ಫ್ಯಾಕ್ಟ್‌ಚೆಕ್: ಮೆಕ್ಕಾದಲ್ಲಿ 1480ರಲ್ಲಿ ಶಿವಲಿಂಗ ಇತ್ತು ಎಂಬುದು ನಿಜವಲ್ಲ

1480 ರಲ್ಲಿ ಇದ್ದ ಶಿವಲಿಂಗವನ್ನು, ಮೆಕ್ಕಾ ಆಗಿ ಪರಿವರ್ತಿಸಲಾಗಿದೆ ಎಂದು ಹೇಳುವ ಪೋಸ್ಟ್‌ವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಹಾಗದ್ದರೆ ಹಿಂದೂ ಧರ್ಮದ ಶಿವಲಿಂಗ ಇದ್ದ ಜಾಗದಲ್ಲಿ ಮುಸ್ಲಿಮರ ಪವಿತ್ರ ಧಾರ್ಮಿಕ ಕೇಂದ್ರವಾದ ಮೆಕ್ಕಾ ಉದ್ಭವವಾಗಲೂ ಹೇಗೆ ಸಾಧ್ಯ. ಹಾಗಿದ್ದರೆ 1480 ರಲ್ಲಿ ಶಿವಲಿಂಗದ ಜಾಗ ನಿಜವಾಗಿಯೂ ಪರಿವರ್ತನೆ ಆಗಿದೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಪಾದಿಸಿ  ಮಾಡಲಾದ ಪೋಸ್ಟ್‌ನ ಪೋಟೋದಲ್ಲಿ 1480 ರಲ್ಲಿ ಇದ್ದ ಶಿವನಲಿಂಗ ಮತ್ತು 2008ರಲ್ಲಿ ಈಗಿರುವ ಮೆಕ್ಕಾದ ದೃಶ್ಯಗಳು ಎಂದು ಹೇಳಲಾಗಿದೆ. ಕಾಬಾ ಎಂದು ಕರೆಯಲ್ಪಡುವ ಇಸ್ಲಾಂನ ಪ್ರಮುಖ ದೇವಾಲಯ ಪ್ರತಿ ವರ್ಷ ಲಕ್ಷಾಂತರ ಜನ ಯಾತ್ರಿಕರನ್ನು ಮೆಕ್ಕಾಗೆ ಆಕರ್ಷಿಸುತ್ತದೆ. ಕುರಾನಿನ ಪ್ರಕಾರ, ಈ ನಗರವು ಪ್ರಪಂಚದಾದ್ಯಂತ ಮುಸ್ಲಿಮರ ಪವಿತ್ರ ಕೇಂದ್ರವಾಗಿದೆ.

ಪೇಸ್‌ಬುಕ್‌ನಲ್ಲಿ ತೋರಿಸಲಾಗಿರುವ 1480ರಲ್ಲಿ ಇತ್ತು ಎನ್ನಲಾದ ಶಿವಲಿಂಗ ಫೋಟೋವನ್ನು ಸೆರೆಹಿಡಿದಿರುವುದು 1953ರಲ್ಲಿ, ಆದರೆ ಫೇಸ್‌ಬುಕ್‌ನಲ್ಲಿ 1480 ಎಂದು ಹೇಳಲಾಗಿದೆ. ಇಲ್ಲಿ ಗುರುತಿಸಲಾಗಿರುವ ಚಿತ್ರದಲ್ಲಿ ಕಾಣುತ್ತಿರುವುದು ಶಿವಲಿಂಗವಲ್ಲ ಬದಲಾಗಿ ಇಸ್ಲಾಮಿನಲ್ಲಿ ಪ್ರಾಚೀನ ಕಾಲದಿಂದಲೂ ಸೈತಾನನಿಗೆ ಕಲ್ಲಿನಲ್ಲಿ ಹೊಡೆಯುವ ಪದ್ದತಿಯು ರೂಡಿಯಲ್ಲಿದೆ, ಅದರ ಹಿನ್ನಲೆಯಲ್ಲಿ ಕಲ್ಲಿನ ಆಕೃತಿಯನ್ನು ನಿಲ್ಲಿಸಿ ಮೆಕ್ಕಾ ಪ್ರವಾಸಕ್ಕೆ ಆಗಮಿಸುವ ಪ್ರತಿಯೊಬ್ಬರು ಹಜ್ ಯಾತ್ರಿಗಳು ಸೈತಾನನಿಗೆ ಕಲ್ಲಿನಲ್ಲಿ ಹೊಡೆಯುವ ಮೂಲಕ ಕೆಟ್ಟ ಮತ್ತು ಕಲ್ಮಶಗಳನ್ನು ದೂರ ಮಾಡಿಕೊಂಡು ತಮ್ಮ ಪಾಪ ಕರ್ಮಗಳನ್ನು ಕಡಿಮೆ ಮಾಡಿಕೊಳ್ಳುತ್ತೇವೆ ಎನ್ನುವ ನಂಬಿಕೆ ಇಟ್ಟುಕೊಂಡಿದ್ದಾರೆ.

ಕಾಬಾ ಒಳಗೆ ಏನಿದೆ?

ಕಾಬಾ ಕಟ್ಟಡ ಮಾತ್ರವಾಗಿರದೇ, ಮುಸ್ಲಿಮರ ಪಾಲಿಗೆ ಪವಿತ್ರ ಸ್ಥಳವಾಗಿದೆ. ಇದನ್ನು ಅಲ್ಲಾಹ್ ರವರ ಮನೆ ಎಂದು ಪರಿಗಣಿಸಲಾಗುತ್ತದೆ. ಪ್ರಪಂಚದಾದ್ಯಂತವಿರುವ ಮುಸ್ಲಿಮರು ಈ ಸ್ಥಳವನ್ನು ಗೌರವಿಸುತ್ತಾರೆ. ಹಜ್ ಯಾತ್ರೆಯು ಪ್ರತಿಯೊಬ್ಬ ಮುಸಲ್ಮಾನರ ಜೀವಮಾನದ ಅತ್ಯಮೂಲ್ಯ ಸಂದರ್ಭ ಎಂದು ನಂಬಿದ್ದಾರೆ.

ಕಾಬಾವನ್ನು ಆದಮ್(ಅಸ) ಸಮಯದಲ್ಲಿ ನಿರ್ಮಿಸಲಾಯಿತು ಮತ್ತು ಅದರ ನಂತರ ಇಬ್ರಾಹಿಮ್ (ಅಬ್ರಹಾಂ) ಯುಗದಲ್ಲಿ ಪುನಃ ನಿರ್ಮಿಸಲಾಯಿತು. ಸ್ವತಃ ಇಬ್ರಾಹಿಮ್ (ಅಸ) ಮತ್ತು ಅವರ ಮಗ ಇಸ್ಮಾಯಿಲರಿಂದ(ಅಸ) ನಂತರ ಪೈಗಂರ್ ಮುಹಮ್ಮದ್(ಸ)ರ ಸಮಯದಲ್ಲಿ ಪೈಗಂರ್’ರು 35ವರ್ಷ ವಯಸ್ಸಿನವರಾಗಿದ್ದಾಗ ಅದನ್ನು ಪುನರ್ನಿರ್ಮಿಸಲಾಯಿತು ಎನ್ನಲಾಗಿದೆ.

ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವ ಧಾರ್ಮಿಕ ಅಸಹಿಷ್ಣುತೆ ಮತ್ತು ಕೋಮು ದ್ವೇಷದ ಹಿನ್ನಲೆಯಲ್ಲಿ ಹಿಂದೂ ಮುಸ್ಲಿಂ ನಡುವೆ ವೈಷಮ್ಯ ಮೂಡುವಂತ ಪೋಸ್ಟ್‌ ಮತ್ತು ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಕೋಮು ಸಾಮರಸ್ಯವನ್ನು ಕದಡಲಾಗುತ್ತಿದೆ. ಹಾಗಾಗಿ ಈ ಪೋಸ್ಟ್‌ ಕೂಡ ಅದೇ ರೀತಿಯ ಕೋಮು ಸಾಮರಸ್ಯವನ್ನು ಹಾಳುಮಾಡುವಂತದ್ದೆ ಆಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ 1480ರಲ್ಲಿ ತೆಗೆದಿದೆ ಎನ್ನಲಾದ ಪೋಟೋವನ್ನು ಶಿವಲಿಂಗ ಎಂದು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ವೈರಲ್ ಆಗಿರುವ ಚಿತ್ರವು 1953ರಲ್ಲಿ ಸೆರೆಹಿಡಿಯಲಾಗಿದೆ. ಅಲ್ಲಿರುವುದು ಶಿವಲಿಂಗ ಎಂಬುದು ಸುಳ್ಳು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಪುನೀತ್ ಕೆರೆಹಳ್ಳಿ ವೇಶ್ಯಾವಾಟಿಕೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು ನಿಜವೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಫ್ಯಾಕ್ಟ್‌ಚೆಕ್: ಮೆಕ್ಕಾದಲ್ಲಿ 1480ರಲ್ಲಿ ಶಿವಲಿಂಗ ಇತ್ತು ಎಂಬುದು ನಿಜವಲ್ಲ

  • April 23, 2022 at 7:55 pm
    Permalink

    ಕ್ರಿ.ಶ.1480 ರಲ್ಲಿ ಕ್ಯಾಮರಾ ಇರಲೇ ಇಲ್ಲ. ಹಾಗಿರುವಾಗ 1480 ರಲ್ಲಿ ಮಕ್ಕಾದ so called ಶಿವಲಿಂಗದ ಫೋಟೋ ಸೆರೆ ಹಿಡಿಯಲು ಹೇಗೆ ಸಾಧ್ಯ ?
    ಒಂದು ವೇಳೆ 1480 ರಲ್ಲಿ ಕ್ಯಾಮರಾ ಇದ್ದಿದ್ದರೆ ಮೋದಿ ಖಂಡಿತಾ ಅಲ್ಲಿ ಇರುತ್ತಿದ್ದರು ಹಾಗೂ ತಪ್ಪದೇ ಕ್ಯಾಮರಾಗೆ ಪೋಜ್ ಕೊಡುತ್ತಿದ್ದರು !☺️

    Reply

Leave a Reply

Your email address will not be published.

Verified by MonsterInsights