ನಟ ಸೋನು ಸೂದ್ ಅವರ ಸಹೋದರಿ ಮಾಳವಿಕಾ ರಾಜಕೀಯಕ್ಕೆ ಎಂಟ್ರಿ!
ಕೊರೊನಾ ಕಾಲದಲ್ಲಿ ಜನರಿಗೆ ಸಹಾಯಾಸ್ತ ಚಾಚಿದ್ದ ನಟ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಅವರು ಭಾನುವಾರ ರಾಜಕೀಯಕ್ಕೆ ಸೇರುತ್ತಿದ್ದಾರೆ. ಆದರೆ, ತನಗೆ ರಾಜಕೀಯ ಸೇರುವ ಯಾವುದೇ ಆಲೋಚನೆ ಇಲ್ಲ ಎಂದು ನಟ ಸೋನು ಸೂದ್ ಹೇಳಿದ್ದಾರೆ.
ರಾಜಕೀಯಕ್ಕೆ ಪ್ರವೇಶಿಸುವುದಾಗಿ ಘೋಷಿಸಿರುವ ಸೂದ್ ಅವರ ಸಹೋದರಿ ಮಾಳವಿಕಾ ಅವರು 2022ರ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಮೋಗಾದಿಂದ ಸ್ಪರ್ಧಿಸಬಹುದು ಎಂಬ ಊಹಾಪೋಹಗಳನ್ನು ಹುಟ್ಟುಹಾಕಿದೆ.
ಮೋಗಾ ಜಿಲ್ಲೆಯವರಾದ ಸೂದ್, ಅವರ ಸಹೋದರಿ ಈ ಹಿಂದೆ ಸಾಕಷ್ಟು ಅದ್ಭುತ ಕೆಲಸ ಮಾಡಿದ್ದಾರೆ.
“ಮಾಳವಿಕಾ ಅವರು ಖಂಡಿತವಾಗಿಯೂ ಪಂಜಾಬ್ ಜನರಿಗೆ ಸೇವೆ ಸಲ್ಲಿಸಲು ಬರುತ್ತಾರೆ ಎಂದು ನಾವು ಅಧಿಕೃತವಾಗಿ ಹೇಳಲು ಬಯಸುತ್ತೇವೆ” ಎಂದು ಸೂದ್ ಹೇಳಿದ್ದಾರೆ.
ಆದರೆ, ರಾಜಕೀಯ ಪಕ್ಷಕ್ಕೆ ಸೇರುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸಮಯ ಬಂದಾಗ ತಿಳಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ನೀವು ರಾಜಕೀಯಕ್ಕೆ ಬರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸೂದ್, ರಾಜಕೀಯಕ್ಕೆ ಸೇರುವ ಬಗ್ಗೆ ನಾನು ಯೋಚಿಸಿಲ್ಲ ಎಂದು ಹೇಳಿದ್ದಾರೆ.
COVID-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಳೆದ ವರ್ಷ ರಾಷ್ಟ್ರವ್ಯಾಪಿ ಲಾಕ್‌ಡೌನ್ ಮಾಡಿದ್ದ ಸಮಯದಲ್ಲಿ ವಲಸೆ ಕಾರ್ಮಿಕರು ತಮ್ಮ ತವರು ರಾಜ್ಯಗಳನ್ನು ತಲುಪಲು ನಟ ಸೋನು ಸೂದ್ ಸಾಕಷ್ಟು ಕೆಲಸ ಮಾಡಿದ್ದರು. ಈ ಸಹಾಯದಿಂದ ಅವರು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದರು.
ಇದನ್ನು ಓದಿ: ಮಹಿಳೆಗೆ ಲೈಂಗಿಕ ಕಿರುಕುಳ: ಗುಜರಾತ್ ಜಿಲ್ಲಾಧಿಕಾರಿ ಅಮಾನತು – ಬಂಧನ!

