ಟ್ರಂಪ್ ಆದೇಶ ರದ್ದು: ಮಿಲಿಟರಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೂ ಅವಕಾಶ ಕೊಟ್ಟ ಬೈಡೆನ್!

ಲೈಂಗಿಕ ಅಲ್ಪಸಂಖ್ಯಾತರಿಗೆ ಮಿಲಿಟರಿಯಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ನಿಷೇಧಿಸಿ ಟ್ರಂಪ್ ಆಡಳಿತಾವಧಿಯಲ್ಲಿ ಜಾರಿಗೆ ತರಲಾಗಿದ್ದ ಪೆಂಟಗನ್ ನೀತಿಯನ್ನು ರದ್ದುಪಡಿಸುವ ಆದೇಶಕ್ಕೆ ನೂತನ ಅಧ್ಯಕ್ಷ ಜೋ ಬಿಡನ್ ಸೋಮವಾರ ಸಹಿ ಹಾಕಿದ್ದಾರೆ. ಈ ಮೂಲಕ ಅಮೆರಿಕಾದ ಮಿಲಿಟರಿಯಲ್ಲಿ ಟ್ರಾನ್ಸ್‌ ಜೆಂಡರ್‌ ಸಮುದಾಯದವರೂ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಲಿಂಗ ತಾರತಮ್ಯದ ಆಧಾರದಲ್ಲಿ ಯಾವುದೇ ಸೇವಾ ಸಿಬ್ಬಂದಿಗಳನ್ನು ಮಿಲಿಟರಿಯಿಂದ ಹೊರಹಾಕುವಂತಿಲ್ಲ. ಎಲ್ಲಾ ಅರ್ಹ ಅಮೆರಿಕನ್ನರು ತಮ್ಮ ದೇಶಕ್ಕೆ ಸಮವಸ್ತ್ರದಲ್ಲಿ ಸೇವೆ ಸಲ್ಲಿಸಲು ಅನುವು ಮಾಡಿಕೊಡುತ್ತಿದ್ದೇವೆ ಎಂದು ಬೈಡೆನ್‌ ಹೇಳಿದ್ದಾರೆ.

ಹಿಂದಿನ ನೀತಿಯಡಿಯಲ್ಲಿ ಲಿಂಗತ್ವದ ಆಧಾರ ಮೇಲೆ ಸೇವೆಯಿಂದ ವಂಚಿತರಾದರನ್ನು- ನಿರಾಕರಿಸಲ್ಪಟ್ಟವರ ದಾಖಲೆಗಳನ್ನು ಮರುಪರಿಶೀಲನೆ ನಡೆಸಿ, ಅವರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಹೊಸ ನೀತಿಯಲ್ಲಿ ಹೇಳಲಾಗಿದೆ.

“ಯುನೈಟೆಡ್ ಸ್ಟೇಟ್ಸ್ ಮಿಲಿಟರಿಯಲ್ಲಿ ಸೇವೆ ಸಲ್ಲಿಸಲು ಬಯಸುವ ಮತ್ತು ಸೂಕ್ತವಾದ ಮಾನದಂಡಗಳನ್ನು ಪೂರೈಸಬಲ್ಲ ಎಲ್ಲರಿಗೂ ಅವಕಾಶ ಸಿಗಬೇಕು. ಲಿಂಗಾಧಾರಿತವಾಗಿ ಅವಕಾಶ ವಂಚಿತರಾದವರಿಗೆ ಹೊಸ ನೀತಿಯು ತಾರತಮ್ಯದಿಂದ ಮುಕ್ತಗೊಳಿಸಲು ಸಾಧ್ಯವಾಗುತ್ತದೆ” ಎಂದು ಅಮೆರಿಕಾ ಕಾಂಗ್ರೆಸ್‌ ಹೊಸ ಕಾನೂನಿಗೆ ಸಹಿ ಹಾಕಿದೆ.

ಇದನ್ನೂ ಓದಿ: RSS-BJP ಸಂಪರ್ಕ ಹೊಂದಿರುವವರನ್ನು ಆಡಳಿತದಿಂದ ಹೊರಗಿಟ್ಟ ಬೈಡೆನ್!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights