‘ಭೂತ್ ವಿದ್ಯಾ’ ವಾರಾಣಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ವೈದ್ಯರಿಗಾಗಿ ವಿಶೇಷ ಕೋರ್ಸ್

ಹಳ್ಳಿ ಪ್ರದೇಶಗಳಲ್ಲಿ ಜನ ಈಗಲೂ ದೆವ್ವಗಳಿವೆ ಎಂಬುದನ್ನು ನಂಬುತ್ತಾರೆ. ಮೈಮೇಲೆ ದೆವ್ವ ಬಂದಿದೆ ಎಂದು ವಿಚಿತ್ರವಾಗಿ ಆಡುತ್ತಾರೆ. ಈ ವೇಳೆ ಮಾಟಗಾರರು, ಯಂತ್ರ ತಂತ್ರವಿದ್ಯೆ ಕಲಿತಿರುವವರ ಹತ್ತಿರ ಹೋಗುತ್ತಾರೆ. ಆದರೆ ಇಂತಹ ಸಮಸ್ಯೆ ನಿವಾರಿಸಲೆಂದೇ ವಿಶ್ವವಿದ್ಯಾಲಯವೊಂದು ‘ ಭೂತ್ ವಿದ್ಯಾ’ ಎಂಬ ಸರ್ಟಿಫಿಕೇಟ್ ಕೋರ್ಸ್ ಪರಿಚಯಿಸಿದೆ.

ವಾರಾಣಸಿಯಲ್ಲಿರುವ ದೇಶದ ಪ್ರತಿಷ್ಠಿತ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಈ ವಿಶೇಷ ಕೋರ್ಸ್ ಪರಿಚಯಿಸಲಾಗಿದೆ. ವೈದ್ಯರಿಗಾಗಿ ಶುರು ಮಾಡುತ್ತಿರುವ ಈ ಕೋರ್ಸ್ 6 ತಿಂಗಳ ಅವಧಿಯಾಗಿದ್ದು, 2020ರ ಜನವರಿಯಿಂದ ಶುರುವಾಗಲಿದೆ ಎಂದು ಬನಾರಸ್ ವಿವಿ ಅಧಿಕಾರಿಯೊಬ್ಬರು ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಈಗಾಗಲೇ ವೈದ್ಯ ವೃತ್ತಿ ಮಾಡುತ್ತಿರುವವರು ಈ ಕೋರ್ಸ್ ಗೆ ಸೇರಿಕೊಳ್ಳಬಹುದು.

ದೆವ್ವಗಳನ್ನು ನೋಡಿದ್ದೇನೆಂದು ಹೇಳುವವರು ಹಾಗೂ ದೆವ್ವ ಬಂದಂತೆ ಆಡುವವರಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದರ ಕುರಿತು ಈ ಸರ್ಟಿಫಕೇಟ್ ಕೋರ್ಸ್ ನಲ್ಲಿ ಹೇಳಿಕೊಡಲಾಗುತ್ತಂತೆ. ಆಯುರ್ವೇದ ವಿಭಾಗದಿಂದ ಈ ಕೋರ್ಸ್ ಪರಿಚಯಿಸಲಾಗಿದ್ದು ಪ್ರಾಚೀನ ಹಿಂದೂ ವೈದ್ಯ ಪದ್ಧತಿ ಮೂಲಕ ದೆವ್ವದ ಭೀತಿಗೊಳಗಾಗಿರುವವರುನ್ನು ಚಿಕಿತ್ಸೆಗೊಳಪಡಿಸುವುದು, ಅವರ ಮಾನಸಿಕ ಅಸ್ವಸ್ಥತೆಯನ್ನು ಶಮನಗೊಳಿಸುವ ಬಗ್ಗೆ ಈ ಕೋರ್ಸ್ ನಲ್ಲಿ ಹೇಳಿಕೊಡಲಾಗುತ್ತದೆ.

ಮಾನಸಿಕ ತೊಂದರೆಗಳು, ಅಪರಿಚಿತ ಕಾರಣಗಳಿಂದ ಉಂಟಾದ ಮಾನಸಿಕ ಸಮಸ್ಯೆಗಳು ಸೇರಿ ಭೂತ ಸಂಬಂಧಿತ ಸಮಸ್ಯೆಗಳನ್ನು ಹೋಗಲಾಡಿಸಲು ಈ ಕೋರ್ಸ್ ಸಹಾಯವಾಗುತ್ತಂದಂತೆ. ಈ ಭೂತ್ ವಿದ್ಯಾ ಕೋರ್ಸ್ ಗಾಗಿ ಬನಾರಸ್ ವಿವಿಯಲ್ಲಿ ಪ್ರತ್ಯೇಕ ಘಟಕವನ್ನೇ ಸ್ಥಾಪಿಸಲಾಗಿದೆಯಂತೆ. ಭೂತ ಸಂಬಂಧಿತ ಸಮಸ್ಯೆಗಳ ನಿವಾರಣೆ ವಿಧಾನವನ್ನು ಕಲಿಸುವ ಭೂತ್ ವಿದ್ಯಾ ಕೋರ್ಸ್ ಪರಿಚಯಿಸಿರುವ ಭಾರತದ ಮೊದಲ ವಿಶ್ವವಿದ್ಯಾಲಯ ಇದು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights