ಪ್ರಿಯಕನ ಜೊತೆ ಓಡಿಹೋದ ಬಾಲಕಿಗೆ ಥಳಿಸಿ, ಮಸಿ ಬಳಿದು ಮೆರವಣಿಗೆ ಮಾಡಿದ ಗ್ರಾಮಸ್ಥರು; 22 ಜನರ ಬಂಧನ
ತನ್ನ ಪ್ರಿಯಕರನೊಂದಿಗೆ ಓಡಿಹೋಗಿದ್ದಕ್ಕಾಗಿ 14 ವರ್ಷದ ಬಾಲಕಿಗೆ ಗ್ರಾಮಸ್ಥರ ಗುಂಪೊಂದು ಥಳಿಸಿ, ಆಕೆಯ ಮುಖಕ್ಕೆ ಮಸಿ ಬಳಿದು, ಮೆರವಣಿಗೆ ನಡೆಸಿರುವ ಅಮಾನವೀಯ ಘಟನೆ ಗುಜರಾತ್‌ನ ಪಟಾನ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಜಿಲ್ಲೆಯ ಹರಿಜ್ ಗ್ರಾಮದಲ್ಲಿ ನವೆಂಬರ್ 10 ರಂದು ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 22 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲಕಿ ತನ್ನ ಪ್ರಿಯಕರನ ಜೊತೆ ಓಡಿಹೋಗಿದ್ದಳು. ಆಕೆಯನ್ನು ಮರಳಿ ಕರೆತಂಡ ಗ್ರಾಮದ ವಾಡಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಗ್ರಾಮಸ್ಥರು, ಆಕೆಯನ್ನು ಥಳಿಸಿ, ಮುಖಕ್ಕೆ ಬಳಿದು ಶಿಕ್ಷಿಸಿದ್ದಾರೆ. ಆಕೆ ಓಡಿಹೋಗಿದ್ದು, ತಮ್ಮ ಬುಡಕಟ್ಟು ಜನಾಂಗಕ್ಕೆ ಕೆಟ್ಟ ಹೆಸರನ್ನು ತಂದಿದೆ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಘಟನೆಯ ವೀಡಿಯೊ ವೈರಲ್ ಆಗಿದ್ದು, ಬಾಲಕಿಯನ್ನು “ಶುದ್ಧೀಕರಿಸುವ” ಧಾರ್ಮಿಕ ಕ್ರಿಯೆಗಾಗಿ, ಗ್ರಾಮಸ್ಥರ ಗುಂಪು ಆಕೆಗೆ ತಳಿಸಿ, ಮಸಿ ಬಳಿಸಿದ್ದಾರೆ.
ಅಲ್ಲದೆ, ಬಾಲಕಿ ಮತ್ತು ಆಕೆಯ ಪ್ರಿಯಕರನನ್ನು ಗ್ರಾಮದಲ್ಲಿ ಶಿಕ್ಷೆಯಾಗಿ ಮೆರವಣಿಗೆ ಮಾಡಿದ್ದಾರೆ.
ಇದಾದ ಬಳಿಕ ಬಾಲಕಿಯ ಕುಟುಂಬಸ್ಥರು ಅದೇ ಸಮುದಾಯದ ಮತ್ತೊಬ್ಬ ವ್ಯಕ್ತಿಯೊಂದಿಗೆ ಮದುವೆಯಾಗುವಂತೆ ಬಾಲಕಿಗೆ ಒತ್ತಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಯ 4 ಗಂಟೆಗಳ ಭೇಟಿಗಾಗಿ 23 ಕೋಟಿ ರೂ. ಖರ್ಚು ಮಾಡುತ್ತಿದೆ ಮ.ಪ್ರದೇಶ ಸರ್ಕಾರ!
“ನಾವು ಪ್ರಕರಣಕ್ಕೆ ಸಂಬಂಧಿಸಿದಂತೆ 35 ಗ್ರಾಮಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ ಮತ್ತು ಇದುವರೆಗೆ 22 ಮಂದಿಯನ್ನು ಬಂಧಿಸಿದ್ದೇವೆ” ಎಂದು ಪೊಲೀಸ್ ವರಿಷ್ಠಾಧಿಕಾರಿ (ಪಟಾನ್) ಅಕ್ಷಯರಾಜ್ ಮಕ್ವಾನಾ ತಿಳಿಸಿದ್ದಾರೆ.
ಶುಕ್ರವಾರ ದಾಖಲಾದ ಎಫ್‌ಐಆರ್‌ನ ಪ್ರಕಾರ, 35 ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143 (ಕಾನೂನುಬಾಹಿರ ಸಭೆ), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 341 (ತಪ್ಪು ಸಂಯಮ), 509 (ಮಹಿಳೆಯನ್ನು ಅವಮಾನಿಸುವುದು), ಬಾಲ್ಯವಿವಾಹ ನಿಷೇಧ ಕಾಯಿದೆ ಮತ್ತು ಬಾಲಾಪರಾಧ ನ್ಯಾಯದ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪ್ರಾಪ್ತ ಬಾಲಕಿಯೊಂದಿಗೆ ಓಡಿಹೋದ ಯುವಕ ಮತ್ತು ಇತರರ ವಿರುದ್ಧ ಐಪಿಸಿ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪೋಕ್ಸೋ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 363 (ಅಪಹರಣ), ಮತ್ತು 376 (3) (ಅತ್ಯಾಚಾರ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಬಾಲಕಿಯ ಪ್ರಿಯಕರನ ವಿರುದ್ದ ಮತ್ತೊಂದು ಎಫ್‌ಐಆರ್ ದಾಖಲಿಸಲಾಗಿದೆ.
ಎಫ್‌ಐಆರ್‌ನ ಪ್ರಕಾರ, ಬಾಲಕಿಯನ್ನು ಅಪಹರಿಸಿ ಖೇಡಾ ಜಿಲ್ಲೆಯ ಡಾಕೋರ್‌ಗೆ ಕರೆದೊಯ್ದು ಅಲ್ಲಿ ಆರೋಪಿಗಳು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಚುನಾವಣಾ ಸಮೀಕ್ಷೆ: ಉತ್ತರ ಪ್ರದೇಶದಲ್ಲಿ 108 ಸ್ಥಾನಗಳನ್ನು ಕಳೆದುಕೊಳ್ಳಲಿದೆ ಬಿಜೆಪಿ; ಎಸ್‌ಪಿಗೆ ಲಾಭ!