ಕೆಂಪು ಕೋಟೆಯ ಹಿಂಸಾಚಾರವನ್ನು ಭಾರತದ ಪತ್ರಿಕೆಗಳು ಹೇಗೆ ನೋಡಿವೆ ಎಂಬುದು ಇಲ್ಲಿದೆ..

ಗಣರಾಜ್ಯೋತ್ಸವದಂದು ನವದೆಹಲಿಯಲ್ಲಿ ರೈತರ ಟ್ರಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ತಿರುಗಿ ಸಾಕಷ್ಟು ಅವಾಂತರವನ್ನೇ ಸೃಷ್ಟಿ ಮಾಡಿದೆ. ಪ್ರತಿಭಟನಾಕಾರರ ಒಂದು ಭಾಗ ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಿ ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳನ್ನು ಪ್ರತಿಭಟನೆಗೆ ಅನುಮತಿಸದಿದ್ದರೂ ನುಗ್ಗಿ ಹಿಂಸಾಚಾರವೆಸಗಿದೆ.

ಅನೇಕ ಸ್ಥಳಗಳಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆಗಳು ಸಂಭವಿಸಿವೆ. ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಈ ವಿಧ್ವಂಸಕ ಕೃತ್ಯವೂ ವರದಿಯಾಗಿದೆ. 22 ಕೇಸ್ ಗಳು ದಾಖಲಾಗಿವೆ. ದೆಹಲಿಯಾದ್ಯಂತ ನಿಯೋಜಿಸಲಾದ ಪೊಲೀಸ್ ತಂಡಗಳನ್ನು ತಳ್ಳಿ ಕೆಲ ಪ್ರತಿಭಟನಾ ತಂಡಗಳು ನುಗ್ಗಿದ್ದರಿಂದ ಅಶ್ರುವಾಯು, ಲಾಠಿಚಾರ್ಜ್ ಮಾಡಲಾಗಿದೆ. ಪೊಲೀಸ್ ಷರತ್ತಿನ ವಿರುದ್ಧ ಧ್ವಜವನ್ನು ಹಿಡಿದ ಪ್ರತಿಭಟನಾಕಾರರ ಒಂದು ಭಾಗ ಕೆಂಪು ಕೋಟೆಗೆ ನುಗ್ಗಿ ತನ್ನ ಧ್ವಜವನ್ನು ಹಾರಿಸಿದೆ. ಈ ಹಿಂಸಾಚಾರದಲ್ಲಿ ಓರ್ವ ಪ್ರತಿಭಟನಾಕಾರ ಸಾವನ್ನಪ್ಪಿದ್ದಾನೆ. ಮಾತ್ರವಲ್ಲದೇ ಪೊಲೀಸರು ಸೇರಿದಂತೆ ಅನೇಕರು ಗಾಯಗೊಂಡರು.

ದೆಹಲಿಯ ಹೊರವಲಯದಲ್ಲಿ ಎರಡು ತಿಂಗಳ ಕಾಲ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಆಂದೋಲನವನ್ನು ಮುನ್ನಡೆಸುತ್ತಿರುವ ಕೃಷಿ ಮುಖಂಡರು ನಿನ್ನೆ ನಡೆದ ಹಿಂಸಾಚಾರದಿಂದ ದೂರವಾಗಿದ್ದಾರೆ ಎಂಬ ವಿಚಾರ ಇಂದಿನ ಭಾರತೀಯ ಪತ್ರಿಕೆಗಳಲ್ಲಿ ಪ್ರಮುಖವಾಗಿರುವುದನ್ನು ಗಮನಿಸಬಹುದು.

ಕೆಂಪು ಕೋಟೆಯ ಹಿಂಸಾಚಾರವನ್ನು ಭಾರತದ ಪತ್ರಿಕೆಗಳು ಹೇಗೆ ನೋಡಿದೆ ಎಂಬುದು ಇಲ್ಲಿದೆ:

ಇಂಡಿಯನ್ ಎಕ್ಸ್ ಪ್ರೆಸ್

“ಕೆಂಪು ಕೋಟೆ ರೇಖೆಯನ್ನು ದಾಟಿದ ಪ್ರತಿಭಟನಾಕಾರರು” ಎಂಬುದು ರಾಷ್ಟ್ರೀಯ ದಿನಪತ್ರಿಕೆ ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ಮೊದಲ ಪುಟದ ಶೀರ್ಷಿಕೆಯಾಗಿತ್ತು. ಪತ್ರಿಕೆ ನಿನ್ನೆ ನಡೆದ ಘಟನೆಗಳನ್ನು ಸಚಿಸ್ತಾರವಾಗಿ ವಿವರಿಸಿದೆ. ಕೆಂಪು ಕೋಟೆ ಸಂಪೂರ್ಣ ಅವ್ಯವಸ್ಥೆಗೆ ಇಳಿದ ನಂತರ ಅದನ್ನು ಹೇಗೆ ಭದ್ರಪಡಿಸಲಾಯಿತು ಎಂಬುದರ ಕುರಿತು ಅನೇಕ ಮುಖ್ಯಾಂಶಗಳನ್ನು ಪತ್ರಿಯಲ್ಲಿ ನೋಡಬಹುದು. ಮೊದಲ ಪುಟದ ಮತ್ತೊಂದು ಹೇಳಿಕೆಯಲ್ಲಿ ಕೃಷಿ ಮುಖಂಡರು ಹಿಂಸಾಚಾರವನ್ನು ಖಂಡಿಸಿದ್ದಾರೆ ಎಂದು ಹೇಳಿದೆ. ಮತ್ತೊಂದು ಬರವಣಿಗೆಯಲ್ಲಿ ಪಂಜಾಬಿ ನಟ ದೀಪ್ ಸಿಧು ಮತ್ತು ಇತರರು ಟ್ರಾಕ್ಟರ್ ರ್ಯಾಲಿಗೂ ಮುನ್ನ ಸಿಂಗು ಗಡಿಯಲ್ಲಿ ರಾತ್ರಿ ಹೇಗೆ ಸೇರಿಕೊಂಡರು ಎಂಬುದರ ಬಗ್ಗೆ ವಿಚರಿಸಲಾಗಿದೆ.

ದಿ ಹಿಂದೂಸ್ತಾನ್ ಟೈಮ್ಸ್

“ಡಾರ್ಕ್ ಡೇ ಫಾರ್ ದಿ ರಿಪಬ್ಲಿಕ್” ರಾಷ್ಟ್ರೀಯ ದೈನಂದಿನ ಹಿಂದೂಸ್ತಾನ್ ಟೈಮ್ಸ್ನ ಮೊದಲ ಪುಟದ ಶೀರ್ಷಿಕೆಯಾಗಿತ್ತು. ಕೆಂಪು ಕಥೆ, ಐಟಿಒ ಮತ್ತು ಹಿಂಸಾಚಾರ ನಡೆದ ಇತರ ಭಾಗಗಳಲ್ಲಿ ಭಿನ್ನಮತೀಯ ಪ್ರತಿಭಟನಾಕಾರರ ಚಿತ್ರಗಳೊಂದಿಗೆ ಪ್ರಮುಖವಾಗಿ ವರದಿ ಮಾಡಲಾಗಿದೆ. ಮೊದಲ ಪುಟದ ಕಥೆಯು ಐಟಿಒನಲ್ಲಿ ಟ್ರಾಕ್ಟರುಗಳಿಂದ ಬಸ್, ಬ್ಯಾರಿಕೇಡ್ ಉರುಳಿಸಿದ ಬಗ್ಗೆ ವಿವರಗಳನ್ನು ಉಲ್ಲೇಖಿಸಿದೆ. ಕೆಂಪು ಕೋಟೆಯಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆಗಳ ಬಗ್ಗೆ ವಿವರಿಸಲಾಗಿದೆ. ಮೊದಲ ಪುಟದ ಮತ್ತೊಂದು ಶೀರ್ಷಿಕೆ ಹೀಗಿದೆ: “ಅರಾಜಕತೆಯ ಆಳ್ವಿಕೆಯ ನಂತರ ಆಪಾದನೆಯನ್ನು ತಿರುಗಿಸಿ ಯೂನಿಯನ್ ನಾಯಕರು ಮನವಿ ಮಾಡುತ್ತಾರೆ”. ಮತ್ತೊಂದು ವರದಿಯಲ್ಲಿ ಪೊಲೀಸರನ್ನು ಹೇಗೆ ಕಾವಲುಗಾರರನ್ನಾಗಿ ಮಾಡಲಾಯಿತು ಮತ್ತು ಹೇಗೆ ಉಲ್ಲಂಘಿಸುವವರಿಗೆ ಶಿಕ್ಷೆಯಾಗುತ್ತದೆ ಎನ್ನುವ ಬಗ್ಗೆ ವಿವರಿಸಲಾಗಿದೆ.

ಡೆಕ್ಕನ್ ಕ್ರಾನಿಕಲ್ ಪತ್ರಿಕೆ

“Protesting farmers breach Red Fort” ಡೆಕ್ಕನ್ ಕ್ರಾನಿಕಲ್ ಪತ್ರಿಕೆಯ ಮೊದಲ ಪುಟದ ಶೀರ್ಷಿಕೆಯಾಗಿದೆ. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಯನ್ನು ಉಲ್ಲೇಖಿಸುವುದರ ಜೊತೆಗೆ ರ್ಯಾಲಿಯ ನಿರ್ಧರಿಸಿದ ಮಾರ್ಗದಿಂದ ರೈತರು ಹೇಗೆ ವಿಮುಖರಾದರು ಎಂಬುದನ್ನು ಮುಖ್ಯ ಕಥೆ ಎತ್ತಿ ತೋರಿಸಿದೆ. “ಭಾರತದ 72 ನೇ ಗಣರಾಜ್ಯೋತ್ಸವವು ದೆಹಲಿಯ ಬೀದಿಗಳಲ್ಲಿ ಭುಗಿಲೆದ್ದಿದ್ದು, ಟ್ರಾಕ್ಟರ್ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದ ಪ್ರತಿಭಟನಾಕಾರರ ರೈತರಲ್ಲಿ ಹೆಚ್ಚಿನ ಭಾಗವು ಮಾರ್ಗದಿಂದ ವಿಮುಖವಾಯಿತು, ಬ್ಯಾರಿಕೇಡ್‌ಗಳನ್ನು ಮುರಿದು ಪೊಲೀಸರೊಂದಿಗೆ ಘರ್ಷಣೆ ನಡೆಸಿ ಇತಿಹಾಸದಲ್ಲಿ ಗಣರಾಜ್ಯೋತ್ಸದಿನದಂದು ಹಿಂದೆದು ನಡೆಯದ ಘಟನೆ ನಡೆದಿದೆ. ಜೊತೆಗೆ ಕೆಂಪು ಕೋಟೆ ಯಲ್ಲಿ ಸಿಖ್ ಧ್ವಜ. ” ಮೊದಲ ಪುಟದ ಮತ್ತೊಂದು ಶೀರ್ಷಿಕೆಯಲ್ಲಿ ನಿನ್ನೆ ಅಭೂತಪೂರ್ವ ಅವ್ಯವಸ್ಥೆಯ ನಂತರ ಹೆಚ್ಚು ಕೇಂದ್ರ ಪಡೆಗಳನ್ನು ಹೇಗೆ ಕರೆಯಲಾಗಿದೆ ಎಂಬುದರ ಕುರಿತು ಇದೆ.

ದಿ ಟೆಲಿಗ್ರಾಫ್

“ರೈತ ಕೊಲ್ಲಲ್ಪಟ್ಟರು, ಕೆಂಪು ಕೋಟೆ ಉಲ್ಲಂಘಿಸಲಾಗಿದೆ” ಎಂಬುದು ಟೆಲಿಗ್ರಾಫ್ ಪತ್ರಿಕೆಯ ಮೊದಲ ಪುಟದ ಶೀರ್ಷಿಕೆಯಾಗಿದೆ. ಮತ್ತೊಂದು ಶೀರ್ಷಿಕೆ ಹೀಗಿದೆ: “ಅವರು ಕಿಚ್ಚು ಹಚ್ಚಲಿಲ್ಲ ”. ಪ್ರಮುಖ ಲೇಖನವು ಮಂಗಳವಾರ ಅಪ್ರತಿಮ ಕೆಂಪು ಕೋಟೆಯಲ್ಲಿ ಕಂಡುಬರುವ ಅವ್ಯವಸ್ಥೆಯನ್ನು ವಿವರಿಸಿದೆ .ಜೊತೆಗೆ ಪ್ರತಿಭಟನಾ ನಿರತ ರೈತರ ಒಂದು ಭಾಗವು ಟ್ರಾಕ್ಟರ್ ರ್ಯಾಲಿಯ ನಿರ್ಧರಿಸಿದ ಮಾರ್ಗದಿಂದ ವಿಮುಖರಾದ ನಂತರ ಘರ್ಷಣೆಗಳು ಹೇಗೆ ಸ್ಫೋಟಗೊಂಡವು ಎಂಬುದನ್ನು ಉಲ್ಲೇಖಿಸಲಾಗಿದೆ. ಐಟಿಒ ಮತ್ತು ಕೆಂಪು ಕೋಟೆ, ಕರ್ನಾಲ್ ಬೈಪಾಸ್, ಅಕ್ಷರ್ಧಮ್ ಮತ್ತು ನಂಗ್ಲೋಯ್ನಲ್ಲಿ ನಡೆದ ಹಿಂಸಾಚಾರದ ವಿವರಗಳನ್ನು ಕಥೆಯಲ್ಲಿ ಉಲ್ಲೇಖಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights