ಬಸ್‌ ಮೇಲಿದ್ದ ಪುನೀತ್‌ ಚಿತ್ರಕ್ಕೆ ಮುತ್ತಿಟ್ಟು, ಕಣ್ಣೀರು ಹಾಕಿದ ವೃದ್ದೆ: ವಿಡಿಯೋ ವೈರಲ್‌

ಕನ್ನಡ ಚಿತ್ರರಂಗದ ರಾಜಕುಮಾರ ನಟ ಪುನೀತ್‌ರಾಜ್‌ಕುಮಾರ್‌ ಅವರು ನಮ್ಮನ್ನು ಆಗಲಿ ಎರಡು ವಾರ ಕಳೆಯುತ್ತಿವೆ. ಆದರೂ, ಅಭಿಮಾನಗಳ ನೋವು ಇನ್ನೂ ಕಡಿಮೆಯಾಗಿಲ್ಲ. ಈ ನಡುವೆ, ವೃದ್ದೆಯೊಬ್ಬರು ಬಸ್‌ ಮೇಲಿದ್ದ ಪುನೀತ್‌ ಅವರ ಚಿತ್ರಕ್ಕೆ ಮುತ್ತಿಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕೊಪ್ಪಳ ಜಿಲ್ಲೆಯ ಕುಕನೂರು ಬಸ್​ ನಿಲ್ದಾಣದಲ್ಲಿ ನಿಂತಿದ್ದ ಬಸ್‌ ವೊಂದರ ಮೇಲೆ ಪುನೀತ್‌ ಅವರು ಬ್ರಾಂಡ್‌ ಅಂಬಾಸಿಡರ್‌ ಆಗಿದ್ದ ಜಾಹೀರಾತನ್ನು ಅಂಟಿಸಲಾಗಿತ್ತು. ಜಾಹೀರಾತಿನಲ್ಲಿದ್ದ ಪುನೀತ್‌ ಅವರ ಚಿತ್ರಕ್ಕೆ ವೃದ್ದೆಯೊಬ್ಬರು ಮುತ್ತಿಟ್ಟು, ಕಣ್ಣೀರು ಹಾಕಿದ್ದಾರೆ.

ಅಲ್ಲದೆ, ಪುನೀತ್‌ ಅವರ ಚಿತ್ರದ ಮೇಲಿದ್ದ ಧೂಳನ್ನು ಅಜ್ಜಿ ತನ್ನ ಸೀರೆಯ ಸೆರಗಿನಿಂದ ವರೆಸಿದ್ದಾರೆ. ಪುನೀತ್‌ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ.

ಸಿನಿಮಾಗಳು ಮತ್ತು ಸಿನಿಮಾದಿಂದ ಹೊರಗೂ ನಾನಾ ರೀತಿಯ ಸಾಮಾಜಿಕ ಕೆಲಸಗಳನ್ನು ಮಾಡಿದ್ದ ಪುನೀತ್‌, ಕನ್ನಡಿಗರ ಮನೆ ಮಗನಾಗಿದ್ದರು. ದುರಾದೃಷ್ಟವಷಾತ್‌, ಹೃದಯಾಘಾತದಿಂದ ಸಾವನ್ನಪ್ಪಿದರು. ಅವರ ಹಠಾತ್‌ ಸಾವು ಇಡೀ ರಾಜ್ಯಾದ್ಯಂತ ಹಾಗೂ ಅಭಿಮಾನಿಗಳ ಮನೆ-ಮನಗಳಲ್ಲಿ ಸೂತಕದ ಛಾಯೆಯನ್ನು ಮೂಡಿಸಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಇದೇ ಮೊದಲು: ಪುನೀತ್ ಅವರ ಕಣ್ಣುಗಳನ್ನು ಇಬ್ಬರಿಗಲ್ಲ, ನಾಲ್ವರಿಗೆ ದಾನ ಮಾಡಲಾಗಿದೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights