RSS-BJP ಸಂಪರ್ಕ ಹೊಂದಿರುವವರನ್ನು ಆಡಳಿತದಿಂದ ಹೊರಗಿಟ್ಟ ಬೈಡೆನ್!

ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಅವರ ಆಡಳಿತದಲ್ಲಿ 20 ಭಾರತೀಯ ಅಮೆರಿಕನ್ನರನ್ನು ಪ್ರಮುಖ ಸ್ಥಾನಗಳಿಗೆ ನಾಮನಿರ್ದೇಶನ ಮಾಡಲಾಗಿದೆ. ಈ ಪೈಕಿ 13 ಮಹಿಳೆಯರು ಸ್ಥಾನ ಪಡೆದಿದ್ದಾರೆ. ಆದರೆ ಬೈಡೆನ್ ಪರ ಅಭಿಯಾನದಲ್ಲಿ ಕೆಲಸ ಮಾಡಿದ್ದರೂ ಸಹ ಆರ್‌ಎಸ್‌ಎಸ್-ಬಿಜೆಪಿ ಸಂಪರ್ಕ ಹೊಂದಿರುವವರನ್ನು ಆ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ದಿ ಟ್ರಿಬ್ಯೂನ್‌ ವರದಿ ಮಾಡಿದೆ.

ಮುಖ್ಯವಾಗಿ ಒಬಾಮಾ ಆಡಳಿತದ ಭಾಗವಾಗಿದ್ದ ಸೋನಾಲ್ ಷಾ ಮತ್ತು ಅಮಿತ್ ಜಾನಿ ಅವರರನ್ನು ಬೈಡೆನ್ ನಾಮನಿರ್ದೇಶಿತ ಭಾರತೀಯ-ಅಮೆರಿಕನ್ನರ ಪಟ್ಟಿಗೆ ಸೇರಿಸಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಯೊಂದಿಗಿನ ಸಂಪರ್ಕ ಹೊಂದಿದ್ದರು ಎಂದು ಹಲವು ಸಂಘಟನೆಗಳು ದೂರಿರುವ ಕಾರಣದಿಂದಾಗಿ ಅವರನ್ನು ಹೊರಗಿಡಲಾಗಿದೆ ಎಂದು ವರದಿ ತಿಳಿಸಿದೆ.

ಸೋನಾಲ್ ಷಾ ಮತ್ತು ಅಮಿತ್ ಜಾನಿ
ಸೋನಾಲ್ ಷಾ ಮತ್ತು ಅಮಿತ್ ಜಾನಿ

ಬೈಡೆನ್ ಅವರ ಏಕತೆ ಕಾರ್ಯಪಡೆಯಲ್ಲಿ ಸೇವೆ ಸಲ್ಲಿಸಿರುವ ಸೋನಾಲ್ ಷಾ ಅವರ ತಂದೆ ಬಿಜೆಪಿ-ಯುಎಸ್ಎಯ ಸಾಗರೋತ್ತರ ಸಂಘದ ಅಧ್ಯಕ್ಷರಾಗಿದ್ದರು ಮತ್ತು ಆರ್‌ಎಸ್‌ಎಸ್ ನಡೆಸುತ್ತಿರುವ ಏಕಲ್ ವಿದ್ಯಾಲಯದ ಸ್ಥಾಪಕರಾಗಿದ್ದಾರೆ. ಅಲ್ಲದೆ ಏಕಲ್ ವಿದ್ಯಾಲಯಕ್ಕಾಗಿ ಸೋನಾಲ್ ಷಾ ಹಣವನ್ನು ಸಂಗ್ರಹಿಸಿದ್ದಾರೆ ಎಂಬ ಆರೋಪವಿದೆ.

ಇದನ್ನೂ ಓದಿ: ಜೋ ಬೈಡೆನ್ ಗೆಲುವು : ಅಮೆರಿಕದ ಆತ್ಮಕ್ಕಾಗಿ ನಡೆದ ಚಾರಿತ್ರಿಕ ಹೋರಾಟ

ಜಾನಿ ಅವರು ‘ನೇಮ್ ಬೈಡೆನ್’ ಅಭಿಯಾನದ ‘ಮುಸ್ಲಿಂ ಔಟ್‌ರೀಚ್‌ನ’ ಸಂಯೋಜಕರಾಗಿದ್ದರು. ಆದರೆ ಅವರ ಕುಟುಂಬಕ್ಕೆ ಪಿಎಂ ಮೋದಿ ಮತ್ತು ಇತರ ಬಿಜೆಪಿ ನಾಯಕರೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂದು ವರದಿಯಾಗಿದೆ.

ಆರ್‌ಎಸ್‌ಎಸ್-ಬಿಜೆಪಿ ಸಂಬಂಧ ಹೊಂದಿರುವವರು ಬಿಡೆನ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಏಕೆಂದರೆ ಜಾತ್ಯತೀತ ಭಾರತೀಯ-ಅಮೆರಿಕನ್ ಸಂಸ್ಥೆಗಳು ಅಂತಹ ವ್ಯಕ್ತಿಗಳನ್ನು ಬದಿಗೆ ಸರಿಸುವಂತೆ ಬೈಡನ್ ಅವರ ಪರಿವರ್ತನಾ ತಂಡವನ್ನು ಸತತವಾಗಿ ಒತ್ತಾಯಿಸಿವೆ ಎನ್ನಲಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ ದೇವಯಾನಿ ಖೋಬರ್‌ಗಡೆ ಪ್ರಕರಣದಲ್ಲಿ ಪಾತ್ರವಹಿಸಿದ್ದ ಹಿರಿಯ ರಾಜತಾಂತ್ರಿಕ ಉಜ್ರಾ ಜಯಾ ಅಥವಾ ಸಿಎಎ, ಎನ್‌ಆರ್‌ಸಿ ಮತ್ತು ಕಾಶ್ಮೀರ ಲಾಕ್‌ಡೌನ್ ವಿರುದ್ಧ ಯುಎಸ್‌ನಲ್ಲಿ ಪ್ರತಿಭಟನಾ ರ್ಯಾಲಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಸಮೀರಾ ಫಾಜಿಲಿ ಅವರಂತಹ ವ್ಯಕ್ತಿಗಳನ್ನು ಬೈಡೆನ್ ತಂಡ ಹೊಂದಿದೆ ಎಂದು ದಿ ಟ್ರಿಬ್ಯೂನ್‌ ವರದಿ ಮಾಡಿದೆ.

ಇದನ್ನೂ ಓದಿ: ಮುಸ್ಲಿಮರಿಗೆ ಮುಕ್ತ ಅವಕಾಶ;ಮೊದಲ ದಿನವೇ ಹಲವು ಬದಲಾವಣೆ ತಂದ ಜೋ ಬೈಡನ್‌!

ಇದನ್ನೂ ಓದಿ: ಟ್ರಂಪ್ ಮತ್ತು ಬಿಜೆಪಿ ಬೆಂಬಲಿಗರಿಗೆ ವ್ಯತ್ಯಾಸವಿಲ್ಲ; BJP ಸೋತರೆ ಇವರೂ ಹಾಗೆ ವರ್ತಿಸುತ್ತಾರೆ: ಮಮತಾ ಬ್ಯಾನರ್ಜಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “RSS-BJP ಸಂಪರ್ಕ ಹೊಂದಿರುವವರನ್ನು ಆಡಳಿತದಿಂದ ಹೊರಗಿಟ್ಟ ಬೈಡೆನ್!

  • January 23, 2021 at 10:52 pm
    Permalink

    Alige byden hindu virodi antha aythu

    Reply

Leave a Reply

Your email address will not be published.

Verified by MonsterInsights