಗ ಧುತ್ತನೆ ಪ್ರತ್ಯಕ್ಷವಾದ ಕಟ್ಟಡವೂ ಅಲ್ಲ. “ನಾವು ಅಲ್ಲಿಯೇ ತಲತಲಾಂತರದಿಂದ ನಮಾಜ್ ಮಾಡುತ್ತಲೇ ಬಂದಿದ್ದೇವೆ” ಎಂದು ಸ್ಥಳೀಯ ನಾಗರಿಕರಾದ ಝಾಕಿರ್ ಏನ್ ಸುದ್ದಿಯೊಂದಿಗೆ ಮಾತನಾಡಿದ್ದರು.
ಮಸೀದಿಯಲ್ಲಿರುವ ಒಳಾಂಗಣದ ಫೋಟೋಗಳು

ಮಂಗಳೂರಿನ ಹಡಗು ಬಂದರಿನಲ್ಲಿರುವ ಪ್ರಾಚೀನ ಝೀನತ್ ಭಕ್ಷ್ ನೋಡಲು ದೇವಸ್ಥಾನದಂತಯೇ ಕಾಣುತ್ತದೆ ಮಸೀದಿಯ ಒಳಾಂಗಣದಲ್ಲಿ ಇರುವ ಕಂಬಗಳ ಶೈಲಿ ವಿಶಿಷ್ಟವಾಗಿದೆ. ಇದೇ ಕಾರಣಕ್ಕೆ ಮಸೀದಿಯನ್ನು ಹಿಂದೂ ದೇವಾಲಯ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಉಯಿಲೆಬ್ಬೆಸಿ ಕೋಮು ಸಾಮರಸ್ಯವನ್ನು ಕದಡುವ ಪ್ರಯತ್ನವನ್ನು ಮಾಡಿದ್ದರು ಆದರೆ ಅದು ದೇವಾಲಯ ಅಲ್ಲ 7ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಪ್ರಾಚೀನ ಮಸೀದಿ ಎಂದು ensuddi.com ಫ್ಯಾಕ್ಟ್ಚೆಕ್ ಲೇಖನವನ್ನು ಪ್ರಕಟಿಸುವ ಮೂಲಕ ದೇವಸ್ಥಾನ ಇದೆ ಎಂದು ಹೇಳುತ್ತಿರುವುದು ಸುದ್ದಿ ಸುಳ್ಳು ಎಂದು ವರದಿ ಮಾಡಿತ್ತು.
ಮಂಗಳೂರಿನ ಕಮಿಷನರ್ N.ಶಶಿಕುಮಾರ್ ಅವರು ಘಟನೆ ಕುರಿತು ಮಾಹಿತಿ ನೀಡಿದ್ದಾರೆ
View this post on Instagram
ಮಳಲಿ ಮಸೀದಿಯ ವಾಸ್ತುಶೈಲಿಯನ್ನು ಅಭ್ಯಾಸ ಮಾಡಿದ ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್, ಸಂಶೋಧಕ ಡಾ. ಪುರುಷೋತ್ತಮ ಬಿಳಿಮಲೆ, “ವಿಡಿಯೊದಲ್ಲಿ ಇರುವ ಮಸೀದಿಯು ದ್ರಾವಿಡ ಶೈಲಿಯ ಒಂದು ಪ್ರಬೇಧವಾದ ಕೇರಳ ವಾಸ್ತುವನ್ನು ಬಳಸಿಕೊಂಡಿದೆ. ಇದು ಹೆಚ್ಚು ಮಳೆಬೀಳುವ ಪ್ರದೇಶವಾದ್ದರಿಂದ, ಇಳಿಜಾರಾದ ಮಾಡು ಬಹಳ ಅಗತ್ಯ. ಮಾಡನ್ನು ಮುಳಿ ಹುಲ್ಲು ಅಥವಾ ಹಂಚು ಬಳಸಿ ಕಟ್ಟಲಾಗಿದೆ. ಒಳಗಿನ ಕಂಬವು ವಿಜಯನಗರ ಕಾಲದ್ದು. ಹೀಗಾಗಿ ಇದು ಸುಮಾರು 15-16ನೇ ಶತಮಾನದ್ದೆಂದು ಹೇಳಬಹುದು. ಹಿಂದೂ ಮುಸ್ಲಿಂ ಮೈತ್ರಿಯನ್ನು ಸಾರುವ ಇಂಥ ಕಟ್ಟಡಗಳು ಕೇರಳ ಮತ್ತು ಕರ್ನಾಟಕ ಕರಾವಳಿಯಲ್ಲಿ ಹೇರಳವಾಗಿ ಕಂಡು ಬರುತ್ತವೆ” ಎಂದು ಹೇಳಿದರು.
ಒಟ್ಟಾರೆಯಾಗಿ ಹೇಳುವುದಾದರೆ ಸುಮಾರು 900 ವರ್ಷಗಳಷ್ಟು ಪ್ರಾಚೀನ ಇತಿಹಾಸವಿರುವ ಮಸೀದಿಯ ಒಳಾಂಗಣದಲ್ಲಿ ಇಂಡೋ- ಇಸ್ಲಾಮಿಕ್ ಶೈಲಿಯಲ್ಲಿಯ ವಾಸ್ತುಶಿಲ್ಪ ಇರುವುದರಿಂದ ದೇವಾಲಯ ಎಂಬಂತೆ ಕಾಣುವ ಒಂದೇ ಕಾರಣಕ್ಕೆ ಮಸೀದಿಯೊಳಗೆ ದೇವಸ್ಥಾನ ಇದೆ ಎಂದು ಸುಳ್ಳುಸುದ್ದಿ ಹಬ್ಬಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಮಂಗಳೂರಿನ ಝೀನತ್ ಬಕ್ಷ್ ಮಸೀದಿಯನ್ನು ಹಿಂದೂ ದೇವಾಲಯದ ಮೇಲೆ ನಿರ್ಮಿಸಲಾಗಿಲ್ಲ

