ಮಹಿಳೆಗೆ ಲೈಂಗಿಕ ಕಿರುಕುಳ: ಗುಜರಾತ್‌ ಜಿಲ್ಲಾಧಿಕಾರಿ ಅಮಾನತು – ಬಂಧನ!

ಮಹಿಳೆಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ, ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಗುಜರಾತ್‌ನ ಅರವಲ್ಲಿ ಜಿಲ್ಲೆಯ ಮೊಡಾಸಾದ ಡೆಪ್ಯುಟಿ ಕಲೆಕ್ಟರ್ (ಜಿಲ್ಲಾಧಿಕಾರಿ) ಮಯಾಂಕ್ ಪಟೇಲ್ ಎಂಬುವವರನ್ನು ಅಮಾನತು ಗೊಳಿಸಲಾಗಿದೆ. ಅಲ್ಲದೆ, ಅವರನ್ನು ಅಹಮದಾಬಾದ್ ಸಿಟಿ ಸೈಬರ್ ಕ್ರೈಮ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ದೂರುದಾರ ಮಹಿಳೆ ಪ್ರಸ್ತುತ ಪಂಚಾಯತ್‌ ಇಲಾಖೆಯ ನೌಕರರಾಗಿದ್ದು, ಅವರು ತಾಲ್ಲೂಕು ಪಂಚಾಯತಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರನ್ನು, ಈಗ ರಾಜ್ಯ ಸಚಿವಾಲಯದ ಮತ್ತೊಂದು ಇಲಾಖೆಗೆ ವರ್ಗಾಯಿಸಲಾಗಿದೆ.

ಮಹಿಳೆ ಸೋಮವಾರ ಸಲ್ಲಿಸಿದ ದೂರಿನ ಪ್ರಕಾರ, ಖೇಡಾ ಜಿಲ್ಲೆಯ ಕಪದ್ವಾಂಜ್ ತಾಲೂಕಿನ ಶಿಹೋರಾ ಗ್ರಾಮದ ನಿವಾಸಿ ಪಟೇಲ್ ಅವರು 2016ರಲ್ಲಿ ರಾಜ್ಯ ಸರ್ಕಾರದ ಕಾರ್ಯಕ್ರಮವೊಂದರಲ್ಲಿ ಮೊದಲ ಬಾರಿಗೆ ತನ್ನನ್ನು ಭೇಟಿಯಾಗಿದ್ದರು. ನಂತರ, ಕೆಲಸದ ಉದ್ದೇಶದಿಂದಾಗಿ ಆಗಾಗ್ಗೆ ಭೇಟಿಯಾಗಬೇಕಾಗಿತ್ತು. ಆ ಸಮಯದಲ್ಲಿ ಅವರು ತಮ್ಮ ಮೊಬೈಲ್ ಫೋನ್ ಸಂಖ್ಯೆಯನ್ನು ತೆಗೆದುಕೊಂಡರು. ಇಬ್ಬರ ನಡುವೆ ಉತ್ತಮ ಸ್ನೇಹ ಬೆಳೆದಿತ್ತು. ಆದರೆ, ದಿನ ಕಳೆದಂತೆ ಪಟೇಲ್ ಅವರು ಲೈಂಗಿಕವಾಗಿ ತನ್ನನ್ನು ಒತ್ತಾಯಿಸಲು ಆರಂಭಿಸಿದರು. ನಂತರ, ತಾವು ಪಟೇಲ್‌ ಜೊತೆಗೆ ಮಾತನಾಡುವುದನ್ನು ನಿಲ್ಲಿಸಿದರು ಎಂದು ಮಹಿಳೆ ಹೇಳಿದ್ದಾರೆ.

ನಂತರ, ಆತ ತಮಗೆ ಕಿರುಕುಳ ನೀಡಲು ಪ್ರಾರಂಭಿಸಿದರು. ಅವರು ಒಂಬತ್ತು ಸಿಮ್ ಕಾರ್ಡ್‌ಗಳನ್ನು ಹೊಂದಿದ್ದರು, ಅದರಲ್ಲಿ ಒಂದು ಸರ್ಕಾರ ನಿಗದಿಪಡಿಸಿದ ಸಂಖ್ಯೆಯಾಗಿತ್ತು. ಈ ಎಲ್ಲಾ ಸಂಖ್ಯೆಗಳಿಂದಲೂ ಅವರು ತಮಗೆ ಕಿರುಕುಳ ನೀಡುತ್ತಿದ್ದರು. ಮಾತ್ರವಲ್ಲದೆ, ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿಯೂ ಚಿತ್ರಹಿಂಸೆ ನೀಡುತ್ತಿದ್ದರು ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ: ಚುನಾವಣಾ ಸಮೀಕ್ಷೆ: ಉತ್ತರ ಪ್ರದೇಶದಲ್ಲಿ 108 ಸ್ಥಾನಗಳನ್ನು ಕಳೆದುಕೊಳ್ಳಲಿದೆ ಬಿಜೆಪಿ; ಎಸ್‌ಪಿಗೆ ಲಾಭ!

ಅಹಮದಾಬಾದ್ ಸೈಬರ್ ಕ್ರೈಂ ಸೆಲ್‌ನ ಉಪ ಪೊಲೀಸ್ ಆಯುಕ್ತ ಅಮಿತ್ ವಾಸವ ಮಾತನಾಡಿ, “ಆರೋಪಿಯು ಮಹಿಳೆಗೆ ವಾಟ್ಸಾಪ್‌ನಲ್ಲಿ ಕರೆ ಮತ್ತು ಸಂದೇಶವನ್ನು ಮಾಡುತ್ತಿದ್ದನು… ಆರೋಪಿಯು ಆಕೆಯ ಫೋನ್‌ನ ಲೋಕೇಷನ್‌ಅನ್ನು ಟ್ರ್ಯಾಕ್ ಮಾಡುತ್ತಿದ್ದನು ಮತ್ತು ಆಕೆಯನ್ನು ಹಿಂಬಾಲಿಸುತ್ತಿದ್ದನು… ಆಕೆ ಆತನ ಕರೆಗಳನ್ನು ನಿರಾಕರಿಸಿದರೆ, ಆತ ಮಹಿಳೆಯ ಪತಿಗೆ ಕರೆ ಮಾಡಿ ನಿಂದಿಸುತ್ತಿದ್ದನು” ಎಂದು ಹೇಳಿದ್ದಾರೆ.

“ಆರೋಪಿಯು ಮಹಿಳೆಯ ಅಸಭ್ಯ ಚಿತ್ರಗಳನ್ನು ಆಕೆಯ ಮಗ ಮತ್ತು ಮಾವನಿಗೆ ಕಳುಹಿಸಲು ಪ್ರಯತ್ನಿಸಿದ್ದರು. ಮಹಿಳೆ ಆರೋಪಿಯ ಪೋಷಕರು ಮತ್ತು ಪತ್ನಿಯೊಂದಿಗೆ ಮಾತನಾಡಲು ಪ್ರಯತ್ನಿಸಿದಾಗ, ಆತ ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಅಧಿಕಾರಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ, ಮಂಗಳವಾರ ಆರೋಪಿಯನ್ನು ಬಂಧಿಸಿದ್ದೇವೆ” ಎಂದು ಅವರು ವಿವರಿಸಿದ್ದಾರೆ.

ಪಟೇಲ್ ವಿರುದ್ಧ ಐಪಿಎಸ್‌ ಸೆಕ್ಷನ್ 500 ಅಡಿಯಲ್ಲಿ ಮಾನನಷ್ಟ, 354ಡಿ ಹಿಂಬಾಲಿಸಲು, 506 ಕ್ರಿಮಿನಲ್ ಬೆದರಿಕೆ ಮತ್ತು ಮಾಹಿತಿ ತಂತ್ರಜ್ಞಾನ ತಿದ್ದುಪಡಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

“ಆರೋಪಿಯ ಸೆಲ್ ಫೋನ್‌ನಿಂದ ದೋಷಾರೋಪಣೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಪಡೆದುಕೊಳ್ಳಲಾಗಿದೆ. ಖಿನ್ನತೆಗೆ ಒಳಗಾದ ಮಹಿಳೆ ಆರೋಪಿಸಿದಂತೆ ಬೆದರಿಕೆ ಸಂದೇಶಗಳು, ಅಸಭ್ಯ ಚಿತ್ರಗಳು, ಪಠ್ಯ ಸಂದೇಶಗಳು, ಕಾಲ್‌ ಹಿಸ್ಟರಿ ಮತ್ತು ಚಾಟ್ ಹಿಸ್ಟರಿಗಳ ಜೊತೆಗೆ ತನ್ನ ಅಪ್ರಾಪ್ತ ಮಗನಿಗೆ ಕಳುಹಿಸಿದ ಅಸಭ್ಯ ಚಿತ್ರಗಳ ಪುರಾವೆಗಳು ನಮಗೆ ದೊರೆತಿವೆ” ಎಂದು ವಾಸವ ಹೇಳಿದ್ದಾರೆ.

ಇದನ್ನೂ ಓದಿ: ಪ್ರಿಯಕನ ಜೊತೆ ಓಡಿಹೋದ ಬಾಲಕಿಗೆ ಥಳಿಸಿ, ಮಸಿ ಬಳಿದು ಮೆರವಣಿಗೆ ಮಾಡಿದ ಗ್ರಾಮಸ್ಥರು; 22 ಜನರ ಬಂಧನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights