ದೆಹಲಿಯ ಹೊಸ ಸಂಸತ್ ಕಟ್ಟಡ ನಿರ್ಮಾಣ ಸ್ಥಳಕ್ಕೆ ತಡರಾತ್ರಿ ಮೋದಿ ಭೇಟಿ, ಪರಿಶೀಲನೆ..!

ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಡರಾತ್ರಿ ದೆಹಲಿಯ ಹೊಸ ಸಂಸತ್ ಕಟ್ಟಡ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದರು. ಸುರಕ್ಷತಾ ಹೆಲ್ಮೆಟ್ ಜೊತೆಗೆ ಬಿಳಿ ಕುರ್ತಾ-ಚುರಿದಾರ್ ಧರಿಸಿದ ಮೋದಿ ಅವರು ಪ್ರಗತಿಯಲ್ಲಿರುವ ಕೆಲಸವನ್ನು ಪರಿಶೀಲಿಸುತ್ತಿರುವುದು ಕಂಡುಬಂತು.

971 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡದ ನಿರ್ಮಾಣ ಸ್ಥಿತಿಯನ್ನು ಪ್ರಧಾನಿ ಮೋದಿ ಅವರು ತಪಾಸಣೆ ನಡೆಸಿದ್ದು 2022 ರ ವೇಳೆಗೆ ಈ ಕಟ್ಟಡದ ನಿರ್ಮಾಣ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಪ್ರಧಾನಮಂತ್ರಿಯವರು ತಮ್ಮ ಮೂರು ದಿನಗಳ ಯುಎಸ್ ಭೇಟಿಯಿಂದ ಹಿಂದಿರುಗಿದ ನಂತರ ಹಲವಾರು ಕೆಲಸಗಳಲ್ಲಿ ನಿರತರಾಗಿದ್ದಾರೆ. ಭಾರತಕ್ಕೆ ಬಂದ ಬಳಿಕ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿ ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಿದರು. ಹಿಂದಿನ ದಿನ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದರು. ಬಳಿಕ ರಾತ್ರಿ 8.45 ಕ್ಕೆ ದೆಹಲಿಯ ಹೊಸ ಸಂಸತ್ ಕಟ್ಟಡ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಸುಮಾರು ಒಂದು ಗಂಟೆ ಆ ಸ್ಥಳದಲ್ಲಿ ಕಳೆದರು.

ಫೋಟೋವೊಂದರಲ್ಲಿ, ಪ್ರಧಾನಮಂತ್ರಿಯವರು ಸ್ಥಳದಲ್ಲಿ ಕೆಲಸಗಾರರೊಂದಿಗೆ ಸಂವಹನ ನಡೆಸುತ್ತಿರುವುದು ಕಂಡುಬಂದಿದೆ.

f71rfrgg

ಸಾಂಕ್ರಾಮಿಕ ರೋಗದ ಮಧ್ಯೆ ಸಂಸತ್ ನಿರ್ಮಾಣಕ್ಕೆ ವಿರೋಧ ಪಕ್ಷಗಳಿಂದ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿರ್ವಹಿಸಲು ಹಣದ ಅಭಾವವಿದ್ದು ಕಟ್ಟಡ ನಿರ್ಮಾಣ ಯೋಜನೆಯನ್ನು ನಿಲ್ಲಿಸಬೇಕು ಎಂದು ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವೆ. ಆದರೂ ಪ್ರಧಾನ ಮಂತ್ರಿಯ ಹೊಸ ಸಂಸತ್ ಕಟ್ಟಡ ನಿರ್ಮಾಣ ಮಾಡುಲಾಗುತ್ತಿದ್ದು ಈ ಸ್ಥಳಕ್ಕೆ ಮೋದಿಯವರು ಮೊದಲ ಬಾರಿಗೆ ಭೇಟಿ ನೀಡಿದ್ದಾರೆ.

ಹೊಸ ಸಂಸತ್ ಕಟ್ಟಡ 64,500 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿದ್ದು, ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸಲು ಭವ್ಯವಾದ ಸಂವಿಧಾನ ಸಭಾಂಗಣವನ್ನು ಹೊಂದಿದೆ. ಇದು ಸಂಸತ್ತಿನ ಸದಸ್ಯರಿಗೆ ಒಂದು ಕೋಣೆ, ಒಂದು ಗ್ರಂಥಾಲಯ, ಬಹು ಸಮಿತಿ ಕೊಠಡಿಗಳು, ಊಟದ ಪ್ರದೇಶಗಳು ಮತ್ತು ಸಾಕಷ್ಟು ಪಾರ್ಕಿಂಗ್ ಸ್ಥಳವನ್ನು ಹೊಂದಿದೆ.

ಹೊಸ ಕಟ್ಟಡದಲ್ಲಿರುವ ಲೋಕಸಭಾ ಚೇಂಬರ್ 888 ಸದಸ್ಯರಿಗೆ ಆಸನ ಸಾಮರ್ಥ್ಯವನ್ನು ಹೊಂದಿದ್ದು, ರಾಜ್ಯಸಭೆಯು ಸದಸ್ಯರಿಗೆ 384 ಸ್ಥಾನಗಳನ್ನು ಹೊಂದಿರುತ್ತದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಹೊಸ ಸಂಸತ್ತಿನ ಅಡಿಪಾಯವನ್ನು ಹಾಕಿದ ಪ್ರಧಾನಿ, ಹೊಸ ಕಟ್ಟಡವು 21 ನೇ ಶತಮಾನದ ದೇಶದ ಆಕಾಂಕ್ಷೆಗಳನ್ನು ಪೂರೈಸುತ್ತದೆ ಮತ್ತು “ಹೊಸ ಮತ್ತು ಹಳೆಯ ಸಹಬಾಳ್ವೆಯನ್ನು ಸಂಕೇತಿಸುತ್ತದೆ. ಈಗಿರುವ ಕಟ್ಟಡ ನಿವೃತ್ತಿಯನ್ನು ಕಾಣುತ್ತಿದೆ. 21 ನೇ ಶತಮಾನದಲ್ಲಿ ಭಾರತಕ್ಕೆ ಹೊಸ ಸಂಸತ್ ಕಟ್ಟಡವನ್ನು ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದು ಅವರು ಹೇಳಿದರು.

ಹೊಸ ಸಂಸತ್ ಭವನ ನಿರ್ಮಾಣಕ್ಕಾಗಿ ಸರ್ಕಾರವು ಇಲ್ಲಿಯವರೆಗೆ 238 ಕೋಟಿ ಮತ್ತು ಸೆಂಟರ್ ವಿಸ್ಟಾ ಅವೆನ್ಯೂ ಪುನರಾಭಿವೃದ್ಧಿಗೆ 63 ಕೋಟಿ ಖರ್ಚು ಮಾಡಿದೆ. ಸರ್ಕಾರದ ಪ್ರಕಾರ, 2021-22ರ ಆರ್ಥಿಕ ವರ್ಷಕ್ಕೆ ಈ ಎರಡು ಯೋಜನೆಗಳಿಗೆ ಮಾಡಬೇಕಾದ ಅಂದಾಜು ವೆಚ್ಚ 1,289 ಕೋಟಿಯಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights