ಕೊರೊನಾ ನಿರ್ವಹಣೆಯಲ್ಲಿ ವಿಫಲ; ಇಟಲಿ ಪ್ರಧಾನಿ ರಾಜೀನಾಮೆ!

ಕೊರೊನಾ ಸೋಂಕಿನ ಸಂದರ್ಭವನ್ನು ನಿರ್ವಹಿಸುವಲ್ಲಿ ವಿಫಲವಾದ ಕಾರಣದಿಂದಾಗಿ ಇಟಲಿಯ ಪ್ರಧಾನಿ ಗೈಸೆಪೆ ಕಾಂಟೆ ಅವರು ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಆಡಳಿತಾರೂಢ ಒಕ್ಕೂಟದಲ್ಲಿಯೇ ತಮ್ಮ ವಿರುದ್ಧ ಅಸಮಾಧಾನ ಮತ್ತು ಟೀಕೆಗಳು ಎದುರಾದ ಹಿನ್ನೆಲೆಯಲ್ಲಿ ಗೈಸೆಪೆ ಕಾಂಟೆ ಅವರು ಅಧ್ಯಕ್ಷ ಸೆರ್ಗಿಯೋ ಮ್ಯಾಟರೆಲ್ಲಾ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

ಈ ವಾರ ಇಟಲಿ ಸಂಸತ್ತಿನಲ್ಲಿ ನಡೆದ ಪ್ರಮುಖ ಮತದಾನದಲ್ಲಿ ಅವರು ಸೋಲು ಕಂಡಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಹೊಸ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡುವುದಾಗಿ ಕಾಂಟೆ ಸಂಪುಟಕ್ಕೆ ಮಾಹಿತಿ ನೀಡಿದ್ದರು.

“ನಿರ್ಧರಿಸುವ ಹಕ್ಕನ್ನು ಕಾಯ್ದಿರಿಸಿದ್ದೇವೆ (ಮುಂದೆ ಏನು ಮಾಡಬೇಕು). ಸದ್ಯ ಸರ್ಕಾರವನ್ನು ಉಸ್ತುವಾರಿ ಆಡಳಿತದಲ್ಲಿ ಮುನ್ನಡೆಸಲು ಆಹ್ವಾನಿಸಲಾಗಿದೆ” ಎಂದು ಅಧ್ಯಕ್ಷ ಮ್ಯಾಟರೆಲ್ಲಾ ಅವರ ವಕ್ತಾರ ತಿಳಿಸಿದ್ದಾರೆ.

ಕೊರೊನಾ ಸೋಂಕಿನ ಆರಂಭದಲ್ಲಿ ಸೋಂಕನ್ನು ನಿರ್ವಹಿಸಿದ ಮೊದಲ ಯುರೋಪಿಯನ್ ದೇಶ ಇಟಲಿ. ಆದರೆ, ನಂತರದ ದಿನಗಳಲ್ಲಿ ಸೋಂಕಿನ ಹಾವಳಿ ಹೆಚ್ಚಾಗಲಾರಂಭಿಸಿತು. ಪ್ರತಿದಿನ ಕೊರೊನಾ ಸಾವುಗಳ ಪ್ರಮಾಣ 400ಕ್ಕೆ ಏರಿಕೆ ಆಗಿತ್ತು. ಆರ್ಥಿಕತೆಯು ಕುಸಿತ ಕಂಡಿತ ಕಂಡಿತ್ತು.

ಈಗಲೂ. ದೇಶದ ಕೆಲವು ಭಾಗಗಳು ಭಾಗಶಃ ಲಾಕ್‌ಡೌನ್‌ ಆಗಿವೆ. ವ್ಯಾಕ್ಸಿನೇಷನ್ ಕಾರ್ಯಕ್ರಮವು ನಿಧಾನವಾಗಿದೆ. ಕೊರೊನಾ ದಿಂದ ಸುಮಾರು 85.000 ಜನರು ಸಾವನ್ನಪ್ಪಿದ್ದಾರೆ.

ಈ ಹಿನ್ನೆಲೆಯಲ್ಲಿ ಇಟಲಿ ಸಂಸತ್ತು ಪ್ರಧಾನಿ ವಿರುದ್ಧ ಅಸಮಾಧಾನಗೊಂಡಿದ್ದು, ಪ್ರಧಾನ ಮಂತ್ರಿ ಕಾಂಟೆ ಅವರು ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ: ಟ್ರಂಪ್ ಆದೇಶ ರದ್ದು: ಮಿಲಿಟರಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೂ ಅವಕಾಶ ಕೊಟ್ಟ ಬೈಡೆನ್!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights